ತುಮಕೂರು: ಬೆಂಗಳೂರಿನ ವೈ.ಎಸ್.ಇಂಟರ್ ನ್ಯಾಷನಲ್ ಫ್ಯಾಷನ್ ವೀಕ್ ನಲ್ಲಿ ತುಮಕೂರಿನ ಪುಟಾಣಿ ಪ್ರತಿಭೆ ಹಾನ್ಸಿ ಗುರುಪ್ರಸಾದ್ ಪ್ರಥಮ ಸ್ಥಾನಗಳಿಸಿದ್ದು, ಗೋವಾದಲ್ಲಿ ನಡೆಯ ಲಿರುವ ಮುಂದಿನ ಹಂತದ ಸ್ಪರ್ಧೆಗೆ ಎದುರು ನೋಡುತ್ತಿದ್ದಾಳೆ.
ಸುದ್ದಿಗೋಷ್ಠಿಯಲ್ಲಿ ವೈ.ಎಸ್.ಇಂಟರ್ ನ್ಯಾಷನಲ್ ಫ್ಯಾಷನ್ ವೀಕ್‌ನ ನಿರ್ದೇಶಕ ಯಶ್ ಅವರು, ತುಮಕೂರು ಜಿಲ್ಲೆಯ ಪುಣ್ಯಶ್ರೀ, ಸು ಮಾ, ಹ್ಯಾನ್ಸಿ, ಪ್ರಿಯಾ ಸೇರಿದಂತೆ ಹಲವರು ಭಾಗವಹಿಸಿದ್ದರು, ಅವರಲ್ಲಿ ಪ್ರಿಯಾ ಮಿಸ್ ವಿಭಾಗದಲ್ಲಿ, ಹಾನ್ಸಿ ಲಿಟಲ್ ಪ್ರಿನ್ಸೆಸ್ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಲಿಟಲ್ ಪ್ರಿನ್ಸೆಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಾನ್ಸಿ ಅಪ್ರತಿಮ ಪ್ರತಿಭೆ, ಚಿಕ್ಕ ಮಕ್ಕಳಲ್ಲಿಯೇ ಉತ್ತಮವಾದ ಫ್ಯಾಷನ್ ಜ್ಞಾನವನ್ನು ಹೊಂದಿದ್ದಾಳೆ, ಭಯವಿಲ್ಲದೆ ಕ್ಯಾಟ್ ವಾಕ್ ಮಾಡುವ ಚಾಕಚಕ್ಯತೆ ಹೊಂದಿದ್ದಾಳೆ ಎಂದು ಶ್ಲಾಘಿಸಿದರು. ಹಾನ್ಸಿ ಅವರ ತಂದೆ ಸಿದ್ಧಗಂಗಾ ಮಠದ ಸಂಸ್ಕೃತ ಪ್ರಾಧ್ಯಾಪಕ ಗುರುಪ್ರಸಾದ್, ತಾಯಿ, ತನ್ನ ನಾಲ್ಕನೇ ವಯಸ್ಸಿಗೆ ಸಂಸ್ಕೃತ ಶ್ಲೋಕಗಳನ್ನು ಹೇಳುವ ಮೂಲಕ ಗಮನ ಸೆಳೆದಿದ್ದು, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ವಿಡಿಯೋ ಆಲ್ಬಂ, ಕಿರುಚಿತ್ರದಲ್ಲಿಯೂ ಅಭಿ ನಯಿಸುವ ಮೂಲಕ ಗುರುತಿಸಿಕೊಂಡಿದ್ದಾಳೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ನಮ್ಮ ಸಂಸ್ಥೆ ಫ್ಯಾಷನ್ ವೀಕ್ ಹಮ್ಮಿಕೊಳ್ಳುತ್ತಿದ್ದು, ಆಂಧ್ರ ಪ್ರದೇಶ, ತಮಿಳು ನಾಡು ಮತ್ತು ಆಂಧ್ರ ಪ್ರದೇಶದಿಂದ ಸುಮಾರು 70 ಸ್ಪರ್ಧಿಗಳು ಭಾಗವಹಿಸಿದ್ದರು, ಈ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವವರು ಮುಂದಿನ ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ, ಅಂತರಾಜ್ಯ ಮಟ್ಟದ ಸ್ಪರ್ಧೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರಕಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೈ.ಎಸ್.ಇಂಟರ್ ನ್ಯಾಷನಲ್ ರಾಯಭಾರಿ ವಿದ್ಯಾಶ್ರೀ, ಫ್ಯಾಷನ್ ಕೊರಿಯಾಗ್ರಫರ್ ರಮೀಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.