ಕೊರಟಗೆರೆ : ತೋವಿನಕೆರೆ ಸಮೀಪದ ಕುರಂಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಾಸಲಕುಂಟೆ ಗ್ರಾಮದ ಜೆ ಅಭಿಷೇಕ್ ಗೆ ಬೆಂಗಳೂರು ಕೃಷಿ ವಿ.ವಿ ಯವರು ಕೊರಟಗೆರೆ ತಾಲ್ಲೂಕು ಉತ್ತಮ ಯುವ ಕೃಷಿಕ ಎಂದು ಗರ‍್ತಿಸಿ ಕೃಷಿ ಮೇಳದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ತಮ್ಮ ಎರಡು ಎಕರೆ ಜಮೀನಿನಲ್ಲಿ ಹೈನುಗಾರಿಕೆ ಮನೆಗೆ ಬೇಕಾದ ತರಕಾರಿ.ಅಡಕೆ ತೋಟ.ತೆಂಗಿನ ತೋಟ .ಅಗಸೆ ಸೊಪ್ಪು ,ತೊಗರಿ ಸೇರಿದಂತೆ ವಿವಿಧ ರೀತಿಯ ಆಹಾರ ಧಾನ್ಯಗಳ ಬೆಳೆಯಲ್ಲದೆ .ಕೋಳಿ ಸಾಕಾಣಿಕೆಗಾಗಿ ಮೇವನ್ನು ತಾವೇ ಸ್ವತಃ ತಯಾರು ಮಾಡುತ್ತ ಸಮಗ್ರ ಕೃಷಿಗೆ ಉತ್ತಮವಾದ ಉದಾಹರಣೆಯಾಗಿದ್ದಾರೆ.
ಮಧುಗಿರಿ ಕೃಷಿ ಇಲಾಖೆ ಉಪನಿರ್ದೇಶಕರಾದ ದೀಪಾ ಶ್ರೀ . ಕೊರಟಗೆರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜು.ಪಶು ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿದ್ದನಗೌಡ.ರೇಷ್ಮೆ ಇಲಾಖೆಯ ಮುರಳಿ.ವಲಯ ಅರಣ್ಯಾಧಿಕಾರಿ ಸುರೇಶ್.ತೋವಿನಕೆರೆ ರೈತ ಸಂಪರ್ಕ ಕೇಂದ್ರದ ಡಾ.ನರಸಿಂಹಮೂರ್ತಿ ಭೇಟಿ ನೀಡಿ ಜೆ ಅಭಿಷೇಕ್ ನ ಪೋಷಕರಾದ ತಂದೆ ಜಯಣ್ಣ.ತಾಯಿ ನಳಿನಾ ರವರಿಂದ ಮಾಹಿತಿ ಪಡೆದುಕೊಂಡರು.