ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಗೆಲುವಿಗೆ ಪ್ರಮಾಣಿಕ ಪ್ರಯತ್ನ : ವಾಲೆಚಂದ್ರಯ್ಯ
ಕೊರಟಗೆರೆ : ತುಮಕೂರು ವಿಧಾನ ಪರಿಷತ್ ಚುಣಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ರಾಜೇಂದ್ರರ ಗೆಲುವಿಗೆ ನಾವೆಲ್ಲಾರು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಮಾಜಿ ನಗರಸಭಾ ಉಪಾದ್ಯಕ್ಷ ,ದಲಿತ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ವಾಲೆಚಂದ್ರಯ್ಯ ತಿಳಿಸಿದರು.
ಅವರು ಪಟ್ಟಣದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ ಆರ್.ರಾಜೇಂದ್ರರವರು ಪಕ್ಷದ ಹಿರಿಯ ನಾಯಕರುಗಳಾದ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಡಾ.ಜಿ.ಪರಮೇಶ್ವರ ಸೇರಿದಂತೆ ತುಮಕೂರಿನ ಎಲ್ಲಾ ನಾಯಕರುಗಳ ಆಶೀರ್ವಾದದಿಂದ ಆಭ್ಯರ್ಥಿಯಾಗಿದ್ದಾರೆ, ಅವರ ತಂದೆ ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣನವರಂತೆ ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿದ್ದು, ಕ್ರಿಪ್ಕೋ ರಾಷ್ರೀಯ ಉಪಾದ್ಯಕ್ಷರಾಗಿ ಡಿಸಿಸಿಬ್ಯಾಂಕ್ ನಿರ್ದೇಶಕರಾಗಿ ಟಿಎಪಿಸಿಎಂಎಸ್ ಅದ್ಯಕ್ಷರಾಗಿ ರೈತರಿಗೆ ಬಡವರಿಗೆ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಇತಂಹ ವ್ಯಕ್ತಿಯನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿದರೆ ಸಾರ್ವಜನಿಕವಾಗಿ ಜನರಿಗೆ ಬಡವರಿಗೆ ದಲಿತರಿಗೆ ಹೆಚ್ಚಿನ ಸೇವೆ ದೊರೆತಂತ್ತಾಗುತ್ತದೆ ಎಂದರು.
ನಾನು ಮಾದಿಗ ಜನಾಂಗದ ಮುಖಂಡನಾಗಿದ್ದು ಹಲವು ವರ್ಷಗಳಿಂದ ಸಾರ್ವಜನಿಕ ಸೇವೆಯ ಬದುಕಿನಲ್ಲಿ ಇದ್ದೇನೆ. ಜಿಲ್ಲೆಯ ಜನಾಂಗದ ಕಷ್ಟಗಳಿಗೆ ಸ್ಪಂದಿಸಿ ಹೋರಾಟ ಮಾಡುತ್ತಿದ್ದೇನೆ, ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ಭಾರಿ ಸ್ವರ್ಧಿಸಿದ್ದೇನೆ,ಈಗ ಕಾಂಗ್ರೆಸ್ ಮುಖಂಡನಾಗಿ ತುಮಕೂರು ಜಿಲ್ಲಾದ್ಯಂತ ಓಡಾಡಿ ಮತದಾರರ ಅದರಲ್ಲು ದಲಿತ ಮತದಾರರ ಮನ ಒಲಿಸಿ ಆರ್.ರಾಜೇಂದ್ರ ಪರವಾಗಿ ಮತ ಯಾಚುಸುತ್ತೇನೆ ಎಂದ ಅವರು ಆರ್.ರಾಜೇಂದ್ರರವರು ಅವರ ತಂದೆಯಂತೆ ದಲಿತರಿಗೆ ಹಿಂದುಳಿದ ವರ್ಗದವರಿಗೆ ಅಲ್ಪಸಂಖ್ಯಾತರಿಗೆ ಎಲ್ಲಾ ವರ್ಗದವರಿಗೆ ನ್ಯಾಯ ಒದಗಿಸಲ್ಲಿದ್ದಾರೆ ಆದ್ದರಿಂದ ಅವರ ಗೆಲವು ಅಗತ್ಯ ಎಂದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ದಲಿತ ಮುಖಂಡರುಗಳಾದ ಶಿವರಾಮಯ್ಯ ಮಲಪನಹಳ್ಳಿ ನಾಗೇಶ್ ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.