ನನಗೆ ಚಿಕ್ಕಂದಿನಿಂದಲೂ ವಿದ್ಯಾಭ್ಯಾಸದ ಕಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಕಡೆ ಹೆಚ್ಚುಆಸಕ್ತಿ ಇದ್ದ ಕಾರಣ ಗ್ರಾಮದ ಚಿರಂಜೀವಿ ಯುವತಿ ಸಂಘದ ಮುಖಾಂತರ ಜಿಲ್ಲೆಯ ನಾನಾ ಕಡೆಗಳಲ್ಲಿ ಕೋಲಾಟ, ಜನಪದ ನೃತ್ಯ, ನಾಟಕ, ಲಾವಣಿ, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದೆ ನನಗೆ ಚಿಕ್ಕ ವಯಸ್ಸಿನಿಂದಲೇ ನನ್ನ ತಂದೆಯ ರೀತಿಯಲ್ಲಿ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಬೇಕೆಂಬ ಮನೋಭಾವನೆಯನ್ನು ಹೊಂದಿದ್ದೆ ಕಾರಣಾಂತರಗಳಿಂದ ಸರ್ಕಾರಿ ಕೆಲಸ ಲಭ್ಯವಾಗಲಿಲ್ಲ ನಂತರದಲ್ಲಿ ಸೆಪ್ಟೆಂಬರ್ 1994 ರಂದು ಹಾಸನ ಜಿಲ್ಲೆಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಅಂದಿನ ಕುಗ್ರಾಮವಾಗಿದ್ದ ಮಾವಿನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನನ್ನ ಶಿಕ್ಷಕ ವೃತ್ತಿ ಜೀವನ ಆರಂಭಿಸಿ 3ವರ್ಷ ಸೇವೆ ಸಲ್ಲಿಸಿ ನಂತರ ಇದೇ ಹೋಬಳಿಯ ಬೂವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ 2ವರ್ಷ ಕರ್ತವ್ಯ ನಿರ್ವಹಿಸಿದೆ ಈ ಮಧ್ಯೆ ಕುಣಿಗಲ್ ತಾಲ್ಲೂಕಿನ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಬಿ ಎನ್ ರೇಣುಕಾ ಪ್ರಸಾದ್ ಅವರ ಜತೆ ಡಿಸೆಂಬರ್ 1999 ರಲ್ಲಿ ವೈವಾಹಿಕ ಜೀವನ ಪ್ರಾರಂಭವಾಯಿತು ಕುಟುಂಬದ ನಿರ್ವಹಣೆಗೋಸ್ಕರ ಹಾಸನ ಜಿಲ್ಲೆಯಿಂದ ವರ್ಗಾವಣೆ ಗೊಂಡು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅಮೃತುರು ಹೋಬಳಿ ಸಣಬ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 5ವರ್ಷಗಳ ಕಾಲ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ 2ಗಂಡು ಮಕ್ಕಳಿಗೆ ಜನ್ಮ ನೀಡಿದೆ ಮತ್ತು ನಾನು ಸೇವೆ ಸಲ್ಲಿಸುವ ಸರ್ಕಾರಿ ಶಾಲೆ ಮಕ್ಕಳಿಗೆ ಯಾವುದೇ ತೊಂದರೆಯಾಗಬಾರದೆಂದು ಪೋಷಕರ ಸಹಕಾರದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮಗಳಲ್ಲಿಯೇ ವಾಸವಿದ್ದು ಉತ್ತಮ ಸರ್ಕಾರಿ ಸೇವೆ ಸಲ್ಲಿಸಿರುವ ತೃಪ್ತಿ ನನಗಿದೆ ನಂತರ ವರ್ಗಾವಣೆಗೊಂಡು ಇದೇ ತಾಲ್ಲೂಕಿನ ಯಡಿಯೂರು ಹೋಬಳಿಯ ಎನ್ ಆರ್ ಪುರ ಗೊಲ್ಲರಹಟ್ಟಿ ಶಾಲೆಯಲ್ಲಿ 17 ವರ್ಷ ಒಳಗೊಂಡಂತೆ 27 ವರ್ಷಗಳ ಕಾಲ ನಿರಂತರವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯಾದಾನ ಮಾಡಿರುವುದು ನಿಜಕ್ಕೂ ನನಗೆ ತೃಪ್ತಿ ತಂದುಕೊಟ್ಟಿದೆ ನನ್ನ ಎಲ್ಲ ಸಾಧನೆಯ ಹಿಂದೆ ನಮ್ಮ ಪತಿಯವರಾದ ಬಿ ಎನ್ ರೇಣುಕಾ ಪ್ರಸಾದ್ ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಿದ್ದ ಕಾರಣ ಎಲ್ಲ ಹಂತದಲ್ಲೂ ತುಂಬಾ ಸಹಕಾರ ನೀಡಿದರು.
ಪರಿಸರದ ಮೇಲೆ ಹೆಚ್ಚು ಆಸಕ್ತಿ ಇದ್ದ ಕಾರಣ ನಾನು ಕೆಲಸ ನಿರ್ವಹಿಸಿದ ಎಲ್ಲ ಶಾಲೆಗಳಲ್ಲಿಯೂ ಶಿಕ್ಷಕರ ಪೋಷಕರ ಹಾಗೂ ಮಕ್ಕಳ ಸಹಕಾರದೊಂದಿಗೆ ಶಾಲಾ ಕೈತೋಟಗಳನ್ನು ಬೆಳೆಸಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಿದೆ ಇದರ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದ್ದೇನೆ ಮತ್ತು ನಾನು ಕರ್ತವ್ಯ ನಿರ್ವಹಿಸಿದ ಪ್ರತಿಯೊಂದು ಶಾಲೆಗಳಲ್ಲಿ ಪೋಷಕರ ಸಹಕಾರದಿಂದ ಯಶಸ್ವಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ವಿದ್ಯಾರ್ಥಿಗಳ ಹಾಗೂ ಪೋಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದೇನೆ ಪ್ರಾಥಮಿಕ ಶಾಲಾ ಮಕ್ಕಳನ್ನು ಸತತ ಸುಮಾರು ವರ್ಷಗಳ ಕಾಲ ಕ್ಲಸ್ಟರ್, ಹೋಬಳಿ ,ತಾಲೂಕು, ಜಿಲ್ಲಾ ಮಟ್ಟದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಮಕ್ಕಳಲ್ಲಿ ಶಿಸ್ತು ಸತ್ಯ ನಿಷ್ಠೆ ನಾಯಕತ್ವ ಧೈರ್ಯ ಹೊಂದಾಣಿಕೆ ಸಾಹಸ ಮೂಡುವಂತೆ ಮಾಡಿದ ಹಿನ್ನೆಲೆಯಲ್ಲಿ ಹಲವಾರು ಪ್ರಶಸ್ತಿಗಳು ಲಭ್ಯವಾದವು ಎಂದ ಅವರು ಮುಂದಿನ ಉಳಿದಿರುವ ಶಿಕ್ಷಕಿಯ ಸೇವೆಯನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ, ಭೌತಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಗುಣಮಟ್ಟದ ಶಿಕ್ಷಣ ನೀಡುತ್ತೇನೆ ಎಂಬ ಆಸಕ್ತಿ ಇಟ್ಟುಕೊಂಡಿದ್ದೇನೆ ಇದಕ್ಕೆ ಶಿಕ್ಷಣ ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಉತ್ತಮ ಸಹಕಾರ ನೀಡುತ್ತಾರೆ ಎಂದು ಭರವಸೆ ಹೊಂದಿದ್ದೇನೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ ಅವರು ನಾನು ಈ ಪ್ರಶಸ್ತಿ ಪಡೆಯಲು ನಮ್ಮ ಕ್ಲಸ್ಟರ್ ಸಿಆರ್ ಪಿ ಯಶೋದ ಮೇಡಂರವರು ನನಗೆ ಆತ್ಮಸ್ಥೈರ್ಯ ತುಂಬಿದ ಹಿನ್ನೆಲೆಯಲ್ಲಿ ನಾನು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದೆ ಇಲಾಖೆ ಇದಕ್ಕೆ ಸ್ಪಂದಿಸಿ ಪರಿಶೀಲಿಸಿ ನನ್ನ ವೃತ್ತಿಯ ಮೇಲೆ ನಂಬಿಕೆಯಿಟ್ಟು ಪ್ರಶಸ್ತಿ ನೀಡಿರುವುದಕ್ಕೆ ನಾನು ತುಂಬಾ ಆಭಾರಿಯಾಗಿದ್ದೇನೆ ಮುಂದಿನ ದಿನಗಳಲ್ಲಿಯೂ ಸಹ ಉಳಿದ ಸೇವಾ ಅವಧಿಯನ್ನು ಪ್ರಾಮಾಣಿಕವಾಗಿ ಹಾಗೂ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಸರ್ಕಾರಿ ಶಿಕ್ಷಕಿಯಕರ್ತವ್ಯವನ್ನು ನಿರ್ವಹಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರನ್ನು ಒಳಗೊಂಡಂತೆ ಪದಾಧಿಕಾರಿಗಳು ಮತ್ತು ಗ್ರಾಮದ ಸಾರ್ವಜನಿಕರು ಹಾಗೂ ಅದರಲ್ಲೂ ಹಳೆ ವಿದ್ಯಾರ್ಥಿಗಳು ಶಾಲೆಯ ವಿಚಾರವಾಗಿ ಉತ್ತಮ ಪ್ರೋತ್ಸಾಹ ನೀಡುತ್ತಿರುವುದು ತುಂಬ ಸಂತೋಷದ ವಿಚಾರ ಎಂದ ಅವರು ಜಿಲ್ಲೆಯ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದುಕೊಳ್ಳಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಭಾವುಕರಾದರು.ಜಿಲ್ಲಾ ಪ್ರಶಸ್ತಿ ಪಡೆದ ಶಿಕ್ಷಕಿ ಎಂಸಿ ಲೀಲಾವತಿಯವರಿಗೆ ಪೋಷಕರುಗಳಿಂದ, ಹಳೆವಿದ್ಯಾರ್ಥಿಗಳಿಂದ,ಶಿಕ್ಷಕಬಂಧು