ದಲಿತ ಮಹಿಳೆ ಅಂತ್ಯ ಸಂಸ್ಕಾರಕ್ಕೆ ಅರಣ್ಯ ಇಲಾಖೆ ಅಡ್ಡಿ : ಇಲಾಖೆಯ ಧೋರಣೆ ಖಂಡಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಶಾಸಕ ಬಿ.ಸುರೇಶ್ ಗೌಡ
ತುಮಕೂರು : ಅರಣ್ಯ ಇಲಾಖೆ ತಗಾದೆ ತೆಗೆದು ದಲಿತರ ಅಂತ್ಯ ಸಂಸ್ಕಾರಕ್ಕೆ ಜಾಗ ನೀಡದೆ ತೊಂದರೆ ನೀಡಿದ ಇಲಾಖೆ ಮತ್ತು ಸರ್ಕಾರದ ವಿರುದ್ಧವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ ಸುರೇಶ ಗೌಡ.ಪ್ರತಿಭಟನೆ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ತುಮಕೂರು ತಾಲ್ಲೂಕು ರಾಮಗೊಂಡನಹಳ್ಳಿಯಲ್ಲಿ ನಡೆಯಿತು.
1947 – 48ನೇ ಸಾಲಿನಿಂದ ಲಕ್ಷ್ಮಿದೇವಮ್ಮ ಎಂಬುವ ದಲಿತ ಮಹಿಳೆ ರಾಮಗೊಂಡನಹಳ್ಳಿಯಲ್ಲಿ ಉಳಿಮೆ ಮಾಡಿಕೊಂಡು ಬಂದಿದ್ದು 1990ರಲ್ಲಿ ಫಾರಂ ನಂಬರ್ 53 ರಲ್ಲಿ ಸರ್ಕಾರಕ್ಕೆ ಬಗರಹುಕುo ಸಾಗುವಳಿ ಸಕ್ರಮೀಕರಣ ಯೋಜನೆ ಅಡಿಯಲ್ಲಿ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸುತ್ತಾರೆ.
ಶಾಸಕ ಬಿ.ಸುರೇಶ್ ಗೌಡರ ನೇತೃತ್ವದ ಬಗುರುಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯು ಸದರಿ ಅರ್ಜಿಯನ್ನು ಪರಿಶೀಲಿಸಿ ಎಲ್ಲ ಇಲಾಖೆಗಳಿಂದ ಎನ್ ಓ ಸಿ ಪಡೆದು 2018 ರಲ್ಲಿ 3 ಎಕರೆ 20 ಗುಂಟೆ ಜಮೀನನ್ನು ಸದರೀ ಅರ್ಜಿದಾರರಿಗೆ ಮಂಜೂರು ಮಾಡುತ್ತದೆ.ಸದರಿ ಮಂಜೂರಾತಿ ಅನ್ವಯ ತಹಸಿಲ್ದಾರ್ ತುಮಕೂರ್ ರವರು ಆರ್ ಟಿ ಸಿ ಯಲ್ಲಿ ನಮೂದು ಮಾಡಿಕೊಡದೆ ವಿಳಂಬ ಮಾಡಿದ ನಿಮಿತ್ತವಾಗಿ ಅರ್ಜಿದಾರರು ಪಹಣಿಯಲ್ಲಿ ನಮೂದು ಮಾಡಿಕೊಡುವಂತೆ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತಾರೆ.
ಇದನ್ನು ಮಾನ್ಯ ಮಾಡಿದ ಉಚ್ಚ ನ್ಯಾಯಾಲಯವು ತಾಸಿಲ್ದಾರ್ ಅವರಿಗೆ ಕೂಡಲೇ ಪಹಣಿ ನಮೂದು ಮಾಡಿ ಕೊಡುವಂತೆ ಸೂಚಿಸಿ ಆದೇಶ ಮಾಡುತ್ತದೆ.
ಸದರಿ ಆದೇಶವನ್ನು ಪ್ರಶ್ನಿಸಿ, ಅರಣ್ಯ ಇಲಾಖೆಯವರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುತ್ತಾರೆ ಮತ್ತೆ ಉಚ್ಛ ನ್ಯಾಯಾಲಯವು ಮಾನ್ಯ ಉಪ ವಿಭಾಗಾಧಿಕಾರಿಗಳ ಹಂತದಲ್ಲಿ ವಿಚಾರಣೆ ಕೈಗೆತ್ತಿಕೊಂಡು ಸಾಧಕ ಬಾದಕಗಳ ಪರಿಶೀಲಿಸಿ ನಿರ್ಣಯ ಕೈಗೊಳ್ಳುವಂತೆ ಸೂಚನೆ ನೀಡಿ ವಾಪಸ್ ಕಳುಹಿಸಿರುತ್ತದೆ.
ಹೀಗಿರುವಾಗ ದಿನಾಂಕ 21. 9 2024 ರಂದು ಲಕ್ಷ್ಮಿ ದೇವಮ್ಮ ಅವರ ತಾಯಿಯವರು ಮೃತಪಟ್ಟಿದ್ದು ಮೃತ ವ್ಯಕ್ತಿಯನ್ನು ಅಂತ್ಯಸಂಸ್ಕಾರ ನೆರವೇರಿಸಲು ಹೋದಾಗ ಪೊಲೀಸ್ ಬಂದ ಬಸ್ತ್ ನೊಂದಿಗೆ ಬಂದ ಅರಣ್ಯ ಇಲಾಖೆಯವರು ಅಂತ್ಯಸಂಸ್ಕಾರ ನಡೆಸಲು ಬಿಟ್ಟಿರುವುದಿಲ್ಲ.
ಈ ವಿಷಯ ತಿಳಿದ ಶಾಸಕ ಬಿ ಸುರೇಶ್ ಗೌಡರು ಕೂಡಲೇ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯವರ ವರ್ತನೆ ಹಾಗೂ ಪೊಲೀಸ್ ಸಿಬ್ಬಂದಿಯ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಆದರೂ ಕೂಡ ಅಂತ್ಯಸಂಸ್ಕಾರ ನಡೆಸಲು ಬಿಡಲು ಒಪ್ಪದ ಅರಣ್ಯ ಇಲಾಖೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಾಸಕ ಬಿ ಸುರೇಶ್ ಗೌಡರು.
ಮೂಲ ದಾಖಲೆಗಳನ್ನು ಪರಿಶೀಲಿಸಿದರು ದಾಖಲೆಗಳ ಅನ್ವಯ ಅರಣ್ಯ ಇಲಾಖೆಯವರಿಗೆ ಯಾವುದೇ ನ್ಯಾಯಾಲಯದಲ್ಲಿ ತಡೆಯಾಗನೆ ಇರುವುದಿಲ್ಲ ಆದರೂ ಕೂಡ ತೊಂದರೆ ನೀಡುತ್ತಿರುವ ಅರಣ್ಯ ಇಲಾಖೆಯವರನ್ನು ಪ್ರಶ್ನಿಸಿ ದಾಖಲೆಗಳನ್ನು ನೀಡಿ ಲಕ್ಷ್ಮಿದೇವಮ್ಮ ಅವರು ಮೂಲ ಮಾಲೀಕರಾಗಿರುವುದರಿಂದ ಹಾಗೂ ತಡೆಯಾಜ್ಞೆ ಇಲ್ಲದೆ ಇರುವುದನ್ನು ಮನವರಿಕೆ ಮಾಡಿ
ಸದರಿ ಸ್ಥಳದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿದರು.
ಅಂತ್ಯಸಂಸ್ಕಾರ ನೆರವೇರುವವರೆಗೂ ಕೂಡ ಮಾನ್ಯ ಶಾಸಕರು ಉಪಸ್ಥಿತರಿದ್ದು. ಗ್ರಾಮಸ್ಥರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಮೃತ ವ್ಯಕ್ತಿಗೆ ಶಾಂತಿ ಕೋರಿದರು.
ಈ ರೀತಿ ಪ್ರಕರಣಗಳು ಇಡೀ ರಾಜ್ಯದಾದ್ಯಂತ ಮರುಕಳಿಸುತ್ತಿದ್ದು ಅರಣ್ಯ ಇಲಾಖೆಯವರಿಗೆ ಮತ್ತು ಸರ್ಕಾರಕ್ಕೆ ಶೋಭೆ ತರುವಂತಹ ಸಂಗತಿಯಲ್ಲ . ಧ್ವನಿ ಇಲ್ಲದೆ ಇರುವಂತ ದಲಿತರ ವಿಚಾರದಲ್ಲಿ ಅದು ತುಂಬಾ ನೋವಿನ ಸಂಗತಿ ಆಗಿರುವಂತಹ ಮೃತ ವ್ಯಕ್ತಿ ಅಂತ್ಯ ಸಂಸ್ಕಾರ ನೆರವೇರಿಸಲು ಜಾಗ ನೀಡದೆ ಆಟ ಆಡುತ್ತಿರುವ ಅರಣ್ಯ ಇಲಾಖೆಯ ಧೋರಣೆ ವಿರುದ್ಧ ಅತ್ಯುಘ್ರ ಶಬ್ದಗಳಲ್ಲಿ ಸುರೇಶ್ ಗೌಡ ಖಂಡಿಸಿದರು.
ಇದು ಸರ್ಕಾರದ ನಿಯಮಾವಳಿಗಳಲ್ಲಿ ಸೇರ್ಪಡೆಯಾಗಬೇಕು ಯಾರಿಗೆ ಹಕ್ಕುಪತ್ರ ನೀಡಿದ್ದೇವೆ ಅಂತಹ ಜಾಗಗಳಲ್ಲಿ ಅಂತ್ಯಸಂಸ್ಕಾರ ಮನೆ ನಿರ್ಮಾಣ ಮೂಲಭೂತ ಸೌಕರ್ಯಗಳನ್ನು ರೈತರಿಗೆ ಕಲ್ಪಿಸಿಕೊಡಲು ಸರ್ಕಾರ ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಸಂದರ್ಭದಲ್ಲಿ ಗ್ರಾಮಸ್ಥರು ಬಿಜೆಪಿ ಮುಖಂಡ ರವೀಶ್ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.