ಕೊರಟಗೆರೆ

ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿ : ಇಬ್ಬರ ಸಾವು

ಕೊರಟಗೆರೆ : ಚಾಲಕನ ಅವೈಜ್ಞಾನಿಕ ಚಾಲನೆಯಿಂದ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಪಂ ವ್ಯಾಪ್ತಿಯ ಕಾಶಾಪುರ ರಸ್ತೆಯ ತಿರುವಿನಲ್ಲಿ ಸರಕಾರಿ ಬಸ್ ಬೇವಿನ ಮರಕ್ಕೆ ಡಿಕ್ಕಿ ಹೊಡೆದ  ಪರಿಣಾಮ ಸ್ಥಳದಲ್ಲೇ ಬಿಕ್ಷುಕ ಮೃತಪಟ್ಟಿದ್ದು,ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.
ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು-ಮಧುಗಿರಿ-ಶಿರಾ ಮಾರ್ಗವಾಗಿ ತಿರುಪತಿಗೆ  ತೆರಳುತ್ತಿದ್ದ ಸರಕಾರಿ ಕೊರಟಗೆರೆ ತಾಲೂಕಿನ ಕಾಶಾಪುರ ತಿರುವಿನಲ್ಲಿ ಅಪಘಾತವಾಗಿದೆ.
ಗೌರಿಬಿದನೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಸರ್ಕಾರಿ ಬಸ್ ಕಾಶಾಪುರ ತಿರುವಿನಲ್ಲಿ ಚಾಲಕ ನಿಯಂತ್ರಣ ತಪ್ಪಿ ಬೇವಿನ ಮರಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿದೆ. ಕಾಶಪುರದ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಬಿಕ್ಷುಕನ ಮೇಲೆ ಬಸ್ ಹರಿದು ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ,ನಂತರ ಅದೇ ವೇಗವಾಗಿ ತೆರಳಿದ ಬಸ್ ರೈತ ಗೋಪಾಲನಾಯ್ಕನ ಮೇಲೆಯು ಹರಿದು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ. ಸರಕಾರಿ ಬಸ್ಸಿನ ಚಾಲಕ ಅಪಘಾತ ಆದ ಕೊಡಲೇ ಸ್ಥಳದಿಂದ ಪರಾರಿ ಆಗಿದ್ದಾನೆ. ನಿರ್ವಾಹಕನ ಕೈಕಾಲು ಮುರಿದಿದ್ದು, ಹಾಗೆಯೇ ಬಸ್ಸಿನಲ್ಲಿದ್ದ 10 ಜನರಿಗೆ ಗಾಯವಾಗಿ ಕೊರಟಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೊರಟಗೆರೆ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker