ತುಮಕೂರು

ಇಂದು ಅಟವೀ ಮಠದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ಗೆ ಅಟವೀಶ್ರೀ ಪ್ರಶಸ್ತಿ ಪ್ರಧಾನ

ತುಮಕೂರು : ಇತಿಹಾಸ ಪ್ರಸಿದ್ದ ಚಿಕ್ಕತೊಟ್ಲುಕೆರೆಯ ಶ್ರೀಅಟವೀ ಸುಕೇತ್ರದ ಮೂಲ ಗುರುಗಳಾದ ಶ್ರೀಅಟವಿ ಸ್ವಾಮೀಜಿ ಅವರು 121ನೇ ವರ್ಷದ ಪುಣ್ಯ ಸ್ಮರಣೆ,ಲಕ್ಷ ದೀಪೋತ್ಸವ ಹಾಗೂ ಆಟವಿಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನವೆಂಬರ್ 19ರ ಶುಕ್ರವಾರ ಹಮ್ಮಿಕೊಂಡಿರುವುದಾಗಿ ಅಟವಿ ಸುಕ್ಷೇತ್ರದ ಶ್ರೀ ಶಿವಲಿಂಗ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ನವೆಂಬರ್ 19ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು,ಬೆಳಗ್ಗೆ 11 ರಿಂದ 1:30 ರವರೆಗೆ ಶ್ರೀ ಅಟವೀ ಶಿವಲಿಂಗ ಮಹಾಸ್ವಾಮಿಜೀಗಳ ದಿವ್ಯ ಸಾನಿಧ್ಯ ಹಾಗು ಶ್ರೀಕುಮಾರ ದಿಂಗಾಲೇಶ್ವರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ 243ನೇ ಮಾಸಿಕ ಶಿವಾನುಭವ ಅಂಗೈಯಲ್ಲಿ ಅನುಭಾವ ಗೋಷ್ಠಿ ನಡೆಯಲಿದೆ.ಗವಿ ಬೆಟ್ಟದಹಳ್ಳಿ ಮಠದ ಶ್ರೀಚಂದ್ರಶೇಖರ ಮಹಾ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರಶಿವಾಚಾರ್ಯ ಮಹಾಸ್ವಾಮೀಜಿ,ಬೆಳ್ಳಾವಿಯ ಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಮಹಾಸ್ವಾಮೀಜಿ, ಶ್ರೀಗುದ್ಧುಗೇಶ್ವರ ಮಹಾಸ್ವಾಮೀಜಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಸಂಜೆ 4:30 ಗಂಟೆಗೆ ಕಾರ್ತೀಕ ಲಕ್ಷ ದೀಪೋತ್ಸವ ಹಾಗೂ ಅಟವೀಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದ್ದು,ಶ್ರೀಕುಮಾರ ದಿಂಗಾಲೇಶ್ವರ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ, ಕೊರಟಗೆರೆ ಶಾಸಕರು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರಿಗೆ ಅಟವೀಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ವಿಧಾನಸಭೆಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದು, ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಮೇಲ್ಮೆನೆ ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ್, ತುಮಕೂರು ಸಂಸದರಾದ ಜಿ.ಎಸ್.ಬಸವರಾಜು, ಮತ್ತು ಶಾಸಕರಾದ ಜಿ.ಬಿ.ಜೋತಿಗಣೇಶ್ ಅವರುಗಳು ಭಾಗವಹಿಸುವರು. ಸಂಜೆ 7 ಗಂಟೆಗೆ ಕಾರ್ತೀಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ.ನಂತರ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಸ್ವಾಮೀಜಿ ವಿವರ ನೀಡಿದರು.

ಅಟವೀ ಸುಕ್ಷೇತ್ರದ ಗೋ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿರುವ ಅಟವೀ ಮಠಕ್ಕೆ ಶ್ರೀಅಟವಿ ಶಿವಲಿಂಗಸ್ವಾಮೀಜಿಗಳು ಪೀಠಾಧ್ಯಕ್ಷರಾದ ನಂತರ ಹಂತ ಹಂತವಾಗಿ ಮಠ ಪ್ರವರ್ಧಮಾನಕ್ಕೆ ಬಂದಿದ್ದು, ಇಂದು ಗೋಶಾಲೆಯ ಜೊತೆಗೆ, ವಿದ್ಯಾಸಂಸ್ಥೆ,ವಿದ್ಯಾರ್ಥಿನಿಲಯಗಳನ್ನು ತೆರೆದು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಒಳಗೊಂಡ ಆಯುರ್ವೇಧ ಆಸ್ಪತ್ರೆ ತೆರೆಯಬೇಕೆಂಬ ಹಂಬಲ ಸ್ವಾಮೀಜಿ ಅವರದ್ದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟಿ.ಬಿ.ಶೇಖರ್, ವೀರಶೈವ, ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್ ಪಟೇಲ್, ರೇಣುಕಾರಾಧ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker