ಕುಣಿಗಲ್ : ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಸುಮಾರು ಐದು ವರ್ಷದ ಹೆಣ್ಣು ಚಿರತೆಯೊಂದು ಸೆರೆ ಸಿಕ್ಕಿರುವ ಘಟನೆ ಮಂಗಳವಾರ ಬೆಳಿಗ್ಗೆ ಜರುಗಿದೆ.
ತಾಲೂಕಿನ ಹುಲಿಯೂರುದುರ್ಗ ಹೋಬಳಿ ನಿಡ ಸಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಬ್ಬಳ್ಳಿ ಗ್ರಾಮದಲ್ಲಿ ಚಿರತೆಯೊಂದು ಹುಲಿಯೂರುದುರ್ಗ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಸಿಲುಕಿಕೊಂಡಿದೆ. ಈ ಚಿರತೆ ಸೋಮವಾರ ಕೆಬ್ಬಳ್ಳಿ ಗ್ರಾಮದ ಮಹಿಳೆ ಪುಟ್ಟ ಲಿಂಗಮ್ಮ (55) ಸಂಜೆ 5:00 ವೇಳೆಯಲ್ಲಿ ಆಡುಗಳನ್ನು ಮೇಯಿಸಿಕೊಂಡು ತಮ್ಮ ಮನೆಗೆ ವಾಪಸ್ ಹೋಗುವ ವೇಳೆಯಲ್ಲಿ ಆಡಿನ ಮೇಲೆ ದಾಳಿ ಮಾಡಲು ಬಂದ ಚಿರತೆಯನ್ನು ಓಡಿಸಲು ಹೋದಂತಹ ಸಂದರ್ಭದಲ್ಲಿ ಮಹಿಳೆ ಮೈಮೇಲೆ ಎರಗಿ ಬಲಗೈಯನ್ನು ಗಾಯಗೊಳಿಸಿದೆ. ಅದೃಷ್ಟವಶಾತ್ ಮಹಿಳೆ ಪ್ರಾಣ ಅಪಾಯದಿಂದ ಪರಾಗಿದ್ದಾರೆ. ತಕ್ಷಣ ವಿಷಯ ತಿಳಿದ ಗ್ರಾಮ ಪಂಚಾಯತಿ ಸದಸ್ಯ ನವೀನ್ ಮತ್ತು ಗ್ರಾಮದ ಆನಂದ್, ಕಿರಣ್, ದೊಡ್ಡರಾಜು ಅವರುಗಳು ವಿಷಯವನ್ನು ಹುಲಿಯೂರುದುರ್ಗ ಅರಣ್ಯಾಧಿಕಾರಿಗಳಿಗೆ ಮುಟಿಸಿದ್ದಾರೆ ಕೂಡಲೇ ಕಾರ್ಯ ಪ್ರವೃತ್ತರಾದ ವಲಯ ಅರಣ್ಯ ಅಧಿಕಾರಿ ಜಗದೀಶ್ ಗ್ರಾಮದವರ ಸಹಕಾರದಿಂದ ಹಾಗೂ ಅರಣ್ಯ ಸಿಬ್ಬಂದಿಗಳ ಸಹಕಾರ ದೊಂದಿಗೆ ತಕ್ಷಣವೇ ಕೆಬ್ಬಳಿ ಸಮೀಪ ಚಿರತೆಯನ್ನು ಸೆರೆ ಹಿಡಿಯಲು ಸೋಮವಾರ ಸಂಜೆ ಕೆಬ್ಬಳ್ಳಿ ಗ್ರಾಮದ ಸಮೀಪ ಬೋನನ್ನು ಇಟ್ಟಿದ್ದರು. ಚಿರತೆಯಿಂದ ಗಾಯಗೊಂಡ ಮಹಿಳೆ ಪುಟ್ಲಿಂಗಮ್ಮ ತನ್ನ ಒಂದು ಆಡನ್ನೇ ಬೋನಿನ ಒಳಭಾಗಕ್ಕೆ ಇಡಲು ನೀಡಿದರು. ಸೋಮವಾರ ಸಂಜೆ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಸರೆ ಸಿಕ್ಕಿದೆ. ಸರೆ ಸಿಕ್ಕಿರುವ ವಿಷಯ ತಿಳಿದ ಸುತ್ತಮುತ್ತಲ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಸಂಬಂಧ ಹುಲಿಯೂರುದುರ್ಗ ವಲಯ ಅರಣ್ಯಾಧಿಕಾರಿ ಜಗದೀಶ್ ಅವರು ಪತ್ರಿಕೆಯೊಂದಿಗೆ ಮಾತನಾಡಿ ಗ್ರಾಮಸ್ಥರ ಸಹಕಾರ ಮತ್ತು ನಮ್ಮ ಅರಣ್ಯ ಸಿಬ್ಬಂದಿಗಳು, ತುಮಕೂರು ಡಿಎಫ್ಓ ಅನುಪಮರವರ ಮಾರ್ಗದರ್ಶನದೊಂದಿಗೆ ಸರೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಸಿಬ್ಬಂದಿಗಳು ಪತ್ರಿಕೆಯೊಂದಿಗೆ ಮಾತನಾಡಿ ಬೊನಿಗೆ ಬೀಳುವ ಚಿರತೆಯನ್ನು ಸುರಕ್ಷಿತವಾಗಿ ಕಾಪಾಡಲು ಸಿಬ್ಬಂದಿಗಳಿಗೆ ಸುರಕ್ಷತೆ ದೃಷ್ಟಿಯಿಂದ ಸರಿಯಾದ ಪರಿಕರಗಳು ಇಲ್ಲದೆ ಜೀವದ ಅಂಗನ್ನು ತೊರೆದು ಬೋನಿನ ಒಳಭಾಗದಲ್ಲಿರುವ ಚಿರತೆಯನ್ನು ಸಾಹಸ ಮಾಡಿ ಸುರಕ್ಷಿತವಾಗಿ ಹೊರಭಾಗಕ್ಕೆ ತಂದು ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ಈ ವೇಳೆಯಲ್ಲಿ ಆಕಸ್ಮಿಕವಾಗಿ ಚಿರತೆ ತಪ್ಪಿಸಿಕೊಂಡು ನಮ್ಮಗಳ ಮೇಲೆ ಎರಗಿದರೆ ಪ್ರಾಣಪಾಯ ತಪ್ಪಿದ್ದಲ್ಲ ಕುಟುಂಬಗಳ ಗತಿ ಏನು? ಆದ್ದರಿಂದ ನಮ್ಮಗಳ ಸುರಕ್ಷತೆ ದೃಷ್ಟಿಯಿಂದ ಇಲಾಖೆ ಸುರಕ್ಷಿತ ಪರಿಕರಗಳನ್ನು ಒದಗಿಸಬೇಕೆಂದು ಪತ್ರಿಕೆ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇಲಾಖೆ ಅರಣ್ಯ ಸಿಬ್ಬಂದಿಗಳ ಮನವಿಯನ್ನು ಗಂಭೀರವಾಗಿ ಪರಿಗಣಿಸುವರೆ ಎಂದು ಕಾದು ನೋಡಬೇಕಾಗಿದೆ?
ವರದಿ:ರೇಣುಕಾ ಪ್ರಸಾದ್