ತುಮಕೂರು : ಖಾಸಗಿ ಉದ್ಯಮ ಮತ್ತು ಸರ್ಕಾರಿ ಮೀಸಲಾತಿಯಲ್ಲಿ ಕನ್ನಡಿಗರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು, ಗಡಿನಾಡಿನಲ್ಲಿ ಮುಚ್ಚುತ್ತಿರುವ ಕನ್ನಡ ಶಾಲೆಗಳ ಉಳಿವಿಗೆ ಶ್ರಮಿಸುವುದಾಗಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಆರ್ ವಿ ಪುಟ್ಟಕಾಮಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ಚುನಾವಣೆಯಲ್ಲಿ ಮೂರು ದಶಕಗಳಿಂದ ಕನ್ನಡ ಕಟ್ಟುವ ಕೆಲಸ ಮಾಡಿರುವ ನನಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಸಿರಾ ತಾಲ್ಲೂಕು ಅಧ್ಯಕ್ಷನಾಗಿದ್ದಾಗ, ಕಸಾಪ ಗೊತ್ತಿಲ್ಲದ ಜನರ ನಡುವೆ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡು ಕನ್ನಡ ಪಸರಿಸಿದ್ದೇನೆ, ಜನಮಾನಸದಲ್ಲಿ ಉಳಿಸುವ ಕೆಲಸದೊಂದಿಗೆ ಸಿರಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಕಾರಣನಾಗಿದ್ದೇನೆ ಎಂದರು. ಶಿಕ್ಷಕನಾಗಿ, ಒಬ್ಬ ಸಂಘಟಕನಾಗಿ ಮೂರು ದಶಕಗಳಿಂದ ಕನ್ನಡ ಕೆಲಸ ಮಾಡಿ, ಪ್ರೌಢ ಶಾಲಾ ಶಿಕ್ಷಕರ ಕೆಲಸವನ್ನು ಮಾಡಿದ್ದೇನೆ, ಸಹ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರ ನಡುವಿನ ವೇತನ ತಾರತಮ್ಯ ನಿವಾರಿಸಲು ಶ್ರಮವಹಿಸಿದ್ದೇನೆ ಎಂದರು.
ಸರ್ವೋದಯ ಮಂಡಲದ ಅಡಿಯಲ್ಲಿ ಮಹಾತ್ಮ ಗಾಂಧೀಜಿ 150ನೇ ವರ್ಷಾಚರಣೆಯ ಸಂಭ್ರಮದಲ್ಲಿ ಎರಡು ಲಕ್ಷ ಬೆಲೆ ಬಾಳುವ ಪುಸ್ತಕಗಳನ್ನು ಮಕ್ಕಳಿಗೆ ನೀಡಿ, ಮೌಲ್ಯಮಾಪನ ಮಾಡುವ ಆರುನೂರು ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗಿದೆ, ಗಾಂಧೀಜಿ ಅವರ ವಿಚಾರ ತಲುಪಿಸುವ ಕೆಲಸ ಮಾಡಿದ್ದೇನೆ ಎಂದರು.
ಕನ್ನಡ ಪರಿಚಾರಕನಾಗಿ, ಸಾಮಾಜಿಕ ಕಾರ್ಯಕರ್ತನಾಗಿ ರೈಲ್ವೆ ಮತ್ತು ನೀರಾವರಿ ಹೋರಾಟದಲ್ಲಿ ಭಾಗಿಯಾಗಿದ್ದೇನೆ, ಭದ್ರಾ ಮೇಲ್ದಂಡೆ ವಿಚಾರವಾಗಿ ಸಿರಾದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದೇನೆ, ಇದರ ಫಲವಾಗಿ ಈ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಎರಡು ಮೂರು ವರ್ಷಗಳಲ್ಲಿ ನೀರಾವರಿ ಲಭ್ಯವಾಗಲಿದೆ ಎಂದರು.
ಒಮ್ಮೆ ಅಧ್ಯಕ್ಷರಾದವರು ಇನ್ನೊಮ್ಮೆ ಅಧ್ಯಕ್ಷರಾಗಲು ಅವಕಾಶವಿಲ್ಲ, ಕಳೆದ ಬಾರಿ ಮಹಿಳೆಯರಿಗೆ ಆದ್ಯತೆ ನೀಡಿದ್ದೇವು, ಈ ಬಾರಿ ನನ್ನನ್ನು ಆಯ್ಕೆ ಮಾಡಿದರೆ ತಾಲ್ಲೂಕು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಆದ್ಯತೆ ನೀಡುವುದಾಗಕಲಿಯಬೇಕಿದೆ ಎಂದರು.
ಜಿಲ್ಲೆಯಲ್ಲಿರುವ 12.500 ಮತಗಳಿದ್ದು, ಗ್ರಾಮಾಂತರ ಪ್ರದೇಶದವರನ್ನು ಇದುವರೆಗೆ ಅವಕಾಶ ಸಿಕ್ಕಿಲ್ಲ, ಗಡಿಭಾಗದ ನನಗೆ ಆಯ್ಕೆ ಮಾಡಿದರೆ ಗಡಿ ಭಾಗದ ಕನ್ನಡ ಸಮಸ್ಯೆ ಬಗ್ಗೆ ಹರಿಸಬಹುದು ಎಂದು ಹೇಳಿದರು. ಕನ್ನಡ ಭಾಷೆಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅನ್ಯಭಾಷಿಕರು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಿದೆ ಆಗ ಮಾತ್ರ ಕನ್ನಡ ಉಳಿಯಲು ಸಾಧ್ಯವಿದೆ ಈ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಚಾಲಕ ಚಿಕ್ಕೀರಣ್ಣಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಂಡಿತ್ ಜವಹರ್, ಸಿ.ಡಿ.ಚಂದ್ರಶೇಖರ್, ಜಯಣ್ಣ, ಚಿಕ್ಕೀರಣ್ಣಗೌಡ, ಗೆಜ್ಜೆ ಕೃಷ್ಣಮೂರ್ತಿ, ತಾರಾನಾಥ್, ನೇರಲಗುಡ್ಡ ಶಿವಕುಮಾರ್, ಜಯಣ್ಣ, ಪುಟ್ಟಲಿಂಗಯ್ಯ ಸೇರಿದಂತೆ ಇತರರಿದ್ದರು