
ತುಮಕೂರು : ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ವಕೀಲ ಹೆಚ್. ಕೆಂಪರಾಜಯ್ಯ ಸತತ ಎರಡನೇ ಅವಧಿಗೆ ಪುನರ್ ಆಯ್ಕೆಯಾಗಿದ್ದಾರೆ.
ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು ಕಾರ್ಯಕಾರಿ ಮಂಡಳಿ ಸ್ಥಾನಗಳಿಗೆ ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಚುನಾವಣೆ ನಡೆಯಿತು.
ಶುಕ್ರವಾರ ತಡರಾತ್ರಿ 12 ಗಂಟೆಯವರಿಗೂ ಮತ ಎಣಿಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕೆಂಪರಾಜಯ್ಯ ಮತ್ತು ವಸಂತಕುಮಾರ್ ನಡುವೆ ತೀವ್ರ ಪೈಪೋಟಿ ನಡೆದು ಅಂತಿಮವಾಗಿ ಕೆಂಪರಾಜಯ್ಯ ಮರು ಆಯ್ಕೆಯಾದರು.
ಮೊದಲ ಸುತ್ತಿನಿಂದ ಕೊನೆಯ 15ನೇ ಸುತ್ತಿನವರೆಗೂ ಲೀಡ್ ಕಾಯ್ದುಕೊಂಡ ಕೆಂಪರಾಜಯ್ಯ ಅವರು ಅಂತಿಮವಾಗಿ ಗೆಲುವಿನ ನಗೆ ಬೀರಿದ್ದಾರೆ.
ಮೊದಲ ಸುತ್ತಿನಲ್ಲಿ 87 ಮತಗಳು, 3ನೇ ಸುತ್ತಿನಲ್ಲಿ 128, 4ನೇ ಸುತ್ತಿನಲ್ಲಿ 173, ಐದನೇ ಸುತ್ತಿನಲ್ಲಿ 209, 6ನೇ ಸುತ್ತಿನಲ್ಲಿ 254, 7ನೇ ಸುತ್ತಿನಲ್ಲಿ 287, 8ನೇ ಸುತ್ತಿನಲ್ಲಿ 321, 10ನೇ ಸುತ್ತಿನಲ್ಲಿ 401 ಮತಗಳು ಹಾಗೂ ಕೊನೆಯ ಸುತ್ತಿನಲ್ಲಿ 514 ಮತಗಳನ್ನು ಪಡೆದು ಅಂತಿಮವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರವಿಗೌಡ ಅವರು 513 ಪಡೆದು ತಮ್ಮ ಪ್ರತಿ ಸ್ಪರ್ದಿ ಭವ್ಯ (199) ವಿರುದ್ಧ ಉಪಾಧ್ಯಕ್ಷರಾಗಿ ಜಯ ಸಾಧಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಹಿರೇಹಳ್ಳಿ ಅವರು 506 ಮತ ಪಡೆಯುವ ಮೂಲಕ ಚುನಾಯಿತರಾಗಿದ್ದಾರೆ.
ಜಂಟಿ ಕಾರ್ಯದರ್ಶಿಆಗಿ ಧನಂಜಯ 477 ಮತ ಪಡೆದು ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ಸಿಂಧೂ 572 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಕಾರ್ಯಕಾರಿ ಮಂಡಳಿಯಮಂಡಳಿ ಸ್ಥಾನಕ್ಕೆ ಗೋವಿಂದರಾಜು.ಪಿ(806).,ಡಿ.ಎ.ಜಗದೀಶ್( 894),ಶ್ರೀನಿವಾಸಮೂರ್ತಿ ಕೆ.ವಿ (844), ಶ್ರೀನಿವಾಸಮೂರ್ತಿ ವಿ.ಕೆ (622), ಸುರೇಶ್ ಎಸ್( 792) ಆಯ್ಕೆಯಾಗಿದ್ದಾರೆ.
ಮಹಿಳಾ ಮೀಸಲು ಸ್ಥಾನಕ್ಕೆ ಪದ್ಮಶ್ರೀ ಸಿ.ಆರ್(696) , ಮತ್ತು ಸೇವಾಪ್ರಿಯ ಜೆ.ಎಸ್ (855). ಆಯ್ಕೆಯಾಗಿದ್ದಾರೆ.



