
ಕುಣಿಗಲ್ : ಗೊಟ್ಟಿಕೆರೆ ಕೆರೆಗೆ ಅಂಚೇಪಾಳ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕೆಲವು ಖಾಸಗಿ ಕಾರ್ಖಾನೆಗಳು ತ್ಯಾಜ್ಯದ ನೀರು ಬಿಟ್ಟಿದ್ದ ಹಿನ್ನೆಲೆಯಲ್ಲಿ ಕೆರೆಯ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದು ಈ ಸಂಬಂಧ ಸ್ಥಳಕ್ಕೆ ತುಮಕೂರು ಉಪವಿಭಾಗಾಧಿಕಾರಿ ಅಜಯ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿಕೆಲವು ಖಾಸಗಿ ಕಾರ್ಖಾನೆ ಗಳನ್ನು ಸೀಜ್ ಮಾಡಿದ್ದಾರೆ.
ಈ ಸಂಬಂಧ ಗೊಟ್ಟಿಕೆರೆ ಗ್ರಾಮಸ್ಥರು ಇತ್ತೀಚೆಗೆ ಗ್ರಾಮದ ಕೆರೆಗೆ ಕೆಲವು ಖಾಸಗಿ ಕಾರ್ಖಾನೆಗಳು ತ್ಯಾಜ್ಯದ ನೀರನ್ನು ಚರಂಡಿಯ ಮೂಲಕ ಕೆರೆಗೆ ಬಿಡುತ್ತಿದ್ದಾರೆ ಇದರಿಂದ ಕೆರೆಯ ನೀರು ಕಲುಷಿತಗೊಂಡು ಸಾರ್ವಜನಿಕರು ಪ್ರಾಣಿ ಪಕ್ಷಿಗಳು ರಾಸುಗಳು ಕುಡಿಯಲು ಯೋಗ್ಯವಾಗಿಲ್ಲ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಇಂತಹ ಅವಘಡಕ್ಕೆ ಕಾರಣವಾಗಿರುವ ಖಾಸಗಿ ಕಾರ್ಖಾನೆಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನೆ ನಡೆಸಿದ್ದರು ಈ ಹಿನ್ನೆಲೆಯಲ್ಲಿ ತುಮಕೂರು ಉಪವಿಭಾಗಾಧಿಕಾರಿ ಅಂಚೆಪಾಳ್ಯ ಖಾಸಗಿ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ತ್ಯಾಜ್ಯದ ನೀರನ್ನು ಕೆರೆಗೆ ಬಿಡುತ್ತಿದ್ದ ಕೆಲವು ಕಾರ್ಖಾನೆಗಳನ್ನು ಸೀಜ್ ಮಾಡಿದ್ದಾರೆ ಹಾಗೂ ಕಲುಷಿತಗೊಂಡಿದ್ದು ಗೊಟ್ಟಿಗೆರೆ ಕೆರೆಯನ್ನು ಸ್ವಚ್ಚ ಮಾಡಲು ಪರಿಸರ ಅಧಿಕಾರಿ ಮಂಜುನಾಥ್ ಅವರಿಗೆ ಸೂಚಿಸಿದರು .

ಈ ಸಂದರ್ಭದಲ್ಲಿ ಅಂಚೇಪಾಳ್ಯ ಕೈಗಾರಿಕಾ ಪ್ರದೇಶದಲ್ಲಿನ ಖಾಸಗಿ ಕಾರ್ಖಾನೆಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.