ಗುಬ್ಬಿ
ಗುಬ್ಬಿಯ ಗುರು ನಾಗಲಿಂಗೇಶ್ವರ ದೇವಾಲಯದಲ್ಲಿ ಬನ್ನಿ ಹಾಯುವ ವಿಜಯದಶಮಿ ಉತ್ಸವ ಯಶಸ್ವಿ
ಗುಬ್ಬಿ : ವಿಜಯದಶಮಿ ಹಬ್ಬದ ಪ್ರಯುಕ್ತ ಗುಬ್ಬಿ ಪಟ್ಟಣದ ಗುರು ನಾಗಲಿಂಗೇಶ್ವರ ದೇವಾಲಯದಲ್ಲಿ ಬನ್ನಿ ಹಾಯುವ ಮೂಲಕ ದೇವಾಲಯದಲ್ಲಿ ಉತ್ಸವ ಮೂರ್ತಿಯ ಕಾರ್ಯ ಜರುಗಿತು.
ಈ ಸಂದರ್ಭದಲ್ಲಿ ದೇವರ ಉತ್ಸವ ಮೂರ್ತಿಯ ಎಲ್ಲಾ ಕಾರ್ಯಗಳನ್ನು ನೆರವೇರಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಯವರು ಈ ಹಿಂದೆ ಪಾಂಡವರು ಮತ್ತು ಕೌರವರ ನಡುವಿನ ಒಪ್ಪಂದಕ್ಕೆ ಪಾಂಡವರು ಹದಿನಾಲ್ಕು ವರ್ಷಗಳ ಕಾಲದ ವನವಾಸ ಮುಗಿಸಿ ನಂತರ ಒಂದು ವರ್ಷದ ಅಜ್ಞಾತ ವಾಸಕ್ಕೆ ತೆರಳುವಾಗ ಬನ್ನಿಮರ(ಶಮಿವೃಕ್ಷ)ದಲ್ಲಿ ತಮ್ಮಲ್ಲಿ ಇರುವ ಎಲ್ಲಾ ಆಯುಧಗಳನ್ನು ಮುಚ್ಚಿಟ್ಟು ನಂತರ ಮರಳಿದ ಮೇಲೆ ಬನ್ನಿ ಮರದಲ್ಲಿ ಇಟ್ಟಿದ್ದ ಆಯುಧಗಳನ್ನು ಪಡೆದುಕೊಂಡ ನಂತರದ ದಿನದಲ್ಲಿ ಕೌರವರ ಮೇಲೆ ನಡೆದ ಯುದ್ಧದಲ್ಲಿ ಜಯಶಾಲಿಗಳಾಗಿ ವಿಜಯ ಪಾತಕೆ ಹಾರಿಸಿದ ತರುವಾಯ ಬನ್ನಿ ಮರದ ವಿಶೇಷಕ್ಕೆ ಇಂದಿನ ಮೈಸೂರು ವಿಜಯದಶಮಿ ಹಬ್ಬದ ಪ್ರಯುಕ್ತ ನಾಡಿನ ಎಲ್ಲಾ ದೇವಾಲಯಗಳಲ್ಲಿ ಬನ್ನಿ ಹಾಯುವ ಹಾಗೂ ಇತರೆ ದೇವತಾ ಕಾರ್ಯಗಳನ್ನು ನೆರವೇರಿಸುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ದೇವತಾ ಕಾರ್ಯಕ್ರಮದಲ್ಲಿ ಗುರು ನಾಗಲಿಂಗೇಶ್ವರ ದೇವಾಲಯದ ಪ್ರದಾನ ಅರ್ಚಕರಾದ ಗುರುಲಿಂಗಪ್ಪನವರು ಪಟ್ಟಣ ಪಂಚಾಯತಿ ಸದಸ್ಯರಾದ ಜಿ.ಆರ್.ಶಿವಕುಮಾರ್ ಹಾಗೂ ಪಟ್ಟಣದ ಎಲ್ಲಾ ಭಕ್ತರು ಪಾಲ್ಗೊಂಡಿದ್ದರು.