ಕೊರಟಗೆರೆ

ಕೃಷಿ ವಿಜ್ಞಾನ ಕೇಂದ್ರದ ನಿಕ್ರಾ ಯೋಜನೆ ರೈತರ ಜೀವನ ಮಟ್ಟ ಸುಧಾರಿಸುತ್ತದೆ : ಶಾಸಕ ಡಾ.ಜಿ.ಪರಮೇಶ್ವರ್

ಕೊರಟಗೆರೆ : ತಾಲೂಕಿನ ಡಿ.ನಾಗೇನಹಳ್ಳಿ ಗ್ರಾಮದಲ್ಲಿಕೆಂದ್ರ ಕೃಷಿ ವಿಜ್ಞಾನ ಕೇಂದ್ರದ ನಿಕ್ರಾ ಯೋಜನೆಯನ್ನು ಹಿರೇಹಳ್ಳಿಯ ಕೆ.ವಿ.ಕೆ ವಿಜ್ಞಾನಿಗಳು ಮತ್ತು ನಮ್ಮರೈತರು ಶ್ರಮವಹಿಸಿ ಯಶಸ್ವಿಗೊಳಿಸಿರುವುದು ಒಣ ಬೇಸಾಯ ಪದ್ದತಿಯಲ್ಲಿ ರೈತರ ಜೀವನ ಮಟ್ಟ ಸುಧಾರಿಸುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ತಾಲೂಕಿನ ಕೋಳಾಲ ಹೋಬಳಿಯ ಡಿ.ನಾಗೇನಹಳ್ಳಿ ಗ್ರಾಮದಲ್ಲಿ ಭಾರತೀಯ ಕೃಷಿ ವಿಜ್ಞಾನ ಕೇಂದ್ರದ ನಿಕ್ರಾಯೋಜನೆಗೆ ಎಲೆರಾಂಪುರ ಗ್ರಾಮ ಪಂಚಾಯ್ತಿಗೆ ಕೇಂದ್ರ ಸರ್ಕಾರದ ಉತ್ತಮ್ ಪಂಚಾಯತ್ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಡಿ ನಾಗೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಯೋಜನೆಯ ಸಮಗ್ರ ಅಭಿವೃದ್ದಿಯನ್ನು ಪರಿಶೀಲಿಸಿ ಮಾತನಾಡಿ, 2010 ರಲ್ಲಿ ಪ್ರಾರಂಭವಾದ ಈ ಯೋಜನೆಇಲ್ಲಿಯವರೆಗು ಬಹಳ ವ್ಯವಸ್ಥಿತವಾಗಿ ನಡೆದಿದೆ. ಹಿರೇಹಳ್ಳಿಯ ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿಗಳು ಈ ಯೋಜನೆಯನ್ನು ಉತ್ತಮವಾಗಿ ಸಾಕಾರ ಮಾಡಿದ್ದಾರೆ.ನಮ್ಮರೈತರು ಇದನ್ನು ಒಪ್ಪಿಕೊಂಡು ಯಶಸ್ವಿಗೊಳಿಸಿದ್ದಾರೆ.ಈ ಯೋಜನೆ ಮಳೆಯಾದಾರಿತ ಖುಷ್ಕಿ ಬೇಸಾಯದ ರೈತರಿಗೆ ಅತ್ಯುತ್ತಮವಾಗಿ ಉಪಯುಕ್ತವಾಗಿದೆ.ಒಣಪ್ರದೇಶದಲ್ಲಿ ಲಾಭದಾಯಕ ಗೋಡಂಬಿ, ನಲ್ಲಿ, ಹುಣಸೆ ಸೇರಿದಂತೆ ಇತರೆ ವಾಣಿಜ್ಯಬೆಳೆಗಳನ್ನು ಸಹ ಇಳಿಜಾರಿನ ಮಳೆನೀರನ್ನು ಉಪಯೋಗಿಸಿಕೊಂಡು ಬೆಳೆದಿರುವುದು ರೈತನಜೀವನ ಮಟ್ಟವನ್ನು ಸುಧಾರಿಸುತ್ತದೆ. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಿ ಉಪಯೋಗ ಮಾಡಿಕೊಂಡಿದ್ದು ಕಡಿಮೆ ಮಳೆಯಲ್ಲಿಯು ಸಹ ನೀರನ್ನು ಸಂರಕ್ಷಣೆ ಮಾಡಿ ಬೇಸಾಯ ಮಾಡಿದ್ದು ಸುಮಾರು 85 ಕೃಷಿ ಹೋಂಡಾಗಳನ್ನು ಹಲವು ಚೆಕ್‌ಡ್ಯಾಂ, ನಾಲಾ ಬದು, ಹೂಳೆತ್ತುವಿಕೆ, ಕೊಳವೆಬಾವಿ ಅಭಿವೃದ್ದಿ ಸೇರಿದಂತೆ ಮಾಡಿರುವ ಈ ಕೆಲಸಗಳು ನಿಜಕ್ಕು ಅಕಾಲಿಕ ಮಳೆಯನ್ನು ಕಡಿಮೆ ನೀರಿನ ಪ್ರಮಾಣವನ್ನು ತಡೆದುಕೊಳ್ಳುವ ಕೃಷಿ ಪದ್ದತಿಯಾಗಿದ್ದು, ಕೊರಟಗೆರೆ ವಿಧಾನ ಸಭಾಕ್ಷೇತ್ರ ಸೇರಿದಂತೆ ಬಯಲು ಸೀಮೆಯ ಮಳೆಯಾಧಾರಿತ ಪ್ರದೇಶಗಳ ಒಣ ಬೇಸಾಯಕ್ಕೆ ಈ ಯೋಜನೆ ವಿಸ್ತಾರವಾಗಬೇಕಿದ್ದು,ರಾಜ್ಯ ಸರ್ಕಾರವು ಇದಕ್ಕೆ ಕೈಜೋಡಿಸಬೇಕಾಗಿದೆ. ಯೋಜನೆ ಯಶಸ್ವಿಗೆ ಕೃಷಿ ವಿಜ್ಞಾನಿಗಳು, ರೈತರು ಗ್ರಾಮ ಪಂಚಾಯತಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಹಿರೇಹಳ್ಳಿಯ ಕೆ.ವಿ.ಕೆ ವಿಜ್ಞಾನಿ ಹಾಗೂ ಆಡಳಿತಾಧಿಕಾರಿ ಲೋಗಾನಂದನ್ ಮಾತನಾಡಿ, ಈ ಯೋಜನೆ ಜಲಾನಯನ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡಿದ್ದು 2010 ರಲ್ಲಿ ನಮ್ಮಇಲಾಖೆಯ ಡಿ.ಜಿರವರು ಉದ್ಘಾಟನೆ ಮಾಡಿದ್ದು ಯಶಸ್ವಿಗೆ ಎಲ್ಲರು ಕಾರಣರಾಗಿದ್ದಾರೆ.ಈ ಯೋಜನೆಯಲ್ಲಿ 2.00 ಲಕ್ಷ ಕ್ಯೂಬಿಕ್ ಲೀಟರ್ ನೀರನ್ನು ಸಂರಕ್ಷಿಸಲಾಗಿದೆ.ಯೋಜನೆಯಲ್ಲಿ ಕಡಿಮೆ ನೀರಿನ ವಾಣಿಜ್ಯ ಬೆಳೆಗಳ ಕೃಷಿಯೊಂದಿಗೆ ನೂತನ ಸಂಶೋಧನೆಯ ಭತ್ತ,ತೊಗರಿ, ರಾಗಿ ಬೆಳೆಗಳನ್ನು ಬೆಳೆಯಲಾಗಿದೆ. ಕಷ್ಟಕರ ವಾತವರಣದಲ್ಲಿಯು ಸಹ ಕೃಷಿ ಮಾಡುವ ಸಂಶೋಧನೆಯ ಬೆಳೆಗಳನ್ನು ಬೆಳೆಯಲು ಆದ್ಯತೆ ನೀಡಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಡಿ ನಾಗೇನಹಳ್ಳಿಯ ರೈತರಗ್ರಾಮ ವಿಕಾಸ ಚೇತನಕ್ಕೆ ಅರ್ಧಎಕರೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1 ಎಕರೆ ಹಾಗೂ ಸ್ತ್ರೀ ಶಕ್ತಿ ಕೇಂದ್ರಕ್ಕೆ ಅರ್ಧಎಕರೆ ಜಮೀನನ್ನು ಮಂಜೂರು ಮಾಡಿಸಿ ಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೆ.ವಿ.ಕೆಯ ಮಣ್ಣು ತಜ್ಞ ವಿಜ್ಞಾನಿ ರಮೇಶ್, ತೋಟಗಾರಿಕಾ ವಿಜ್ಞಾನಿ ಪ್ರಶಾಂತ್, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ದೊಡ್ಡಸಿದ್ದಯ್ಯ, ಸಹಾಯಕ ಕೃಷಿ ನಿರ್ದೇಶಕ ನಾಗರಾಜು, ಅರಣ್ಯಾಧಿಕಾರಿಗಳಾದ ಸುರೆಶ್, ನವನೀತ್, ತೋಟಗಾರಿಕೆಇಲಾಖೆಯ ಪುಷ್ಪಲತಾ, ವೈಧ್ಯಾಧಿಕಾರಿ ಕೋಕಿಲಾ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಬಿ.ಎಸ್, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆ ಶಂಕರ್, ಕೋಡ್ಲಹಳ್ಳಿ ಅಶ್ವಥನಾರಾಯಣ, ಯುವಕಾಂಗ್ರೆಸ್‌ಅಧ್ಯಕ್ಷ ವಿನಯ್‌ಕುಮಾರ್, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಜಯಮ್ಮ, ಗ್ರಾ.ಪಂ ಅಧ್ಯಕ್ಷೆಗಂಗಾದೇವಿ, ಉಪಾಧ್ಯಕ್ಷ ಉಮೇಶ್‌ಚಂದ್ರ, ಸದಸ್ಯರುಗಳಾದ ಸರ್ವೇಶ್, ಚಂದ್ರಯ್ಯ, ರಂಗಶಾಮಯ್ಯ, ಕೆ.ಎಲ್ ಮಂಜುನಾಥ್‌ ರೈತ ಮುಖಂಡರುಗಳಾದ ಮಹೇಶ್, ಯೋಗೇಶ್,ಲೋಕೇಶ್, ರಾಕೇಶ್, ಅರವಿಂದ್ ಸೇರಿದಂತೆಇತರರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker