ಗುಬ್ಬಿ : ಅವೈಜ್ಞಾನಿಕ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರೋದಿಸಿ ಗುಬ್ಬಿ ತಾಲ್ಲೋಕಿನ ಸಾಗರನಹಳ್ಳಿ ಗೇಟ್ ನಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟಿಸುವ ಹಿನ್ನೆಲೆ ಹಲವು ಮಠಾಧೀಶರು ಸೇರಿದಂತೆ ಎನ್. ಡಿ .ಎ ಮಿತ್ರ ಪಕ್ಷಗಳ ಶಾಸಕರು ಮತ್ತು ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಬೃಹತ್ ಪಾದಯಾತ್ರೆಗೆ ಮುಂದಾಗಿರುವ ಘಟನೆ ನಡೆದಿದೆ.
ನಮ್ಮ ನೀರು ನಮ್ಮ ಹಕ್ಕು ಶೀರ್ಷಿಕೆಯಡಿ ಪಾದಯಾತ್ರೆಗೆ ಇಂದು ಚಾಲನೆ ನೀಡಿ ಮಾತನಾಡಿದ ಶಾಸಕರು ಮತ್ತು ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ರೈತರ ಜತೆಗೂಡಿ ರಸ್ತೆಯುದ್ದಕ್ಕೂ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತ ಹೆಜ್ಜೆಹಾಕುತ್ತಿರುವ ಸಂದರ್ಭದಲ್ಲಿ ಮಠಾಧೀಶರು ಸೇರಿದಂತೆ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ,ತುರುವೇಕೆರೆ ಶಾಸಕ ಎಂ. ಟಿ ಕೃಷ್ಣಪ್ಪ, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಮಸಾಲೆ ಜಯರಾಮ್,ಮಾಜಿ ಶಾಸಕ ನಿಂಗಪ್ಪ, ಬಿ ಎಸ್ ನಾಗರಾಜು, ದಿಲೀಪ್ ಕುಮಾರ್ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.