
ತುಮಕೂರು: ಪಾವಗಡದ ಶ್ರೀ ರಾಮ ಕೃಷ್ಣ ಸೇವಾಶ್ರಮದ ಶಾರದಾದೇವಿ ಕಣ್ಣಿನ ಆಸ್ಪತ್ರೆ, ಸಂಶೋಧನಾ ಕೇಂದ್ರದ ರಜತ ಮಹೋತ್ಸವ ಕಟ್ಟಡ ಇಂದು ಲೋಕಾರ್ಪಣೆಗೊಳ್ಳುತ್ತಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾ ಹಿತಿ ನೀಡಿದ ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥ ಸ್ವಾಮಿ ಜಪಾನಂದಜೀ ಅವರು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಸಹಕಾರ ದೊಂದಿಗೆ 3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಯಂತ್ರೋಪಕರಣಗಳೊಂದಿಗೆ 50 ಬೆಡ್‌ಗಳನ್ನು ಅಳವಡಿಸಿ ನೂತನ ಕಟ್ಟಡವನ್ನು ಜನರ ಸೇವೆಗೆಂದು ಸ್ಥಾಪಿಸಿದ್ದು, ಉಪರಾಷ್ಟಪತಿಗಳಾದ ವೆಂಕಯ್ಯನಾಯ್ಡು ಅವರು ವೆಬಿ ನಾರ್ ಮೂಲಕ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸುತ್ತಿರುವುದು, ಗಡಿನಾಡಿನ ಕೀರ್ತಿಯನ್ನು ಹೆಚ್ಚಿಸಿದೆ ಎಂದರು.
ಇಂದು ಬೆಳಿಗ್ಗೆ 10.30ಕ್ಕೆ ಪಾವಗಡದ ಸ್ವಾಮಿ ವಿವೇಕಾನಂದ ಸಂಘ ಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆಯುವ ಕಾರ‍್ಯಕ್ರಮದ ಸಾನಿಧ್ಯವನ್ನು ಸಿದ್ಧಗಂಗೆಯ ಶ್ರೀ ಸಿದ್ಧಲಿಂಗಸ್ವಾಮೀಜಿ ವಹಿಸುವರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಡಾ.ಕೆ.ಸುಧಾಕರ್, ಬಿ.ಸಿನಾಗೇಶ್, ಮಾಜಿ ಸಚಿವರಾದ ಎಸ್.ಸುರೇಶ್‌ಕುಮಾರ್, ವೆಂಕಟ ರವಣಪ್ಪ ಭಾಗವಹಿಸುವರು. ಇನ್ಫೋಸಿಸ್ ಹಿರಿಯ ಉಪನಿರ್ದೇಶಕ ಗುರುರಾಜ್ ಬಿ.ದೇಶಪಾಂಡೆ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್ಪಿ ರಾಹುಲ್‌ಕುಮಾರ್ ಶಹಾಪುರವಾಡ್, ಜಿಪಂ ಸಿಇಒ ವಿದ್ಯಾಕುಮಾರಿ, ಲೋಕಾಯುಕ್ತ ಡಿವೈಎಸ್ಪಿ ಎಂ.ಆರ್.ಗೌತಮ್, ಮಾಜಿ ಶಾಸಕ ಕೆ. ಎಂ.ತಿಮ್ಮರಾಯಪ್ಪ, ಎಸಿ ಸೋಮಪ್ಪ ಕಡಕೋಳ್ ಪಾಲ್ಗೊಳ್ಳಲಿದ್ದಾರೆ.