ಭ್ರಷ್ಟಾಚಾರಕ್ಕೆ ಕಬ್ಜವಾದ ಗುಬ್ಬಿ ಪೊಲೀಸ್ ಠಾಣೆ…?
ಸಾರ್ವಜನಿಕರ ಆರೋಪಗಳಿಗೆ ಕಿವುಡಾದ ಪೊಲೀಸ್ ಇಲಾಖೆ
ಗುಬ್ಬಿ : ಕಾನೂನು ಸುವ್ಯವಸ್ಥೆ ಕಾಪಾಡುವ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಬೇಕಾದ ಪಿ.ಎಸ್.ಐ ಜ್ಞಾನಮೂರ್ತಿಯವರ ನೀಚ ಲಂಚಗುಳಿತನಕ್ಕೆ ಗುಬ್ಬಿ ಪೊಲೀಸ್ ಠಾಣೆಯು ಭ್ರಷ್ಟಾಚಾರದ ಕಬ್ಜವಾಯಿತೇ.??? ಗುಬ್ಬಿ ಠಾಣೆಯಲ್ಲಿ ಹೊಸದಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಕೋರಾನ ಅಲೆಯ ಸಂರ‍್ಭದಲ್ಲಿ ರೈತರಿಂದ ಹಣ ಸುಲಿಗೆ ಮಾಡಲಾಗಿದೆ ಜೊತೆಗೆ ಇಡೀ ಪೊಲೀಸ್ ಠಾಣೆಯನ್ನು ವ್ಯಾಪಾರಕ್ಕೆ ಇಟ್ಟುಕೊಂಡಂತಿದೆ ಎಂದು ಸ್ಥಳೀಯ ಶಾಸಕರು ಕಾರ್ಯಕರ್ತರು ನೇರವಾಗಿ ಆರೋಪ ಮಾಡಿದರು ಅಲ್ಲಿಂದ ಶುರುವಾದ ಆರೋಪಗಳು ಇಲ್ಲಿಯವರೆಗೆ ನಿಲ್ಲದೆ ಇಂದು ಬಡವರಿಂದ ಆನ್ಲೈನ್ ಮೂಲಕ ಹಣ ಪಡೆಯುವ ಮಟ್ಟಿಗೆ ಬಂದು ನಿಂತಿದೆ.
ಆರೋಪಗಳ ಸರಮಾಲೆ ಹೊತ್ತ ಪಿ.ಎಸ್.ಐ : ಬಲಾಢ್ಯ ವೈಕ್ತಿಯ ದೂರು ಆದರಿಸಿ ಯುವಕನನ್ನು ಠಾಣೆಗೆ ಕರೆಸಿ ಮನಸೋ ಇಚ್ಛೆ ತಳಿಸಿದ ಪಿ.ಎಸ್.ಐ ರವರ ಬೆದರಿಕೆಗೆ ಹೆದರಿ ಮನೆಗೆ ಹಿಂತಿರುಗಿದ ತಡರಾತ್ರಿ ದೊಡ್ಡಗುಣಿ ಗ್ರಾಮದ ಯುವಕನೊಬ್ಬ ನಲುಗಿ ಜೀವ ಕಳೆದುಕೊಂಡ ಎಂಬ ಸುದ್ದಿ ಇನ್ನು ಮಾಸಿಲ್ಲ. ಜೊತೆಗೆ ಸಿ.ಐ. ಟಿ.ಕಾಲೇಜು ಬಳಿ ರಸ್ತೆ ಕಾರು ಮತ್ತು ಬಸ್ ಅಪಘಾತದ ಪ್ರಕರಣವನ್ನು ತಿರುಚಿ ಬಸ್ ಮಾಲೀಕರಿಂದ ಹಣ ಪಡೆದು ಅಪಘಾತ ಪಡಿಸಿದ ಬಸ್ ಹೊರತು ಪಡಿಸಿ ಬೇರೊಂದು ಬಸ್ ನಿಲ್ಲಿಸಿ ವಾಹನ ದ ನಂಬರ್ ಬದಲಿಸಿ ಹಣದಾಹಕ್ಕೆ ಸುಳ್ಳು ಎಫ್.ಐ. ಆರ್.ದಾಖಲಿಸಿದ ಆರೋಪಗಳು ಸಹ ಈ ಪೊಲೀಸ್ ಅಧಿಕಾರಿಯಿಂದಲೇ ಎಂದು ಸಾರ್ವಜನಿಕವಾಗಿ ಜೋರು ಚರ್ಚೆ ನಡೆದವು. ಇಸ್ಪೀಟ್ ದಂದೆ ಯಾರ ತಪ್ಪಿಗೆ ಯಾರಿಗೆ ಶಿಕ್ಷೆ:- ಗುಬ್ಬಿ ಠಾಣೆಯ ಸರಹದ್ದಿನಲ್ಲಿ ಹಲವು ಬಾರಿ ಇಸ್ಪೀಟ್ ದಂದೆಗಳ ಮೇಲೆ ದಾಳಿ ನಡೆಸಿದ ಪಿ.ಎಸ್.ಐ.ದೊಡ್ಡ ಪ್ರಮಾಣದ ಹಣ ವಶಪಡಿಸಿಕೊಂಡರು ಇಲಾಖೆಗೆ ತೋರಿಸುತ್ತಿದ್ದ ಮಾಹಿತಿ ಬೆರಳಣಿಕೆಯಷ್ಟು ಮಾತ್ರ ಎಂಬುದು. ಗುಬ್ಬಿ ಠಾಣಾ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಜೂಜು ಅಡ್ಡೆಮೇಲೆ ಇತ್ತೀಚಿಗೆ ಶಿರಾ ಉಪ ವಿಬಾಗದ ಡಿ.ವೈ.ಎಸ್.ಪಿ.ಕುಮಾರಪ್ಪ ನಿಟ್ಟೂರು ಸಮೀಪದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಹಣ ವಾಹನಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ ನಂತರ ಠಾಣಾಧಿಕಾರಿ ಜ್ಞಾನಮರ‍್ತಿಯವರ ಕೃಪಕಟಾಕ್ಷ ಕೆಲವು ದಂದೆಗಳ ಮೇಲಿದೆ ಎಂಬುದು ಬಹುತೇಕ ಖಚಿತ ಪಡಿಸಿಕೊಂಡಂತಿತ್ತು ಎಂದು ಹೇಳಲಾಗುತ್ತಿದೆ.ಆದರ ಪರಿಣಾಮವಾಗಿ ಕೆಲವು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿದ ಘಟನೆಯು ನಡೆದು ಹೋಯಿತು.ವಿರ‍್ಯಾಸ ವೆಂದರೆ ಹಣ್ಣು ತಿಂದವನು ಜಾರಿ ಕೊಂಡ ಸಿಪ್ಪೆ ತಿಂದವ ಸಿಕ್ಕಿ ಬಿದ್ದ ಎಂಬ ಗಾದೆಯಂತೆ ಪಿ.ಎಸ್.ಐ.ಜ್ಞಾನಮರ‍್ತಿ ಯವರ ಭ್ರಷ್ಟಾಚಾರಕ್ಕೆ ಬಲಿಯಾದವರು ಮಾತ್ರ ಸಿಬ್ಬಂದಿಗಳು. ಇಂದಿಗೂ ಕೂಡ ಎಗ್ಗಿಲ್ಲದೆ ಗುಬ್ಬಿ ಠಾಣಾ ವ್ಯಾಪ್ತಿಯ ಭಾಗದ ಹಲವು ಕಡೆಗಳಲ್ಲಿ ಇವರ ನೆರಳಿನಲ್ಲಿ ಇಸ್ಪೀಟ್ ಆಟಗಳು ಜೋರಾಗಿಯೇ ನಡೆಯುತ್ತಿವೆ ಜೊತೆಗೆ ಇವರಿಗೆ ಜೂಜುಕೋರರಿಂದ ದಿನಕ್ಕೆ ವಾರಕ್ಕೆ ತಿಂಗಳಿಗೆ ಇಂತಿಷ್ಟು ಹಿಡಿಗಂಟು ನೀಡಲಾಗುತ್ತಿಗೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆರೋಪಗಳಿಗೆ ಪುಷ್ಟಿ ನೀಡಿದ ಹೊಸ ಪ್ರಕರಣ:-ಇದಕ್ಕೆ ಪುಷ್ಟಿ ಎಂಬಂತೆ ಕಳೆದೆರಡು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿಯ ಶವ ಸಾಗಿಸಲು ನಿರಾಕರಿಸಿದ ಚಾಲಕನಿಗೆ ಪಿ.ಎಸ್.ಐ. ಜ್ಞಾನಮರ‍್ತಿ ತರಕಾರಿ ಕೊಂಡೊಯ್ಯುವ ಮ್ಯಾಕ್ಸಿ ಕ್ಯಾಬ್ ಅನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಚಾಲಕನ ಬಳಿ ಎಲ್ಲಾ ದಾಖಲೆಗಳು ಲಭ್ಯವಿದ್ದರು ಸಹ ಬೆದರಿಸಿ ಇಪ್ಪತ್ತು ಸಾವಿರ ಹಣ ನೀಡದಿದ್ದರೆ ಗಾಡಿಯಲ್ಲಿ ಮದ್ಯದ ಬಾಟಲಿ ಇಟ್ಟು ಸುಳ್ಳು ಕೇಸ್ ದಾಖಲಿಸಲಾಗುವುದು ಎಂದು ಬೆದರಿಸಿ ಚಾಲಕನಿಂದ ಗೂಗಲ್ ಪೆ ಮೂಲಕ ತಮ್ಮ ಸಿಬ್ಬಂದಿಯವರ ಖಾತೆಗೆ ಹಣ ಹಾಕಿಸಿಕೊಂಡು ನೂರು ರೂಪಾಯಿಯ ಮಾಸ್ಕ್ ದರಿಸದ ಆರೋಪದ ಮೇಲೆ ರಸೀದಿ ನೀಡಿ ಕೊನೆಗೆ ವಾಹನವನ್ನು ಬಿಡದೇ ಸತಾಯಿಸಿ ನಂತರ ಅವರಿಗೆ ನೀಡಿದ ಹಣ ಹೊರತು ಪಡಿಸಿ ಕರ‍್ಟು ಗೂ ಕೂಡ ಏಳು ಸಾವಿರದ ಐದು ನೂರು ದಂಡ ಪಾವತಿಸುವಂತೆ ಮಾಡಿದ ಆರೋಪದ ಮೇಲೆ ದಿನವಿಡೀ ಚಾಲಕರು ಪ್ರತಿಭಟನೆ ನಡೆಸಿದ ಪ್ರಸಂಗವು ಜರುಗಿದೆ. ವರದಿ: ದೇವರಾಜು ಗುಬ್ಬಿ