ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿ : ಶಾಸಕ ಜ್ಯೋತಿಗಣೇಶ್
ತುಮಕೂರು: ಮಹಾನಗರಪಾಲಿಕೆಯ ವಾರ್ಡ್ ನಂ.16ರ ಬಾರ್‌ಲೈನ್ ರಸ್ತೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಉದ್ಘಾಟನೆ ಮಾಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಈ ಭಾಗಕ್ಕೆ ಸುಮಾರು ಒಂದುವರೆ ಕೋಟಿಯಷ್ಟು ಅನುದಾನವನ್ನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನೀಡಿದ್ದು, ಅದರಲ್ಲಿ ಈಗ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯು ರೂ.12.00 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಸುತ್ತಮುತ್ತಲಿನ ಪೊಲೀಸ್ ಕ್ವಾಟ್ರಾಸ್, ಕೆ.ಆರ್ ಬಡಾವಣೆ, ಬಿದಿರುಮಳೆ ತೋಟ ಇಲ್ಲಿನ ಜನರಿಗೆ ಅನುಕೂಲವಾಗಲಿದೆ. ಈಗಾಗಲೇ ಎಂ.ಜಿ ರಸ್ತೆ ಹಾಗೂ ಬಾರ್‌ಲೈನ್ ರಸ್ತೆ ಪೂರ್ಣಗೊಂಡಿದ್ದು, ಚಾಮುಂಡೇಶ್ವರಿ ರಸ್ತೆ ಒಂದು ಬಾಕಿ ಉಳಿದಿದ್ದು, ಈ ಭಾಗದ ಜನರು ರಸ್ತೆ ಮಾಡಲು ಸಹಕರಿಸಿದರೆ ಉತ್ತಮವಾದ 40 ಅಡಿ ರಸ್ತೆ ನಿರ್ಮಾಣ ಮಾಡಲಾಗುವುದು. ದಯಮಾಡಿ ಜನರು ರಸ್ತೆ ನಿರ್ಮಾಣ ಮಾಡಲು ಸಹಕರಿಸಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ಮಹಾನಗರಪಾಲಿಕೆಯ ಪಾಲಿಕೆ ಸದಸ್ಯರಾದ ಇನಾಯತ್, ಮಹೇಶ್, ನಾಮಿನಿ ಸದಸ್ಯರಾದ ಮೋಹನ್, ವಾರ್ಡ್ ಮುಖಂಡರಾದ ಅರಳೂರು ಕುಮಾರಣ್ಣ, ವೈ.ಎನ್.ನಾಗರಾಜು, ಅಧಿಕಾರಿಗಳು ಹಾಗೂ ಇತರರಿದ್ದರು.