ಕುಣಿಗಲ್
ಗುತ್ತಿಗೆದಾರನ ಅಡ್ಡವಾಗಿರುವ ಕುಣಿಗಲ್ ಪಿಡಬ್ಲ್ಯೂಡಿ ಕಛೇರಿ…? ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಕುಣಿಗಲ್ : ಸುಸ್ಥಿತಿಯಲ್ಲಿರುವ ಸರ್ಕಾರಿ ಹಳೆ ಲೋಕೋಪಯೋಗಿ ಕಚೇರಿ ಗುತ್ತಿಗೆದಾರರೊಬ್ಬರ ಕೆಲಸ ಮಾಡುವ ಕಾರ್ಮಿಕರ ಅಡ್ಡವಾಗಿ ಮಾರ್ಪಾಟಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಸಂಬಂಧ ಸಾರ್ವಜನಿಕರು ಪತ್ರಿಕೆಯೊಂದಿಗೆ ಮಾತನಾಡಿ ಬಿ ಎಂ ರಸ್ತೆಯಲ್ಲಿರುವ ಹೊಸ ಲೋಕೋಪಯೋಗಿ ಕಚೇರಿಯ ಹಿಂಭಾಗ ಹಳೆ ಕಚೇರಿ ಇದೆ ಈ ಕಟ್ಟಡ ಇನ್ನೂ ಸುಸ್ಥಿತಿಯಲ್ಲಿದೆ ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಇನ್ನೂ ಕೆಲವು ವರ್ಷಗಳ ಕಾಲ ಬಾಳಿಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಸಮರ್ಪಕವಾಗಿ ನಿರ್ವಹಣೆ ಇಲ್ಲದೆ ಕಟ್ಟಡದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿವೆ ಇದಲ್ಲದೆ ಸರ್ಕಾರಿ ಕಚೇರಿಯನ್ನು ಖಾಸಗಿ ಗುತ್ತಿಗೆದಾರ ಗುತ್ತಿಗೆ ಪಡೆದಿರುವ ತಮ್ಮರಸ್ತೆ ಕಾಮಗಾರಿ ಮಾಡಲು ಬರುವ ಕಾರ್ಮಿಕರ ವಾಸದ ಮನೆ ಯನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ಈ ಕಚೇರಿಯ ಪಕ್ಕದಲ್ಲೇ ಇರುವ ಪಂಚಾಯತ್ ರಾಜ್ ಎಂಜಿನಿಯರಿಂಗ್ ಕಚೇರಿ ಮಳೆ ಬಂದರೆ ಸೋರುತ್ತದೆ ಮತ್ತು ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ ದುಸ್ಥಿತಿಯಲ್ಲಿದೆ ಆದ್ದರಿಂದ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರು ನಮ್ಮ ಕಚೇರಿಯನ್ನು ದುರಸ್ತಿ ಪಡಿಸುವ ವರೆವಿಗೂ ಲೋಕೋಪಯೋಗಿ ಹಳೇ ಕಚೇರಿಯನ್ನು ನಮ್ಮ ಕಚೇರಿಗೆ ಬಾಡಿಗೆ ನೀಡುವಂತೆ ನವೆಂಬರ್ 7 ರಂದು ಕುಣಿಗಲ್ ಪಟ್ಟಣದ ಲೋಕೋಪಯೋಗಿ ಇಲಾಖೆಗೆ ಪತ್ರ ವ್ಯವಹಾರ ಮಾಡಿದ್ದರೂ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರು ಪಂಚಾಯತ್ ರಾಜ್ ಇಲಾಖೆಗೆ ಬಿಟ್ಟುಕೊಡದೆ ಖಾಸಗಿ ಪ್ರಥಮ ದರ್ಜೆ ಗುತ್ತಿಗೆದಾರನಿಗೆ ಹಳೆಯ ಲೋಕೋಪಯೋಗಿ ಕಚೇರಿಯನ್ನು ಬಿಟ್ಟುಕೊಟ್ಟಿರುವುದರಿಂದ ಕಾರ್ಮಿಕರು ತಮ್ಮ ವಾಸದ ಮನೆಯನ್ನಾಗಿ ಮಾರ್ಪಡಿಸಿಕೊಂಡಿರುವುದು ದುರಂತವೇ ಸರಿ ಇದಲ್ಲದೆ ಈತನ ಕಾಮಗಾರಿಗೆ ಬಳಸುವ ವಾಹನಗಳು ಸಂಜೆಯಾಗುತ್ತಿದ್ದಂತೆ ಸರ್ಕಾರಿ ಹಳೆ ಲೋಕೋಪಯೋಗಿ ಕಚೇರಿಯ ಸುತ್ತಮುತ್ತ ನಿಲ್ಲುವುದು ಸಾಮಾನ್ಯವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರರು ಸುಸ್ಥಿತಿಯಲ್ಲಿರುವ ಹಳೆಯ ಲೋಕೋಪಯೋಗಿ ಕಚೇರಿಯನ್ನು ದುಸ್ಥಿತಿಯಲ್ಲಿರುವ ಪಂಚಾಯತ್ ರಾಜ್ ಎಂಜಿನಿಯರ್ ಕಚೇರಿಗೆ ಬಿಡಿಸಿ ಕೊಡುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.