ಟಾಟಾ ಮಹೀಂದ್ರ ಕಾರು ಬೈಕ್ ಗೆ ಡಿಕ್ಕಿ, ಸವಾರರಿಬ್ಬರ ದುರ್ಮರಣ
ತಿಪಟೂರು : ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಬಳುವನೇರಲು ಗ್ರಾಮದ ಹಾಲಿನ ಡೈರಿಯ ಮಾಜಿ ಕಾರ್ಯದರ್ಶಿ ನಾಗಣ್ಣ (65) ಮತ್ತು ಬಿ.ಮುದ್ದೇನಹಳ್ಳಿ ಗ್ರಾಮದ ಚಿದಾನಂದ (55) ಇವರುಗಳು ಕೆಲಸದ ನಿಮಿತ್ತ ಬಳುವನೇರಲು ಗ್ರಾಮದ ಕಡೆಯಿಂದ ತಿಪಟೂರಿಗೆ ಹೋಗುತ್ತಿದ್ದಾಗ ಗೇಟ್ ನಲ್ಲಿ ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಕಾರು (ಟಾಟಾ ಮಹೀಂದ್ರ ) ಗಾಡಿಯು ಒಡೆದ ರಭಸಕ್ಕೆ ಬೈಕ್ ನಲ್ಲಿ ಇದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆಗೆ ಹೊನ್ನವಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಗೇಟ್ ನಲ್ಲಿ ವಾಹನಗಳಿಗೆ ದಂಡ ವಿಧಿಸುತ್ತಿದ್ದು, ದಂಡ ಹಾಕುತ್ತಾರೆಂಬ ಭಯದಿಂದ ಅತಿವೇಗವಾಗಿ ಬಂದ ಕಾರು ಬೈಕ್ ಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸುದ್ದಿ ತಿಳಿದ ಕೂಡಲೇ ಅಕ್ಕಪಕ್ಕದ ಗ್ರಾಮದ ಗ್ರಾಮಸ್ಥರುಗಳು ಗೇಟ್ ನಲ್ಲಿ ಶವಗಳನ್ನಿರಿಸಿ,ಬೃಹತ್ ಪ್ರತಿಭಟನೆ ಮಾಡುತ್ತಿದ್ದು ಈ ಸಾವಿಗೆ ನೇರ ಪೊಲೀಸರೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದು, ಸಂಬಂಧಪಟ್ಟವರನ್ನು ಕೂಡಲೇ ಕೆಲಸದಿಂದ ಅಮಾನತ್ತು ಪಡಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಜಯಲಕ್ಷ್ಮಮ್ಮ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಘಟನೆ ನಡೆದ ಬಳುವನೇರಲು ಗೇಟ್ನಲ್ಲಿ ಪದೇಪದೇ ಇಂತಹ ಪ್ರಕರಣಗಳು ನಡೆಯುತ್ತಿದ್ದು,ಗೇಟ್ ನಲ್ಲಿ 4 ತಾಲ್ಲೂಕುಗಳ ರಸ್ತೆಗೆ ಸಂಪರ್ಕಿಸಲಿದ್ದು,ಇಲ್ಲಿ ಯಾವುದೇ ರಸ್ತೆಗಳಿಗೆ ನಾಮಫಲಕಗಳಾಗಲಿ, ರಸ್ತೆ ವಿಭಜಕ ಗಳಾಗಲೀ ಮತ್ತು ರೋಡ್ ಹಂಪ್ ಇಲ್ಲದೇ ಇರುವುದು ದುರ್ಘಟನೆಗೆ ಕಾರಣವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ..