ಕುಣಿಗಲ್ಕ್ರೈಂ ನ್ಯೂಸ್ಜಿಲ್ಲೆತುಮಕೂರು
ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ : ಬೈಕ್ ಸಾವರರಿಬ್ಬರ ಧಾರುಣ ಸಾವು
ಕುಣಿಗಲ್ : ದ್ವಿಚಕ್ರ ವಾಹನ ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಜರುಗಿದೆ.
ತಾಲೂಕಿನ ಮದ್ದೂರು ರಸ್ತೆಯ ರಾಜ್ಯ ಹೆದ್ದಾರಿ 33 ರ ಗಿರಿಗೌಡನಪಾಳ್ಯ ಗೇಟ್ ಸಮೀಪ ಸಾಯಿ ಡಾಬಾ ಮುಂಭಾಗದಲ್ಲಿ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಟಿ ಹೊಸಹಳ್ಳಿ ಗ್ರಾಮದ ಯೋಗಾನಂದ (25) ಶ್ರೀನಿವಾಸ ಗೌಡ( 22) ಸ್ಥಳದಲ್ಲೇ ಸಾವನಪ್ಪಿದ್ದಾರೆ ಇವರಿಬ್ಬರೂ ತಮ್ಮ ಸ್ವಗ್ರಾಮದಿಂದ ಕುಣಿಗಲ್ ಪಟ್ಟಣಕ್ಕೆ ತಮ್ಮ ಸ್ವಂತ ಕೆಲಸ ನಿಮಿತ್ತ ಬರುವ ವೇಳೆಯಲ್ಲಿ ಕ್ಯಾಂಟರ್ ವಾಹನ ಏಕಾಏಕಿ ದ್ವಿಚಕ್ರವಾಹನಕ್ಕೆ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ತಿಳಿಸಿದ್ದಾರೆ ಈ ಸಂಬಂಧ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.