ತುಮಕೂರು : ದಕ್ಷಿಣ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗ ಸೇರಿದಂತೆ ಒಟ್ಟು 18 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಬರಸಿಡ್ಲಹಳ್ಳಿ ಶಾಲೆಯ ಪಿ.ನರಸಿಂಹಮೂರ್ತಿ, ಗುಬ್ಬಿ ತಾಲ್ಲೂಕು ಬಿ. ಕೋಡಿಹಳ್ಳಿ ಶಾಲೆಯ ರಂಗಸ್ವಾಮಿ, ಕುಣಿಗಲ್ ತಾಲ್ಲೂಕು ಗೊಲ್ಲರಹಟ್ಟಿ(ಎನ್.ಎಂ.ಪುರ) ಶಾಲೆಯ ಎಂ.ಸಿ.ಲೀಲಾವತಿ, ತಿಪಟೂರು ತಾಲ್ಲೂಕು ಯಗಚಿಕಟ್ಟೆ ಶಾಲೆಯ ಎಸ್.ಯು. ಶೈಲಾ, ತುಮಕೂರು ತಾಲ್ಲೂಕು ಸಂಗ್ಲಾಪುರ ಶಾಲೆಯ ಶ್ರೀರಂಗಮೂರ್ತಿ ಹಾಗೂ ತುರುವೇಕೆರೆ ತಾಲ್ಲೂಕು ನೇರಲೇಕೆರೆ ಗೊಲ್ಲರಹಟ್ಟಿ ಶಾಲೆಯ ಡಿ.ಪಿ. ಶ್ರೀನಿವಾಸ/
ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಚಿಕ್ಕನಾಯಕನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಂ.ಎಸ್.ಯೋಗೀಶ್ ಕುಮಾರ್, ಗುಬ್ಬಿ ತಾಲ್ಲೂಕು ಮಾದಾಪುರ ಶಾಲೆಯ ರವೀಶ, ಕುಣಿಗಲ್ ತಾಲ್ಲೂಕು ಜಿ.ಕೆ.ಬಿ.ಎಂ.ಎಸ್.ಶಾಲೆಯ ಹೆಚ್.ಎನ್.ರಾಜಣ್ಣ, ತಿಪಟೂರು ತಾಲ್ಲೂಕು ತಿಮ್ಲಾಪುರ ಶಾಲೆಯ ಕೆ.ಎನ್.ನಾಗರಾಜು, ತುಮಕೂರು ತಾಲ್ಲೂಕು ಬಡ್ಡಿಹಳ್ಳಿ ಶಾಲೆಯ ವೆಂಕಟಪ್ಪ ಹಾಗೂ ತುರುವೇಕೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಹೆಚ್.ಎನ್. ಸಾವಿತ್ರಮ್ಮ.ಪ್ರೌಢಶಾಲಾ ವಿಭಾಗದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಬರಗೂರು ಶಾಲೆಯ ಕೆ.ಪಿ. ಜಯದೇವಮೂರ್ತಿ, ಗುಬ್ಬಿ ತಾಲ್ಲೂಕು ಚೇಳೂರು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಚಿತ್ರಕಲಾ ಸಹ ಶಿಕ್ಷಕ ರಂಗಸ್ವಾಮಯ್ಯ, ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗದ ಹುಲಿಯೂರಮ್ಮ ಅನುದಾನಿತ ಪ್ರೌಢಶಾಲೆಯ ಎನ್.ಟಿ. ಪ್ರಸಾದ್ ಕುಮಾರ್,
ತಿಪಟೂರು ತಾಲ್ಲೂಕು ರಂಗಾಪುರ, ಎಸ್.ಪಿ.ಎಸ್. ಸಂಯುಕ್ತ ಪದವಿಪೂರ್ವ (ಪ್ರೌಢಶಾಲಾ ವಿಭಾಗ) ಕಾಲೇಜಿನ ಹೆಚ್.ಡಿ.ದೇವರಾಜು, ತುಮಕೂರು ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ರಾಮಯ್ಯ ಹಾಗೂ ತುರುವೇಕೆರೆ ತಾಲ್ಲೂಕು ದೊಡ್ಡಗೊರಾಘಟ್ಟ ಶಾಲೆಯ ದೈಹಿಕ ಶಿಕ್ಷಕ ಎನ್. ಆರ್. ಷಣ್ಮುಖ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಅದೇ ರೀತಿ, ಅನುದಾನ ರಹಿತ ಶಾಲೆಗಳ ಪ್ರೌಢಶಾಲಾ ವಿಭಾಗದಲ್ಲಿ ಸೇಕ್ರೆಡ್ ಹಾರ್ಟ್ ಶಾಲೆಯ ಶ್ವೇತ ಎನ್., ವರಿನ್ ಇಂಟರ್ ನ್ಯಾಷನಲ್ ಹೈಸ್ಕೂಲ್ ನ ಪಿ.ಎಲ್, ಚಾಲ್ಸ್ ಸ್ಟೀಫನ್, ಬಡ್ಡಿಹಳ್ಳಿ ಎಸ್.ಆರ್.ಎಸ್.ಹೈಸ್ಕೂಲ್ ನ ಎಸ್. ಲತಾ, ಹುಳಿಯಾರು ಶ್ರೀ ವಾಸವಿ ಆಂಗ್ಲ ಪ್ರೌಢಶಾಲೆಯ ಮಹೇಶ್. ಡಿ, ಕೆ.ಬಿ.ಕ್ರಾಸ್ ಗುರು ಹೈಸ್ಕೂಲ್ ನ ಎಂ.ಪಿ.ಕಲ್ಪನ, ಕುಣಿಗಲ್ ಸ್ಟೆಲ್ಲಾ ಮೇರಿ ಸ್ಕೂಲ್ ನ ಬಿ.ಜೆ. ರವಿ ಹಾಗೂ ಪ್ರೈಮರಿ ವಿಭಾಗದಲ್ಲಿ ಹುಳಿಯಾರು ಜ್ಞಾನ ನಿಧಿ ಇಂಗ್ಲೀಷ್ ಹೆಚ್.ಪಿ.ಎಸ್.ಶಾಲೆಯ ಮಾಲತಿ ಜೆ. ರಾಜ್, ಹುಲಿಯೂರು ದುರ್ಗಾ ಜ್ಞಾನ ಭಾರತಿ ಸ್ಕೂಲ್ ನ ಶೋಭಾ ಬಿ.ಪಿ., ತಿಪಟೂರಿನ ರಂಗಾಪುರ ನವ್ಯ ಹೆಚ್.ಪಿ.ಎಸ್.ಶಾಲೆಯ ರತ್ನಮ್ಮ, ತುಮಕೂರಿನ ಸರಸ್ವತಿ ಪುರಂನ ಆಚಾರ್ಯ ವಿದ್ಯಾಪೀಠದ ಗೀತಾಂಜಲಿ, ವಿದ್ಯಾನಿಕೇತನ ಶಾಲೆಯ ಬಿ.ವಿ.ಶ್ರೀದೇವಿ, ನಿಟ್ಟೂರಿನ ಸಿದ್ದಶ್ರೀ ಇಂಗ್ಲಿಷ್ ಸ್ಕೂಲ್ ನ ಶಾರದಾ ಪಿ.ಆರ್. ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.