ಎ.ಸಿ. ಬಿ ಬಲೆಗೆ ಬಿದ್ದ ಸಿ.ಎಸ್.ಪುರ ಪಿ.ಎಸ್.ಐ ಸೋಮಶೇಖರ್ : ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ಮುಂದೆಯೇ ಪಿ.ಎಸ್.ಐ ಸೋಮಶೇಖರ್ ಎಸ್ಕೇಪ್…!!
ಗುಬ್ಬಿ : ತಾಲೂಕು ಸಿ.ಎಸ್.ಪುರ ಠಾಣೆಯ ಪಿ.ಎಸ್.ಐ ಸೋಮಶೇಖರ್.ಎಸ್ ಮತ್ತು ಮುಖ್ಯ ಪೇದೆ ನಯಾಜ್ ಅಹಮ್ಮದ್ ಬಲೆಗೆ ಬಿದ್ದಿದ್ದು ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ತಪ್ಪಿಸಿಕೊಂಡು ಓಡಿ ಹೋದ ಘಟನೆ ಇಂದುನಡೆದಿದೆ.
ಕಳೆದ 22ರಂದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಿ.ಎಸ್.ಪುರ ಠಾಣೆಯಲ್ಲಿ ಚಂದ್ರಣ್ಣ ಅವರ ಮೇಲೆ ದೂರು ದಾಖಲಾಗಿದ್ದು ಇದರ ವಿಚಾರವಾಗಿ ಚಂದ್ರಣ್ಣ ಅವರ ಕ್ವಿಡ್ ಕಾರ್ ಅನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.
ಚಂದ್ರಣ್ಣ ಅವರು ಕೋರ್ಟ್ ನಲ್ಲಿ ಜಾಮೀನು ಪಡೆದಿದ್ದರು ನಂತರ ಕಾರ್ ಅನ್ನು ಬಿಡುಗಡೆ ಮಾಡಲು ಪಿ.ಎಸ್.ಐ ಸೋಮಶೇಖರ್ ಅವರು ಮುಖ್ಯ ಪೇದೆ ನಯಾಜ್ ಅಹಮ್ಮದ್ ಅವರ ಮಧ್ಯಸ್ಥಿಕೆಯಲ್ಲಿ 28 ಸಾವಿರಕ್ಕೆ ವಶ ಪಡಿಸಿಕೊಂಡಿದ್ದ ಕಾರು ಬಿಡುಗಡೆ ಮಾಡಲು ಒಪ್ಪಂದ ಮಾಡಿ 12 ಸಾವಿರ ಮುಂಗಡ ಹಣ ಪಡೆಯಲಾಗಿತ್ತು.
ಬುಧವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಬಾಕಿ ಉಳಿಕೆ ಹಣ 16 ಸಾವಿರ ಪಡೆಯುವ ವೇಳೆ ತುಮಕೂರಿನ ಎಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.