ಸಾಮಾಜಿಕ ನ್ಯಾಯಕ್ಕಾಗಿ ಜಯಕರ್ನಾಟಕ ಸಂಘಟನೆ ಹೋರಾಡುತ್ತಿದೆ : ಸಾಹಿತಿ ಡಾ.ಕವಿತಾ ಕೃಷ್ಣ
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಹಾಗೂ ರಂಗೋಲಿಸ್ಪರ್ದೆ
ತುಮಕೂರು: ಜಯಕರ್ನಾಟಕ ಜನಪರ ವೇದಿಕೆಯು ರಾಜ್ಯಾದ್ಯಂತ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಜನಪರವಾದಂತಹ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಮಾನವೀಯ ನೆಲೆಗಟ್ಟಿನ ಆಯಾಮದಲ್ಲಿ ಸೇವೆಸಲ್ಲಿಸುತ್ತಿರುವ ಸಂಘಟನೆಗೆ ಹೆಚ್ಚು ಶಕ್ತಿಸಿಗಲೆಂದು ಸಾಹಿತಿ ಡಾ.ಕವಿತಾ ಕೃಷ್ಣ ಆಶಿಸಿದರು.
ನಗರದ ಗೋಕುಲ ಬಡಾವಣೆ ಕೆ.ಎನ್.ರಾಜಣ್ಣ ವೃತ್ತದಲ್ಲಿ ಜಯಕನಾಟಕ ಜನಪರ ವೇದಿಕೆಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ, ಶಿವ ಶೈಕ್ಷಣಿಕ ಆಶ್ರಮದ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ, ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಹಾಗೂ ಕರೋನಾ ವಾರಿಯರಸ್ಸ್ಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಾಹಿತಿಗಳು, ಸಮಾಜಮುಖಿ ಕೆಲಸಗಳನ್ನು ಮಾಡಲು ಹಣಕ್ಕಿಂತ ಮನಸ್ಸು ಮುಖ್ಯ. ಹಣವಿರುವವರೆಲ್ಲರೂ ಇಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಿಗಬಹುದಾದ ಎಲ್ಲಾ ಸೌಕರ್ಯಗಳನ್ನು ತಲುಪಿಸುವಂತಹ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಸಂಘಟನೆಗೆ ನಮ್ಮೆಲ್ಲರ ಸಹಾಯ ಮತ್ತು ಸಹಕಾರವಿರುತ್ತದೆ, ಮುಂದೆಯೂ ಇಂತಹ ಸಮಾಜಮುಖಿ ಕೆಲಸಗಳು ಮುಂದುವರಿಯಲೆಂದು ಹಾರೈಸಿದರು.
ಮಾಜಿ ಶಾಸಕ ರಫೀಕ್ ಅಹಮದ್ ಮಾತನಾಡಿ, ಕನ್ನಡ ನಾಡು-ನುಡಿ, ಜಲದ ವಿಷಯಕ್ಕೆ ಬಂದಾಗ ಜಯಕರ್ನಾಟಕ ಸಂಘಟನೆಯು ಯಾರೊಂದಿಗೂ ರಾಜಿಯಾಗದೇ ತನ್ನ ನಿಲುವಿಗೆ ಬಧ್ದರಾಗಿದ್ದುಕೊಂಡು ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಆಶ್ರಮದ ಮಕ್ಕಳಿಗೆ ನೀಡುತ್ತಿರುವ ಪ್ರೋತ್ಸಾಹ, ಅವಶ್ಯಕತೆ ಇರುವವರಿಗೆ ಮಾಡುತ್ತಿರುವ ಸಹಾಯ ಹಾಗೂ ಸಲ್ಲಬೇಕಾದ ಗೌರವಗಳನ್ನು ನೀಡಿ ಸಮಾಜದೊಂದಿಗೆ ಹೆಜ್ಜೆ ಹಾಕುತ್ತಿರುವ ಸಂಘಟನೆಗೆ ಪ್ರೋತ್ಸಾಹವನ್ನು ಕೊಡುವುದು ನಮ್ಮೆಲ್ಲರ ಕರ್ತವ್ಯವೆಂದರು.
ಸಂಘಟನೆಯ ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ ಮಾತನಾಡಿ, ಜನರಿಂದ ಜನರಿಗಾಗಿಯೇ ನಮ್ಮ ಸಂಘಟನೆಯು ಸ್ಥಾಪಿತಗೊಂಡಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನು ಸಿಗಬೇಕೆಂಬ ಉದ್ದೇಶದಿಂದ ನಮ್ಮ ಸಂಘಟನೆಯ ಕಾರ್ಯಕರ್ತರು ಕೆಲಸಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇನ್ನು ಮುಂದೆಯೂ ಇಂತಹದೇ ಕೆಲಸಗಳನ್ನು ಹೆಚ್ಚೆಚ್ಚು ಮಾಡಿಕೊಂಡು ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇವೆಂದರು.
ಮೇಯರ್ ಕೃಷ್ಣಪ್ಪ, ಇಕ್ಬಾಲ್ ಅಹಮದ್, ಕನ್ನಡ ಸೇನೆಯ ಧನಿಯಕುಮಾರ್, ಸಂಘಟನೆಯ ರಾಜ್ಯ ಉಪಾಧ್ಯಕ್ಷ ಆತ್ಮಾನಂದ, ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಕಾರ್ಯದರ್ಶಿ ರಾಘವೇಂದ್ರ, ಪ್ರವೀಣ್ ಕುಮಾರ್ ಶೆಟ್ಟಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಶ್ರೀಧರ್, ಉಪಾಧ್ಯಕ್ಷ ಬಸವರಾಜು, ಆಟೋ ಘಟಕದ ಅಧ್ಯಕ್ಷ ನಾಗೇಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಜಿಲ್ಲಾ ಪದಾಧಿಕಾರಿಗಳಾದ ಇಮ್ರಾನ್, ಯೂನಸ್, ಪ್ರವೀಣ್ ಕುಮಾರ್ ಶಿಂದೆ, ತಾಲ್ಲೂಕು ಅಧ್ಯಕ್ಷರಾದ ಬಿ.ಟಿ.ಕುಮಾರ್, ವೆಂಕಟೇಶ್, ಶಿವಕುಮಾರ್, ಸಿದ್ದೇಶ್, ನಗರಾಧ್ಯಕ್ಷ ಸಚಿನ್, ಮುಖಂಡರುಗಳಾದ ಪ್ರಸನ್ನ ಕುಮಾರ್, ನಾಗಣ್ಣ ಮತ್ತು ಪ್ರದೀಪ್ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.
ರಂಗೋಲಿ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಗಳಿಸಿದರವಿಗೆ 10001ರೂ ದ್ವಿತೀಯ ಬಹುಮಾನ 5001ರೂಗಳ ಬಹುಮಾನ ನೀಡಲಾಯಿತು.