ಕೊರಟಗೆರೆ

ತೀತಾ ಜಲಾಶಯದಲ್ಲಿ ಬೋಟಿಂಗ್ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ: ಮಾಜಿ ಡಿಸಿಎಂ ಪರಮೇಶ್ವರ್

ಕೊರಟಗೆರೆ : ತಾಲ್ಲೂಕಿನ ಪ್ರಸಿದ್ದ ಯಾತ್ರಾಸ್ಥಳವಾದ ಗೊರವನಹಳ್ಳಿ ಸಮೀಪದ ತೀತಾಡ್ಯಾಂನಲ್ಲಿ ಪ್ರವಾಸಿಗರಿಗಾಗಿ ಬೋಟಿಂಗ್‌ ಯೋಜನೆ ಹಾಗೂ ಕೆರೆಯಅಭಿವೃದ್ದಿಗೆ ಪ್ರವಾಸೋಧ್ಯಮ ಇಲಾಖೆಯಿಂದ ಅನುದಾನ ತರಲಾಗುವುದು ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ತಾಲ್ಲೂಕಿನ ಕಸಬಾ ಹೋಬಳಿಯ ತೀತಾಕೆರೆಯಕೋಡಿಗೆ ಬಾಗಿನ ಅರ್ಪಿಸಿ ಮಾತನಾಡಿ ಕ್ಷೇತ್ರದಲ್ಲಿ ಹಲವಾರು ಪ್ರಸಿದ್ದ ಯಾತ್ರಾ ಸ್ಥಳಗಳಿವೆ. ಈಗಾಗಲೇ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಆ ಸ್ಥಳಗಳಲ್ಲಿ ಮಾಡಲಾಗಿದ್ದು, ಯಾತ್ರಾ ಸ್ಥಳಗಳಿಗೆ ಹೊಂದಿಕೊಂಡಿರುವ ಡ್ಯಾಂ ಮತ್ತು ಕೆರೆಗಳಿಗೆ ಪ್ರವಾಸೋಧ್ಯಮ ಇಲಾಖೆಯಿಂದ ಮತ್ತೊಷ್ಟು ಅನುದಾನ ತಂದು ಅಭಿವೃದ್ದಿ ಪಡಿಸಲಾಗುವುದು. ಹಲವು ವರ್ಷಗಳ ಬಳಿಕ ತೀತಾಜಲಾಶಯವುತುಂಬಿ ಹರಿದಿದ್ದು, ರಾಜ್ಯದ ಪ್ರಸಿದ್ದ ಯಾತ್ರಾ ಸ್ಥಳ ಗೊರವನಹಳ್ಳಿಗೆ ಹೊಂದಿಕೊಂಡಿದೆ. ಇದನ್ನು ಹೆಚ್ಚಿನದಾಗಿ ಅಭಿವೃದ್ದಿಗೊಳಿಸಿದರೆ ಪ್ರವಾಸಿಗರಿಗೆ ಆಕರ್ಷಣೆಯಾಗಲಿದ್ದು ಸ್ಥಳಿಯರಿಗೆ ಆರ್ಥಿಕ ವರಮಾನವಾಗಲಿದೆ ಎಂದರು.
ತೀತಾಜಲಾಶಯದ ಗಂಗಾ ಪೂಜೆಗೆತೀತಾ ಸೇರಿದಂತೆ, ಸುತ್ತಮುತ್ತಲ ಗ್ರಾಮದ ಹತ್ತು ದೇವರುಗಳ ಉತ್ಸವದೊಂದಿಗೆ ಸಾವಿರಾರುಗ್ರಾಮಸ್ಥರು ಈ ಪವಿತ್ರಧಾರ್ಮಿಕ ಕಾರ್ಯಕ್ಕೆ ಸಮಾನ ಭಾವನೆ ಮತ್ತು ಜಾತ್ಯಾತೀತಾವಾಗಿ ಒಗ್ಗೂಡಿ ಆಗಮಿಸಿರುವುದು ಅತ್ಯಂತ ಸಂತಸತಂದಿದೆ. ಎಲ್ಲಾ ಗ್ರಾಮಸ್ಥರ ಮುಖಂಡರ ಸಹಕಾರದಿಂದ ಈ ಗಂಗಾಪೂಜೆ ಯಶಸ್ವಿಯಾಗಿದ್ದು, ವಿಶೇಷವಾದ ಧಾರ್ಮಿಕ ಕಾರ್ಯವಾಗಿದೆ.ಮುಂಬರುವ ದಿನಗಳಲ್ಲಿ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಬೆಳೆ ಸಮೃದ್ದಿಯಾಗಿ ಜನರು ನೆಮದ್ದಿಯಿಂದ ಬಾಳುವುದರೊಂದಿಗೆ ರೈತರ ಬದುಕು ಅಸನಾದರೆ ರಾಜ್ಯದಲ್ಲಿ ಅರ್ಧದಷ್ಟು ಸಮಸ್ಯೆ ಬಗೆಹರಿದಂತೆ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವಥನರಾಯಣ್, ಅರಕೆರೆ ಶಂಕರ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಬಿ.ಎಸ್, ಯುವ ಕಾಂಗ್ರೆಸ್‌ ಅಧ್ಯಕ್ಷ ವಿನಯ್‌ಕುಮಾರ್, ಮಹಿಳಾಧ್ಯಕ್ಷೆ ಜಯಮ್ಮ, ಗ್ರಾ.ಪಂ ಸದಸ್ಯರಾದ ಸುಭಾಷ್, ಹರೀಶ್, ಮಂಜುನಾಥ್, ಮುಖಂಡರುಗಳಾದ ಜಗದೀಶ್, ಮಂಜುನಾಥ್, ಮೈಲಾರಪ್ಪ, ಅರವಿಂದ್ ಸೇರಿದಂತೆ ಹಲವರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker