ಬಗರ್ ಹುಕ್ಕುಂ ಸಾಗುವಳಿದಾರರ ಮೇಲೆ ದೌರ್ಜನ್ಯ : ದಲಿತರ ಹಕ್ಕುಗಳ ಸಮಿತಿ ಪ್ರತಿಭಟನೆ
ತುಮಕೂರು: ಜಿಲ್ಲೆಯಲ್ಲಿ ದಲಿತರ ಮೇಲೆ ಪೊ ಲೀಸ್ ದೌರ್ಜನ್ಯ ಹೆಚ್ಚುತ್ತಿದ್ದು, ರಕ್ಷಣೆ ನೀಡ ಬೇ ಕಾದ ಪೊಲೀಸರೇ ದಲಿತರ ಶೋಷಣೆ ನಡೆ ಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿ ಮಾತನಾಡಿದ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳೂರು ಅವರು, ಕುಣಿಗಲ್ ತಾಲ್ಲೂಕಿನಲ್ಲಿ ದಲಿತ ಮಹಿಳೆಯರಾದ ಮಾಯಮ್ಮ ಮತ್ತು ಸೌಭಾಗ್ಯಮ್ಮ ಅವರು ಉಳುಮೆ ಮಾಡುತ್ತಿರುವ ಭೂಮಿಯಲ್ಲಿ ಬೆಳೆದಿದ್ದ ಫಸಲುಗಳನ್ನು ಅಕ್ರಮ ವಾಗಿ ಸವರ್ಣೀಯರು ಕಡಿದಿರುವ ಬಗ್ಗೆ ಪೊ ಲೀಸರಿಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಠಾಣೆಗೆ ಹೋದರೆ ಅವರ ಮೇ ಲೆಯೇ ದೌರ್ಜನ್ಯಯುತವಾಗಿ ಪೊಲೀಸರು ನಡೆಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಯಡಿಯೂರು ಹೋಬಳಿ ಬ್ಯಾಲದಕೆರೆ ಸೌಭಾಗ್ಯಮ್ಮ, ಅಮೃತೂರು ಹೋಬಳಿಯ ಕುರುಬರ ಶೆಟ್ಟಿಹಳ್ಳಿಯ ಮಾಯಮ್ಮ ಅವರು ಕಳೆದ 20-30 ವರ್ಷಗಳಿಂದಲೂ ಸರಕಾರಿ ಭೂಮಿಯನ್ನು ಉಳುಮೆ ಮಾಡುತ್ತಿದ್ದು, ಸೌಭಾಗ್ಯಮ್ಮ ಅವರು 15ಗುಂಟೆ ಜಾಗದಲ್ಲಿ ಬೆಳೆದಿದ್ದ ಹೆಬ್ಬೇವಿನ ಮರ ಗಳನ್ನು ತಿಮ್ಮಪ್ಪ ಎಂಬುವರು ಅಕ್ರಮವಾಗಿ ತೆರ ವುಗೊಳಿಸಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದರೆ ಸ್ಥಳೀಯ ಠಾಣೆಯಲ್ಲಿ ದೂರು ಸ್ವೀಕ ರಿಸಿದೇ ಸೌಭಾಗ್ಯಮ್ಮ ಅವರನ್ನೇ ಹೆದರಿಸಿ, ಬೆದ ರಿಸಿ ಕಳುಹಿಸುತ್ತಾರೆ ಎಂದರೆ ಪೊಲೀಸರು ಯಾರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವು ದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಬುದ್ದಿಮಾಂದ್ಯ ಮಕ್ಕಳೊಂದಿಗೆ ಜೀವನ ನಡೆಸು ತ್ತಿರುವ ಮಾಯಾಮ್ಮ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿ, ಜಮೀನಿನಿಂದ ಹೊರಹಾಕಿದ್ದು, ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರೂ ಸಹಯಾವುದೇ ಪ್ರಯೋಜನವಾಗಿಲ್ಲ, ಜೀವಭಯದಲ್ಲಿಯೇ ಮಾಯಾಮ್ಮ ಅವರ ಕುಟುಂಬ ಜೀವನ ನಡೆಸುವಂತಹ ಸ್ಥಿತಿ ನಿರ್ಮಾಣ ವಾಗಿದ್ದು, ಪೊಲೀಸ್ ವರಿಷ್ಠಾಧಿಕಾ ರಿಗಳು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಗರ್‌ಹುಕುಂ ಕಮಿಟಿ ರಚನೆಗೆ ಆಗ್ರಹ: ಜಿಲ್ಲೆಯಲ್ಲಿ ಬಗರ್‌ಹುಕುಂ ಕಮಿಟಿಗಳನ್ನು ರಚನೆ ಮಾಡದೇ ಇರುವುದರಿಂದ 20-30 ವರ್ಷಗಳಿಂದ ಭೂಮಿ ಯನ್ನು ಹಸನು ಮಾಡಿಕೊಂಡು ಜೀವನ ಕಟ್ಟಿಕೊಂಡಿರುವ ದಲಿತರ ಮೇಲೆ ದೌರ್ಜನ್ಯ ಹೆಚ್ಚಳವಾಗುತ್ತಿದ್ದು, ಭೂಮಿಯನ್ನು ಕಬಳಿಸಲು ಸರ್ವಣೀಯರು ಯತ್ನಿಸುತ್ತಿದ್ದು, ಇದರಿಂದ ಸಾ ಮಾಜಿಕ ಸಂಘರ್ಷ ಹೆಚ್ಚುತ್ತಿದ್ದು, ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಕಾರಣವಾಗುತ್ತಿದ್ದು ಜಿ ಲ್ಲಾಧಿಕಾರಿಗಳು ಶೀಘ್ರವಾಗಿ ಬಗರ್‌ಹುಕುಂ ಕಮಿಟಿ ರಚಿಸಿ ದಲಿತರಿಗೆ ಭೂಮಿ ಮಂಜೂರಾತಿ ಮಾಡಿ ಕೊಡಬೇಕೆಂದು ಒತ್ತಾಯಿಸಿದರು.
ಭೂ ರಹಿತ ಕುಟುಂಬಗಳಿಗೆ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿ, ಕಂದಾಯ ಕಟ್ಟಿಕೊಳ್ಳುತ್ತಿದ್ದರು ಸಹ ಸಮಿತಿ ರಚನೆಯಾಗದ ಕಾರಣ ಅರ್ಜಿ ಸಲ್ಲಿಸಿ ರುವ ದಲಿತರು ಮತ್ತು ಸರ್ವಣೀಯ ಮಧ್ಯ ಸಾ ಮಾಜಿಕ ಸಂಘರ್ಷವನ್ನುಂಟು ಮಾಡುತ್ತಿದ್ದು, ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಬಗರ್ ಹುಕುಂ ಕಮಿಟಿಯನ್ನು ರಚಿಸುವ ಮೂಲಕ ದಲಿತ ಮಹಿಳೆಯರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ರಾಜು ವೆಂ ಕಟಪ್ಪ, ರಾಜ್ಯ ಸಂಚಾಲಕ ಹೆಚ್.ಜಿ.ನಾಗಣ್ಣ, ಪ್ರಕಾ ಶ್‌ಕುಮಾರ್, ಶಂಕರ್, ಪ್ರಶಾಂತ್, ಸತೀಶ್, ಕೃಷ್ಣಮೂರ್ತಿ, ಸದಾಶಿವಯ್ಯ, ಶಿವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.