ಮಧುಗಿರಿ

ಗ್ರಾಮಸಭೆ : ಶ್ರಾವಂಡನಹಳ್ಳಿ ಗ್ರಾಮದ ದಲಿತರನ್ನು ಉರಿಬಿಸಿಲಲ್ಲಿ ನೆಲದ ಮೇಲೆ ಕೂರಿಸಿ ದರ್ಪ ಮೆರೆದ ಪಿಡಿಓ ಶಿವಾನಂದ್ 

ಮಧುಗಿರಿ: ತಾಲ್ಲೂಕಿನ ದೊಡ್ಡಮಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರಾವಂಡನಹಳ್ಳಿ ಗ್ರಾಮದ ನೆಲದ ಮೇಲೆ ಕೂರಿಸಿ ಗ್ರಾಮಸಭೆಯನ್ನ ಸದಸ್ಯರು ಬಹಿಷ್ಕರಿಸಿದ ಘಟನೆ ನಡೆದಿದೆ.
ಪಂಚಾಯಿತಿಗೆ ಸಂಬಂದಿಸಿದ ಪ್ರತಿ ಗ್ರಾಮದಲ್ಲಿಯೂ ಕುಡಿಯುವ ನೀರು,ಬೀದಿದೀಪಗಳು,ಚರಂಡಿಗಳ ಸ್ವಚ್ಚತೆ,ಗ್ರಾಮ ನೈರ್ಮಲ್ಯ, ಸ್ವಚ್ಚತೆಯ ಬಗ್ಗೆ ಹೆಚ್ಚಿನ ಆಧ್ಯತೆ ನರೇಗಾ ಯೋಜನೆಗಳ ಮೂಲಕ ಸಿಮೆಂಟ್‌ರಸ್ತೆ, ಚರಂಡಿಗಳ ಅಭಿವೃದ್ಧಿ, ಕೆರೆಗಳ ಅಭಿವೃದ್ದಿ,ಕೃಷಿ ಹೊಂಡ,ಬದು ನಿರ್ಮಾಣ ಹಾಗೂ ಇತರೆ ಕೆಲಸ ಕಾರ್ಯಗಳ ಮೂಲಕ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ,ಗ್ರಾಮಗಳಲ್ಲಿನ ಸ್ಥಳೀಯ ನಾಗರೀಕರು ತಮ್ಮ ಗ್ರಾಮಗಳಲ್ಲಿ ಪಂಚಾಯಿತಿವತಿಯಿಂದ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಗಮನಹರಿಸಿ ಸರ್ಕಾರದ ಯೋಜನೆಗಳು ಸದ್ಭಳಕೆ ಮಾಡಿಕೊಳ್ಳುವ ಉದ್ದೇಶದಿಂದ ಸರ್ಕಾರವು ಈ ಗ್ರಾಮಸಭೆ/ ವಾರ್ಡ್ ಸಭೆಗಳನ್ನು ಪ್ರಾರಂಭಿಸಿತು ಆದರೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶಿವಾನಂದ್ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಸದಸ್ಯರ ಗಮನಕ್ಕೂ ತರದೆ ಏಕಾಏಕಿ  ಶ್ರಾವಂಡನಹಳ್ಳಿಗೆ ತೆರಳಿ ಅಧ್ಯಕ್ಷರನ್ನು ಕರೆಯಿಸಿಕೊಂಡು ಗ್ರಾಮಸಭೆ ಮಾಡಲು ಮುಂದಾಗಿದ್ದಾರೆ ಈ ಅಧಿಕಾರಿಯ ಕಾರ್ಯವೈಖರಿಯನ್ನು ಕಂಡ ಗ್ರಾ.ಪಂ.ಸದಸ್ಯ ಗಂಗಾಧರ್ ನಾಯ್ಕ್  ವಿರೋಧ ವ್ಯಕ್ತಪಡಿಸಿ ನಮ್ಮ ಮೆಂಬರ್ ಗಳಿಗೆ ಇದರ ಬಗ್ಗೆ ಮಾಹಿತಿ ನೀಡದೆ ಬಂದಿರುವುದು ತಪ್ಪು ಹೀಗೆ ಇದ್ದಕ್ಕಿದ್ದಂತೆ ಸಭೆಗಳು ನಡೆಸಿದರೆ ನಮ್ಮ ಜನರು ಕೂಲಿನಾಲಿ ಮಾಡಲು ಹೋಗಿರುತ್ತಾರೆ ನೀವು ಅಧಿಕಾರಿಗಳಾದವರೂ ಸರ್ಕಾರದ ನೀತಿ ನಿಯಮಗಳಂತೆ ಸಭೆ ನಡೆಸಬೇಕು ಎಂದು ತಾಕೀತು ಮಾಡಿದಾಗ ಅಧಿಕಾರಿಗೆ ಏನೂ ಮಾತನಾಡಬೇಕೆಂದು ತಿಳಿಯದೆ ಇವರ ಮಾತುಕೇಳಿ ಕಂಗಲಾಗಿದ್ದಾರೆ ನಂತರ ಅಧ್ಯಕ್ಷರು,ಸದಸ್ಯರು ಚರ್ಚಿಸಿ ಮುಂದಿನ ಗ್ರಾಮಸಭೆಯ ದಿನವನ್ನು ಮುಂಚಿತವಾಗಿ ತಿಳಿಸುವ ಜೊತೆಗೆ ಸಾರ್ವಜನಿಕರಿಗೆ ಪ್ರಚಾರ ಪಡಿಸಿ ಗ್ರಾಮಸಭೆ ಮಾಡುವಂತೆ ತೀರ್ಮಾನಿಸಿದ್ದಾರೆ.
ಪಿಡಿಓ ನಡೆಗೆ ಖಂಡನೆ: ಗ್ರಾಮಸಭೆಗೆ ಬಂದಿದ್ದ ದಲಿತರನ್ನು ಉರಿಯುವ ಬಿಸಿಲಿನಲ್ಲಿ ನೆಲದ ಮೇಲೆ ಕೂರಿಸಿರುವುದು ಸರಿಯಲ್ಲ ಇದನ್ನು ನೋಡಿದರೆ ಈ ಅಧಿಕಾರಿ ದರ್ಪ ಎಂತಹುದೆಂದು ಅರ್ಥವಾಗುತ್ತದೆ.
ಗ್ರಾಮಸಭೆ ಎಂದರೆ ಸಾರ್ವಜನಿಕರಿಗೆ ಕೂರಲು ಕುರ್ಚಿ ,ಶಾಮಿಯಾನ ಇಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಮಾಡಿ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳ ದೂರನ್ನು ಆಲಿಸಲು ಎಲ್ಲಾ ಅವಕಾಶಗಳನ್ನು ಮಾಡಿಕೊಡುವುದು ಅಧಿಕಾರಿಗಳ ಮೊದಲ ಕರ್ತವ್ಯ ಅದು ಬಿಟ್ಟು ಪಶುಗಳ ರೀತಿ ದಲಿತರನ್ನು ತನ್ನ ಎದುರೇ ರಸ್ತೆಯಲ್ಲಿ ಕೂರಿಸಿರುವುದನ್ನು ನೋಡಿದರೆ ಇದು ರಾಜ್ಯದಲ್ಲಿಯೇ ಎಲ್ಲೂ ನಡೆದಿಲ್ಲವೇನೂ ಅಂತಹ ಅವಮಾನಕರ ಘಟನೆಯಾಗಿದೆ ಎನ್ನಬಹುದು ,ಇನ್ನೂ ತಾಲೂಕಿನಲ್ಲಿ ತುಂಬಿಕೊಂಡಿರುವ ದಲಿತ ಸಂಘಟನೆಗಳ ಹೊರಾಟಗಾರರಿಗೆ ಇದು ಕಣ್ಣಿಗೆ ಬಿದ್ದಿಲ್ಲವೇ ಕೆಲ ಸಭೆಗಳಲ್ಲಿ ನಾವು ಹೋರಾಟಗಾರರು ಎಂದು ಬೀಗುವ ಸಂಘಟಕರು ಎಲ್ಲಿದ್ದಾರೆ ಇಂತಹ ಘಟನೆ ನಡೆದರೂ ಸಹ ದಲಿತಪರ ಸಂಘಟನೆಗಳು ಎಲ್ಲಿ ಹೋದವು ಎಂದು ಗ್ರಾಮೀಣ ಭಾಗದ ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನೂ  ಪಿಡಿಓ ಶಿವಾನಂದ್ ಮಾಡಿರುವ ಈ ಘನಕಾರ್ಯಕ್ಕೆ ತಾ.ಪಂ.ಇಓ ಯಾವ ಕ್ರಮ ಜರುಗಿಸುತ್ತಾರೋ…!
ಪ್ರತೀ ಆರು ತಿಂಗಳಿಗೊಮ್ಮೆ ಗ್ರಾಮಸಭೆ ನಡೆಯುತ್ತದೆ. ಈ ಸಭೆಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಗಬೇಕಾದ ಕಾಮಗಾರಿ, ಅಭಿವೃದ್ಧಿ ಕಾರ್ಯಗಳ ಕುರಿತು ಗ್ರಾಮಸ್ಥರ ಸಮ್ಮುಖದಲ್ಲಿ ಚರ್ಚಿಸಿ ಕ್ರಿಯಾಯೋಜನೆ ತಯಾರಿಸಲಾಗುತ್ತದೆ.  ತಮ್ಮ ಗ್ರಾಮದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿ ಗ್ರಾಮಸ್ಥರಿಗೂ ಸರಿಯಾಗಿ ತಲುಪಬೇಕು ಮಾತ್ರವಲ್ಲ ಮಾಹಿತಿ ಪಡೆದುಕೊಳ್ಳಲೂ ಗ್ರಾಮಸ್ಥರಿಗೆ ಪಂಚಾಯ್ತಿ ಮಟ್ಡದ ಅಧಿಕಾರಿಗಳು ಸ್ಪಂದಿಸುವ ಜೊತೆಗೆ ಉತ್ತಮ ಬಾಂಧವ್ಯವನ್ನು ಬೆಳಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಯಾವೊಬ್ಬ ಅಧಿಕಾರಿಗಳು ಜನಸಾಮಾನ್ಯರ ಬಳಿ ಇಂತಹ ಕೆಲಸಗಳ ಮಾಡುತ್ತಿಲ್ಲ
ಎನ್ನುವುದು ಹೆಚ್ಚಿನ ಗ್ರಾಮಸ್ಥರ ಅಭಿಪ್ರಾಯ ಇನ್ನೂ ಮುಂದಾದರು ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಪಂಚಾಯ್ತಿ ಸಿಇಓ ರವರು ನಮ್ಮ ತಾಲೂಕಿನ ಅಭಿವೃದ್ಧಿಗಾಗಿ ಪಂಚಾಯಿತಿ ಅಧಿಕಾರಿ ವರ್ಗದವರಿಗೆ  ಕರ್ತವ್ಯ ಪಾಠದ ಪೀಠಿಕೆ ಹೇಳಿಕೊಟ್ಟು ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವರೆ ಎಂದು ಕಾದು ನೋಡಬೇಕಿದೆ….?

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker