ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 5 ಕೋಟಿಗೂ ಹೆಚ್ಚಿನ ವೆಚ್ಚದ ಕಾಮಗಾರಿಗಳಿಗೆ ಸಚಿವ ಜೆ.ಸಿ,ಮಾಧುಸ್ವಾಮಿ ಚಾಲನೆ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ 5 ಕೋಟಿಗೂ ಹೆಚ್ಚಿನ ವೆಚ್ಚದ ಸೇತುವೆಗಳು ಹಾಗು ಸಿಸಿರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲು ಕಾನೂನು ಹಾಗು ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ,ಮಾಧುಸ್ವಾಮಿ ಗುದ್ದಲಿ ಪೂಜೆ ನೆರವೇಸಿದರು.
ಹಾಗಲವಾಡಿ ಕಡೆಯಿಂದ ಬರುವ ರಸ್ತೆಯಿಂದ ಕಂದಿಕೆರೆ ಹೋಬಳಿಯ ಕೆಂಪರಾಯನ ಹಟ್ಟಿಗೆ ಸೇರುವ ರಸ್ತೆಯ ಮದ್ಯ ಭಾಗದಲ್ಲಿ 90 ಲಕ್ಷ ವೆಚ್ಚದ ಸೇತುವೆ ನಿರ್ಮಾಣದ ಕಾಮಗಾರಿ,
ಹುಳಿಯಾರು ಹೋಬಳಿ ಅಣೇನಹಳ್ಳಿ ಗ್ರಾಮದ ಹತ್ತಿರ 90ಲಕ್ಷ ವೆಚ್ಚದ ಸೇತುವೆ ನಿರ್ಮಾಣದ ಕಾಮಗಾರಿ,ನುಲೇನೂರು ಗ್ರಾಮದಿಂದ ದಸೂಡಿ ಕಡೆ ಹೋಗುವ ರಸ್ತೆಯಲ್ಲಿ 60ಲಕ್ಷ ವೆಚ್ಚದ ಸೇತುವೆ ನಿರ್ಮಾಣದ ಕಾಮಗಾರಿ, ಸಂಗೇನಹಳ್ಳಿಯಿAದ ವಡ್ಡರಹಟ್ಟಿಗೆ ಬರುವ ರಸ್ತೆಯ ನಿರ್ಮಾಣಕ್ಕೆ 90ಲಕ್ಷ ವೆಚ್ಚದ ಕಾಮಗಾರಿ,
ಪೋಚುಕಟ್ಟೆ ತಿಮ್ಮನಹಳ್ಳಿ ರಸ್ತೆಯಿಂದಗ್ರಹಾರಕ್ಕೆ ಹೋಗುವ ರಸ್ತೆ ನಿರ್ಮಾಣಕ್ಕೆ 10ಲಕ್ಷ ಬರಕನಾಳ್ ಸರ್ಕಾರಿ ಪ್ರಾರ್ಥಮಿಕ ಪಾಠಶಾಲೆಗೆ 10 ಲಕ್ಷ ವೆಚ್ಚದ ತಡೆಗೋಡೆ ನಿರ್ಮಾಣದ ಕಾಮಗಾರಿ,ದಸೂಡಿ ರಸ್ತೆಯಿಂದ ಚಿತ್ರದೇವರಹಟ್ಟಿ ಮಖಾಂತರ ಹಿರಿಯೂರುಗಡಿಯ ವರೆಗೆ 90ಲಕ್ಷ ವೆಚ್ಚದ ಸೇತುವೆ ಮತ್ತು ರಸೆ ನಿರ್ಮಾಣದ ಕಾಮಗಾರಿ, ಹಂದನಕೆರೆ ಹೋಬಳಿಯ ದಗ್ಗೇನಹಳ್ಳಿ ಭರಣಾಪುರ ರಸ್ತೆಯಲ್ಲಿ ಸೇತುವೆ ಮತ್ತು ನಿರ್ಮಾಣಕ್ಕೆ 60ಲಕ್ಷ ವೆಚ್ಚದ ಕಾಮಗಾರಿ ಕೆಲಸಕ್ಕೆ ಗುದ್ದಲಿ ಪೂಜೆಯನ್ನು ನರವೇರಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಉಪಾಧ್ಯಕ್ಷ ನಿರಂಜನ್ ಮೂರ್ತಿ,ತಾ.ಪಂ.ಸದಸ್ಯ ಕೇಶವಮೂರ್ತಿ,ಬರಕನಾಳ್ ವಿಶ್ವನಾಥ್ ಸೇರಿದಂತೆ ಮುಂತಾದ ಮುಖಂಡರುಗಳು ಇದ್ದರು.