ಪಾವಗಡಬ್ರೇಕಿಂಗ್ ಸುದ್ದಿ
ಪಾವಗಡ : ಹೆರಿಗೆಯಲ್ಲಿ ತಾಯಿ ಸಾವು, ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರ ಆಕ್ರೋಶ, ಪ್ರತಿಭಟನೆ
ಪಾವಗಡ : ತಾಲ್ಲೂಕಿನ ಜವಂತಿ ಗ್ರಾಮದ ರಾಜೆಂದ್ರ ರವರ ಪತ್ನಿ ಹೇಮಲತ (೩೪) ಎಂಬ ಗರ್ಬಿಣಿ ಮಹಿಳೆಯನ್ನು ಭಾನುವಾರ ರಾತ್ರಿ ಪಾವಗಡ ಪಟ್ಟಣದ ಹೊಸ ನಿಲ್ದಾಣಲ್ಲಿರುವ ಮಾತ್ರುಶ್ರೀ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲು ಮಾಡಲಾಗಿದ್ದು, ಇಂದು ಬೆಳಿಗ್ಗೆ ಹೆರಿಗೆ ಆಗಿದ್ದು ಗಂಡು ಮಗು ಜನಿಸಿರುತ್ತದೆ. ಆದರೆ ಮಗು ಜನಿಸಿದ ಕೆಲವೇ
ನಿಮಿಷದಲ್ಲಿ ತಾಯಿ ಹೇಮಲತ ಮೃತಪಟ್ಟಿರುತ್ತಾರೆ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಹಾಗೂ ರಾಜವಂತಿ ಗ್ರ್ರಾಮಸ್ಥರು ಆರೋಪಿಸಿ ಡಾಕ್ಟರ್ ಜಗದೀಶ್ ಅವರೊಡನೆ ವಾಗ್ವಾದಕ್ಕಿಳಿದು ಆಸ್ಪತ್ರೆಯ ಪಿಠೋಪಕರಣಗಳನ್ನು ದ್ವಂಸಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪರಿಸ್ಥತಿ ಶಾಂತಗೊಳಿಸಿ ತನಿಖೆ ಕೈಗೊಂಡಿದ್ದಾರೆ.