ಕುಣಿಗಲ್
ಹಗಲಿರುಳು ಎನ್ನದೆ ಬಿಜೆಪಿ ಅರ್ಭ್ಯರ್ಥಿ ಗೆಲುವಿಗೆ ಶ್ರಮವಹಿಸಿ : ಸಚಿವ ಜೆ.ಸಿ.ಮಾಧುಸ್ವಾಮಿ
ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪುರಸಭೆ ಸದಸ್ಯರ ಪೂರ್ವಭಾವಿ ಸಭೆ
ಕುಣಿಗಲ್ : ಕೇವಲ ಚಪ್ಪಾಳೆ ಮತ್ತು ಭಾಷಣದಿಂದ ಮತ ಪಡೆಯಲು ಸಾಧ್ಯವಿಲ್ಲ ಹಗಲಿರುಳು ಎನ್ನದೆ ಪ್ರಾಮಾಣಿಕವಾಗಿ ಚುನಾವಣೆ ಕೆಲಸ ಮಾಡಿದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಜೆ ಸಿ ಮಾಧುಸ್ವಾಮಿ ತಿಳಿಸಿದರು.
ತಾಲ್ಲೂಕಿನ ಗವಿಮಠದ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಿಎಲ್ ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ನೇತೃತ್ವದಲ್ಲಿ ವಿಧಾನಪರಿಷತ್ ಚುನಾವಣೆಗೆ ಮತ ಚಲಾಯಿಸುವ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪುರಸಭೆ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಪುರಸಭೆ ಸದಸ್ಯರುಗಳು ಮತ ಹಾಕಿದರೆ ಸಾಲದು ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ವರ ಮನಸ್ಸನ್ನುಯಾವ ರೀತಿಯಲ್ಲಾದರೂ ಪರಿವರ್ತನೆ ಮಾಡಿ ಮತ ಪಡೆದರೆ ಮಾತ್ರ ವಿಧಾನ ಪರಿಷತ್ ಚುನಾವಣೆಯನ್ನು ಗೆಲ್ಲಬಹುದು ಆದ್ದರಿಂದ ತೋರ್ಪಡೆಗೆ ಚುನಾವಣೆ ಮಾಡುವುದನ್ನು ಬಿಟ್ಟು ಮತ್ತು ಅವರಿವರನ್ನು ಟೀಕೆ ಮಾಡುವುದನ್ನು ಬಿಟ್ಟು ಪಕ್ಷದ ಗೆಲುವಿಗೆ ಹಗಲಿರುಳು ದುಡಿದು ವಿಧಾನ ಪರಿಷತ್ ಅಭ್ಯರ್ಥಿ ಯಾದ ಲೋಕೇಶ್ ರವರನ್ನು ಹೆಚ್ಚು ಬಹುಮತದೊಂದಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸುವ ಎಲ್ಲ ಸರ್ವ ಪ್ರಯತ್ನಗಳನ್ನು ಮಾಡಬೇಕೆಂದು ಕಿವಿಮಾತು ಹೇಳಿದರು ಈಗಾಗಲೇ ಕುಣಿಗಲ್ ಕ್ಷೇತ್ರದಲ್ಲಿ ಡಿ ಕೃಷ್ಣಕುಮಾರ್ 3ಬಾರಿ ಸೋಲನ್ನು ಅನುಭವಿಸಿ ನೊಂದಿದ್ದಾರೆ ಆ ನೋವು ನಮಗೂ ಅರ್ಥವಾಗುತ್ತದೆ ಈ ವಿಧಾನ ಪರಿಷತ್ ಚುನಾವಣೆ ಗೆಲ್ಲುವುದರ ಮೇಲೆ ಡಿ ಕೃಷ್ಣಕುಮಾರ್ ರವರ ರಾಜಕೀಯ ಭವಿಷ್ಯ ಅಡಗಿದೆ ಎಂಬುದನ್ನು ನೀವು ಸೂಕ್ಷ್ಮವಾಗಿ ಅರಿಯಬೇಕು ಎಂದ ಅವರು ಈ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾದ ಲೋಕೇಶ್ ರವರೇ ಗೆಲುವು ಸಾಧಿಸುವ ದೃಢ ನಿರ್ಧಾರವನ್ನು ತೆಗೆದುಕೊಂಡು ಡಿ ಕೃಷ್ಣಕುಮಾರ್ ನೇತೃತ್ವದಲ್ಲಿ ಸರ್ವ ಪ್ರಯತ್ನಗಳನ್ನು ನೀವುಗಳು ಒಗ್ಗಟ್ಟಾಗಿ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ಲೋಕೇಶ್, ತುರುವೇಕೆರೆ ಶಾಸಕ ಮಸಾಲೆ ಜಯರಾಮ್, ಮಾಜಿ ಶಾಸಕರಾದ ಬಿ ಸುರೇಶ್ ಗೌಡ, ಮುನಿರಾಜು, ಹಾಗೂ ಪಕ್ಷದ ಮುಖಂಡೆ ಸುಜಾತಾ ಚಂದ್ರಶೇಖರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಂ, ವಕೀಲ ನಾರಾಯಣ ಗೌಡ ಒಳಗೊಂಡಂತೆ ಮತ್ತಿತರರು ಉಪಸ್ಥಿತರಿದ್ದರು.