ವರಿನ್ ಕಾಲೇಜಿನ ಯತೀಶ್ ಕುಮಾರ್ ಗೆ ಶಿಕ್ಷಕರತ್ನ ಪ್ರಶಸ್ತಿ : ಅಭಿನಂದನೆ

ತುಮಕೂರು : ಇತ್ತೀಚೆಗೆ ಹಾಸನಾಂಬ ಕಲಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಶಿಕ್ಷಕರ ಬಳಗ (ರಿ) ರಾಜ್ಯ ಘಟಕ ಹಾಸನ ಜಿಲ್ಲೆ ಇವರು ಶಿಕ್ಷಕರ ದಿನಾಚರಣೆಯ ಅಂಗವಾಗಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ 2020ರ ರಾಜ್ಯಮಟ್ಟದ ಉತ್ತಮ ಖಾಸಗಿ ಶಿಕ್ಷಕರಿಗೆ ಕೊಡಮಾಡುವ ಡಾ.ಎಸ್.ರಾಧಾಕೃಷ್ಣನ್ ಶಿಕ್ಷಕರತ್ನ ಪ್ರಶಸ್ತಿಯನ್ನು ನೀಡಲಾಯಿತು.
ಅದರಲ್ಲಿ ತುಮಕೂರು ಜಿಲ್ಲೆಯ ವರಿನ್ ಅಂತಾರಾಷ್ಟ್ರೀಯ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕರಾಗಿ ಕರ‍್ಯ ನಿರ್ವಹಿಸುತ್ತಿರುವ ಯತೀಶ್ ಕುಮಾರ್ ಅವರಿಗೆ ಡಾ.ಎಸ್.ರಾಧಾಕೃಷ್ಣನ್ ಶಿಕ್ಷಕರತ್ನ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿ ಸಿಐಡಿ ಆದ ರವಿ ಡಿ ಚನ್ನಣ್ಣನವರ್ ಐಪಿಎಸ್ ರವರು ಕೊಟ್ಟು ಗೌರವಿಸಿದ್ದಾರೆ.
ಶಿಕ್ಷಕರತ್ನ ಪ್ರಶಸ್ತಿ ಪಡೆದ ಯತೀಶ್ ಕುಮಾರ್ ಅವರನ್ನು ವರಿನ್ ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಸೆಂಥಿಲ್, ಉಪ ಪ್ರಿನ್ಸಿಪಾಲ್ ಶಿವಕುಮಾರ್, ಶಿಕ್ಷಕರು ಮತ್ತು ಎಲ್ಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಚೇರ್‌ಮನ್ ಆರ್.ಕೃಷ್ಣಯ್ಯ, ಕಾರ್ಯದರ್ಶಿ ಮಮತಾ ಸುರೇಶ್, ಆಡಳಿತಾಧಿಕಾರಿ ಬಿ.ಸಿ.ಕೃಷ್ಣಪ್ಪ, ಹಾಗು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪ್ರಶಸ್ತಿ ಪಡೆದ ಶಿಕ್ಷಕರನ್ನು ಅಭಿನಂದಿಸಿದ್ದಾರೆ.