ಕೊರಟಗೆರೆ

ಕರಡಿ ಕೊಂದು ಮಾಂಸ ತಿಂದವರ ಬಂಧನ

ಕೊರಟಗೆರೆ:  ಕರಡಿ ಮಾಂಸ ಮನೆಯಲ್ಲಿಟ್ಟುಕೊಂಡಿದ್ದ ಆರೋಪಿ ಸೇರಿದಂತೆ ಈ ಕೃತ್ಯಕ್ಕೆ ಸಹಕರಿಸಿದ 6 ಮಂದಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಿ.ಎನ್.ದುರ್ಗ ಹೋಬಳಿ ಗೌಜಗಲ್ಲು ಗ್ರಾಮದ ಚಿಕ್ಕಬಸವಯ್ಯ ಎಂಬುವರ ಮನೆ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದಾಗ 1 ಕೆಜಿ 50 ಗ್ರಾಂ ಕರಡಿ ಮಾಂಸ ಪತ್ತೆಯಾಗಿದೆ. ಈ ಮಾಂಸ ವನ್ಯಜೀವಿದೆಂದು ಪತ್ತೆಹಚ್ಚಲು ಮನೆಸುತ್ತಮುತ್ತ  ಕೆಲವು ಸ್ಥಳಗಳನ್ನು ಪರಿಶೀಲಿಸಿದಾಗ ಅದೇ ಗ್ರಾಮದ ಗೋವಿಂದಪ್ಪ ಎಂಬುವರ ಜಮೀನಿನ ಬಂಡೆ ಮೇಲೆ ಕರಡಿ ಕತ್ತರಿಸಿ ಮಾಂಸ ಬೇರ್ಪಡಿಸಿರುವ ಕೃತ್ಯ ನಡೆಸಿರುವುದು ಪತ್ತೆಯಾಗಿದೆ. ಚಿಕ್ಕಬಸವಯ್ಯ ಮೊಬೈಲ್ ಪರಿಶೀಲಿಸಿದ್ದು ಈ ಕೃತ್ಯಕ್ಕೆ ಸಹಕರಿಸಿದ ಐವರ ಮಾಹಿತಿ ದೊರೆತು ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ‌. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು
ಚಿಕ್ಕಬಸವಯ್ಯ ಸೇರಿ 6 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರ್ ಎಫ್ ಒ ಎಚ್.ನಾಗರಾಜು, ಅರಣ್ಯ ರಕ್ಷಕರಾದ ಮಂಜುನಾಥ್. ಕೆ.ಆರ್.ರಘು ಹಾಗೂ ಸಿಬ್ಬಂದಿಯವರಿಂದ ಆರೋಪಿಗಳನ್ನು ಬಂಧಿಸುವಲ್ಲಿ

ಯಶಸ್ವಿಯಾಗಿದ್ದಾರೆ

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker