ಸರ್ಕಾರ ಅಭಿವೃದ್ದಿಗೆ ನೀಡಿರುವ ಹಣ ಸದುಪಯೋಗವಾಗಲಿ : ಶಾಸಕ ವೆಂಕಟರಮಣಪ್ಪ
ಪಾವಗಡ : ಸರ್ಕಾರ ವಿವಿಧ ಯೋಜನೆಗಳ ಮೂಲಕ ಬರಪೀಡಿತ ಪಾವಗಡ ತಾಲೂಕಿನ ಅಭಿವೃದ್ದಿಗೆ ನೀಡುತ್ತಿರುವ ಅನುದಾನಗಳನ್ನು ಸದುಪಯೋಗ ಮಾಡಿಕೊಂಡು ಜನರಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಬುಧವಾರ ಪಟ್ಟಣದ ಪುರಸಭೆಯಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪುರಸಭೆಯಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ, ಸರ್ಕಾರದಿಂದ ಬಂದ ಅನುದಾನಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಪುರಸಭೆ ಅಧಿಕಾರಿಗಳು ರ್ನಿಕ್ಷö್ಯತೆ ತೋರುತ್ತಿರುವುದು ಎದ್ದು ಕಾಣುತ್ತಿದ್ದೆ ಎಂದು ಎಚ್ಚರಿಕೆ ನೀಡಿದರು.
ಪುರಸಭೆಗೆ ಮುಖ್ಯಮಂತ್ರಿ ನಗರೋತ್ತಾನ ಯೋಜನೆಯಡಿ ಹತ್ತು ಕೋಟಿ ರೂಪಾಯಿ ಮಂಜೂರಾಗಿದ್ದು ಅದನ್ನು ಬಳಸಿ ಪುರಸಭೆಯ 23 ವಾರ್ಡ್ಗಳಲ್ಲಿ ಮಾಡಬೇಕಾಗಿರುವ ಅಭಿವೃದ್ದಿ ಕಾರ್ಯಗಳ ಕುರಿತು ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಯಿತು.
ಪುರಸಭೆಗೆ ಬರಬೇಕಾದ ಆದಾಯದ ಮೂಲಗಳಿಂದ ಹಣ ಸಂಗ್ರಹಿಸಲು ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳು ಟ್ರಾಕ್ಟರ್ ನಿರ್ವಹಣೆ, ಜೆಸಿಬಿ ರಿಪೇರಿ, ಮೋಟರ್ ಪಂಪ್ ರಿಪೇರಿ ಸೇರಿದಂತೆ ಹಲವು ಖರ್ಚುಗಳ ಸುಳ್ಳು ಬಿಲ್ಲುಗಳನ್ನು ಮಾಡಿ ಅನುದಾನವನ್ನು ದುರುಪಯೋಗ ಮಾಡಿದ್ದಾರೆಂದು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಜಾಹ್ನವಿ, ಮುಖ್ಯಾಧಿಕಾರಿ ಅರ್ಚನಾ, ಸದಸ್ಯರಾದ ಸುದೇಶ್ ಬಾಬು, ರಾಜೇಶ್, ನಾಗಭೂಷಣರೆಡ್ಡಿ, ಇಮ್ರಾನ್, ಮಣಿ, ವಿಜಯ್ ಕುಮಾರ, ವೆಂಕಟರಮಣಪ್ಪ, ನಾಮಿಸಿ ಸದಸ್ಯರಾದ ರವಿ, ಲೋಕೇಶ್ ರಾವ್, ಶೇಖರ್ ಬಾಭು ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.