ಕೊರಟಗೆರೆ : ಹೊಸ ಬಿಜೆಪಿ ಸರ್ಕಾರವು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡರ ರಾಜಕೀಯ ದುರುದ್ದೇಶಕ್ಕೆ ಎ.ಪಿ.ಎಂ.ಸಿಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ರೈತರಿಗೆ, ಜನತೆಗೆ. ಅನ್ಯಾಯ ಮಾಡಿದ್ದು ಇದರ ವಿರುದ್ದ ಹೋರಾಟ ಮಾಡಲಾಗುವುದು ಎಂದು ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮತ್ತು ತುಮಕೂರು ಮಾಜಿ ಎ.ಪಿ.ಎಂ.ಸಿ. ಅದ್ಯಕ್ಷ ಕೊಡ್ಲಹಳ್ಳಿ ಅಶ್ವಥನಾರಾಯಣ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಸ್ವತಂತ್ರವಾಗಿದ್ದ ಕೊರಟಗೆರೆ ತಾಲ್ಲೂಕು ಎ.ಪಿ.ಎಂ.ಸಿ.ಯನ್ನು ಸರ್ಕಾರದಲ್ಲಿ ಪಕ್ಷದ ಒತ್ತಡ ತಂದು ಮತ್ತೆ ತುಮಕೂರು ಎ,ಪಿ,ಎಂ.ಸಿ. ವಾಪಸ್ ತಂದು ತನ್ನ ಹಿಂದೆ ತಿರುಗಾಡುವವರಿಗೆ ನಾಮಿನಿ ಮಾಡಿ ತಾಲೂಕಿನ ರೈತರಿಗೆ ಜನರಿಗೆ ಅನ್ಯಾಯ ಮಾಡಿದ್ದಾರೆ. 2016 ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಾ.ಜಿ.ಪರಮೇಶ್ವರ ರವರ ಮಾರ್ಗದರ್ಶದಲ್ಲಿ ತಾಲ್ಲೂಕಿನ ಹುಲಿಕುಂಟೆ ಗ್ರಾಮ ಸ.ನಂ. 31/1 ರಲ್ಲಿ 9 ಎಕರೆ ಸರ್ಕಾರಿ ಜಮೀನ್ನು ಎ.ಪಿ.ಎಂ.ಸಿ, ಮಂಜೂರು ಮಾಡಿಸಲಾಯಿತು. 2017 ರಲ್ಲಿ ವೆಂಕಟಶಮೂರ್ತಿ ಅದ್ಯಕ್ಷತೆಯಲ್ಲಿ ನೂತನ ನಾಮನಿರ್ದೇಶನ ಸಮಿತಿ ರಚನೆಯಾಯಿತು. 2018 ರಲ್ಲಿ ಸಂಮಿಶ್ರ ಸರ್ಕಾರದಲ್ಲಿ ಡಾ.ಜಿ.ಪರಮೇಶ್ವರ ಉಪಮುಖ್ಯಮಂತ್ರಿ ಯಾದಾಗ ಈ ಎ.ಪಿ.ಎಂ.ಸಿ ಕಟ್ಟಡ ನಿರ್ಮಾಣಕ್ಕೆ 4ಕೋಟಿ, ಕಾಂಪೌಡ್ ನಿರ್ಮಾಣಕ್ಕೆ 1 ಕೋಟಿ ರೂ ಹಣ ಬಿಡುಗಡೆ ಗೊಳಿಸಿದರು. ತುಮಕೂರು ಎ.ಪಿ.ಎಂ.ಸಿ ಯಿಂದ ಸುತ್ತೋಲೆ ಪ್ರಕಾರ 3 ಕೋಟಿ ಬಿಡುಗಡೆ ಗೊಳಿಸಲಾಗಿತ್ತು.ಈಗ ಕಾಪೌಂಡ್ ನಿರ್ಮಾಣ ಪೂರ್ಣಗೊಂಡಿದೆ. ಮಾಜಿ ಶಾಸಕ ಸುರೇಶ್‌ಗೌಡರು ತಮ್ಮ ಹಿಂಬಾಲಕರನ್ನು ನಾಮಿನಿ ಮಾಡಲು ಬಿಜೆಪಿ ಸರ್ಕಾರಕ್ಕೆ ಒತ್ತಡ ಹಾಕಿ 3 ಕೋಟಿ ಹಣ ವಾಪಸ್ ಪಡೆಯುವಂತೆ ಮಾಡಿದರು.ಕ್ಷೇತ್ರದ ಶಾಸಕರು,ರೈತ ಸಂಘಟನೆಗಳು, ಸಂಘಗಳು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಮನವಿಸಲ್ಲಿಸಿತು,ಸಹಕಾರ ಸಚಿವರಿಗೆ ಮನವಿ ನೀಡಲಾಗಿತ್ತು,ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಿದರು. ಆದರೆ ನೂತನ ಸರ್ಕಾರ ಎಲ್ಲವನ್ನು ಬದಿಗೋತ್ತಿ ಈ ಅನ್ಯಾಯ ಮಾಡಿದೆ ,ಇದರ ವಿರುದ್ದ ರೈತರೊಂದಿಗೆ, ಸಂಘಗಳೊಂದಿಗೆ, ಸಾರ್ವಜನಿಕರೊಂದಿಗೆ ಜೊತೆಗೂಡಿ ಹೋರಾಟ ಮಾಡಲಾಗುವುದು ಎಂದರು.
ಗ್ರಾಮಾಂತರ ಬ್ಲಾಕ್‌ಕಾಂಗ್ರೆಸ್ ಅದ್ಯಕ್ಷ ಅರಕೆರೆ ಶಂಕರ್ ಮಾತನಾಡಿ ಮಾಜಿ ಶಾಸಕರಾದ ಸುರೇಶ್‌ಗೌಡರು ಎ.ಪಿ.ಎಂ.ಸಿ ಚುಣಾವಣೆಯಲ್ಲಿ ತಮ್ಮವರನ್ನು ಗೆಲ್ಲಿಸಿ ಕೋಳ್ಳಲು ಶಕ್ತಿ ಇಲ್ಲದೆ, ಕೊರಟಗೆರೆ ಎ,ಪಿ.ಎಂ.ಸಿ. ಯನ್ನು ತುಮಕೂರಿಗೆ ಸೇರಿಸಿದ್ದಾರೆ. ಮತ್ತೆ ನಾಮನಿರ್ದೇಶನ ಮಾಡುವ ಅವಕಾಶಕ್ಕಾಗಿ ಈ ರೀತಿ ಆನ್ಯಾಯ ಮಾಡಿದ್ದಾರೆ,ತುಮಕೂರು ಎ.ಪಿ.ಎಂ.ಸಿ. ಕೊರಟಗೆರೆ ತಾಲೂಕಿನಿಂದ ಅತಿ ಹೆಚ್ಚು ಅಡಿಕೆ, ಜೋಳ,ಸೇರಿದಂತೆ ಇತರ ಆಹಾರ,ವಾಣಿಜ್ಯ ಆಹಾರ ಸರಬರಾಜಾಗು ತ್ತಿದೆ,ಜಿಲ್ಲೆಯಲ್ಲಿಯೇ ಅತಿ ದೊಡ್ಡ ಕುರಿಸಂತೆ ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮದದಲ್ಲಿ ನಡೆಯುತ್ತಿದೆ ,ಇನ್ನು ಮಾರುಕಟ್ಟೆಯೇ ಪ್ರಾರಂಭವಾಗಿಲ್ಲ ಇದು ಲಾಂಭಾಂಶವಿಲ್ಲ ಎಂದು ಸುಳ್ಳು ಅಂದತ್ವದ ವರದಿ ನೀಡಿಸಿ ಈ ಅನ್ಯಾಯ ಮಾಡಿದ್ದಾರೆ,ಈಗ ರಚನೆಯಾಗಿರುವ ಸಮಿತಿಯಲ್ಲಿ ಕೊರಟಗೆರೆ ಕ್ಷೇತ್ರದ ಕನಿಷ್ಟ 9 ಮಂದಿ ನಾಮ ನಿರ್ದೇಶನ ಸದಸ್ಯರಿರ ಬೇಕ್ಕಿತ್ತು ಆದರೆ ಎಲ್ಲಾರು ತುಮಕೂರು ಗ್ರಾಮಾಂತರದವರೇ ಆಗಿದ್ದು ಬಹುತೇಕರು ಕ್ರಿಮಿನಲ್ ಹಿನ್ನಲೆಯವರು, 1962 ರಿಂದ ಎ.ಪಿ.ಎಂ.ಸಿ ಯಲ್ಲಿ ಕೊರಡಗೆರೆ ತಾಲ್ಲೂಕಿಗೆ ಅನ್ಯಾಯವಾಗುತ್ತಿದ್ದು, ಈ ಅನ್ಯಾಯದ ವಿರುದ್ದ ಕಾನೂನು ಹೋರಾಟ ಮಾಡಲಾಗುವುದು ಎಂದರು. ಗೋಷ್ಟಿಯಲ್ಲಿ ಮಾಜಿ ಬ್ಲಾಕ್ ಕಾಂಗ್ರಸ್ ಅದ್ಯಕ್ಷ ಮೈಲಾರಪ್ಪ .ಮಹಿಳಾ ಅದ್ಯಕ್ಷೆ ಜಯಮ್ಮ,ಯುವ ಅದ್ಯಕ್ಷ ವಿನಯ್‌ಕುಮಾರ್,ಕೃಷಿಕ ಸಮಾಜದ ನಿರ್ದೇಶಕ ಹುಲಿಕುಂಟೆ ಪ್ರಸಾದ್.ಮಾಜಿ ಪ,ಪಂ.ಉಪಾದ್ಯಕ್ಷ ಕೆ.ವಿ.ಮಂಜುನಾಥ್, ಅರವಿಂದ್ ಸೇರಿದಂತೆ ಇತರರು ಹಾಜರಿದ್ದರು