ತುಮಕೂರು : ತುಮಕೂರ ದಸರಾ ಸಮಿತಿವತಿಯಿಂದ 33ನೇ ವರ್ಷ ದಸರಾ ಉತ್ಸವದ ಅಂಗವಾಗಿ 2023ರ ಅಕ್ಟೋಬರ್ 16-17 ರಂದು ಶಾಲಾ,ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರಿಗಾಗಿ ರಾಜ್ಯಮಟ್ಟದ ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳ ಸ್ಪರ್ಧೆಯನ್ನು ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ಕಳೆದ 33 ವರ್ಷಗಳ ದಸರಾ ಉತ್ಸವದಲ್ಲಿ ವೈವಿದ್ಯಮಯ ಕಾರ್ಯಕ್ರಮಗಳ ಮೂಲಕ ವಿಭಿನ್ನವಾಗಿ ದಸರಾ ಹಬ್ಬವನ್ನು ಆಚರಿಸುತ್ತಾ ಬಂದಿರುವ ತುಮಕೂರು ದಸರಾ ಸಮಿತಿ,ತುಮಕೂರು ನಗರದ ಸುತ್ತಮುತ್ತಲ ಮುಜರಾಯಿ ಮತ್ತು ಖಾಸಗಿ ದೇವಾಲಯ ಉತ್ಸವ ಮೂರ್ತಿಗಳ ಮೆರವಣಿಗೆಯನ್ನು ಪ್ರತಿವರ್ಷ ಒಂದೊಂದು ಸಮುದಾಯದ ಸ್ವಾಮೀಜಿಗಳು, ಮಠಾಧೀಶರ ನೇತೃತ್ವದಲ್ಲಿ ದಸರಾ ಉತ್ಸವ ಮೆರವಣಿಗೆ ಆಯೋಜಿಸುತ್ತಾ ಬಂದಿದ್ದು,ಆರಂಭದಲ್ಲಿ ಕೇವಲ ಮೂರು ಉತ್ಸವ ಮೂರ್ತಿಗಳಿಂದ ಪ್ರಾರಂಭಗೊಂಡ ಮೆರವಣಿಗೆ ಇಂದು 107 ದೇವಾಲಯಗಳ ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದು, ದಸರಾ ಉತ್ಸವದ ಮೆರಗನ್ನು ಹೆಚ್ಚಿಸಿದೆ.
ಪ್ರತಿವರ್ಷ ಪ್ರಸಿದ್ದ ಕಲಾ ತಂಡಗಳನ್ನು ಉತ್ಸವ ಸಂದರ್ಭದಲ್ಲಿ ಆಹ್ವಾನಿಸಿ,ಅವರಿಂದ ಸಂಗೀತ,ನೃತ್ಯ,ಭಜನೆ, ದೇವರನಾಮ, ಹಿರಿಯರು,ವಾಗ್ಮಿಗಳಿಂದ ಉಪನ್ಯಾಸಗಳನ್ನು ಏರ್ಪಡಿಸುವ ಮೂಲಕ ದಸರಾ ಒಂದು ಮನರಂಜನೆ ಉತ್ಸವವಾಗದೆ, ಹಿಂದೂ ಧರ್ಮಿಯರ ಜಾಗೃತಿಯ ಉತ್ಸವಾಗಿ ಮಾರ್ಪಾಟಾಗಿರುವುದನ್ನು ಕಾಣಬಹುದಾಗಿದೆ.2023ರ ಅಕ್ಟೋಬರ್ 21-22 ಮತ್ತು 23 ರಂದು ದಸರಾ ಉತ್ಸವ ತುಮಕೂರಿನ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ತುಮಕೂರು ದಸರಾ ಸಮಿತಿಯ 33ನೇ ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 16-17 ರಂದು ಆಯೋಜಿಸಿರುವ ರಾಜ್ಯಮಟ್ಟದ ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳ ಸ್ಪರ್ಧೆಯನ್ನು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದು, ರಂಗಕರ್ಮಿ ಹಾಗೂ ಚಲನಚಿತ್ರ ನಿರ್ದೇಶಕರಾದ ಟಿ.ಎಸ್.ನಾಗಾಭರಣ ಅವರು ದಸರಾ ನಾಟಕಸ್ಪರ್ಧೆಗೆ ಚಾಲನೆ ನೀಡುವರು.ನಾಡಿನ ಹಿರಿಯ ಚಲನಚಿತ್ರ ನಟರು,ರಂಗಭೂಮಿ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯಮಟ್ಟದ ತುಮಕೂರು ದಸರಾ ನಾಟಕ ಸ್ಪರ್ಧೆಯಲ್ಲಿ ವಿಜೇತರ ತಂಡಗಳಿಗೆ ಮೊದಲ ಬಹುಮಾನವಾಗಿ ಪಾರಿತೋಷಕದೊಂದಿಗೆ 30 ಸಾವಿರ ರೂ ನಗದು ಬಹುಮಾನ,ಎರಡನೇ ತಂಡಕ್ಕೆ ಪಾರಿತೋಷಕ,20 ಸಾವಿರ ನಗದು, 3ನೇ ತಂಡಕ್ಕೆ ಪಾರಿತೋಷಕ 10 ಸಾವಿರ ರೂ ನಗದು ಬಹುಮಾನ ನೀಡಲಾಗುವುದು.ರಾಜ್ಯಮಟ್ಟದ ಐತಿಹಾಸಿಕ, ಪೌರಾಣಿಕ ನಾಟಕ ಸ್ಪರ್ಧೆಯ ಪ್ರವೇಶ ಶುಲ್ಕ ಒಂದು ಸಾವಿರು ರೂಗಳಾಗಿದ್ದು,ನಾಟಕಕ್ಕೆ ಅಗತ್ಯವಿರುವ ದ್ವನಿವರ್ಧಕ, ಬೆಳಕಿನ ವ್ಯವಸ್ಥೆ, ಕನಿಷ್ಠ ವೇಷ,ಭೂಷಣ ಹಾಗೂ ಹಿನ್ನೆಲೆ ಸಂಗೀತಕ್ಕೆ ಬೇಕಾದ ಪರಿಕರಗಳನ್ನು ದಸರಾ ಸಮಿತಿ ನೀಡಲಿದ್ದು, ವಾದ್ಯ ನುಡಿಸುವವರನ್ನು ನಾಟಕ ತಂಡದವರೇ ಕರೆ ತರಬೇಕಿದೆ.ಆಸಕ್ತ ನಾಟಕ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಲು 2023ರ ಸೆಪ್ಟಂಬರ್ 25 ಕೊನೆಯ ದಿನವಾಗಿದೆ.ಮೊದಲು ಬಂದ 14 ತಂಡಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.
ಹೆಚ್ಚಿನ ವಿವರಗಳಿಗಾಗಿ ರೇಖಾ ಶಿವಕುಮಾರ್-9844768354, ವಿರುಪಾಕ್ಷಪ್ಪ-9036247253,ಜಗದೀಶ್ 8971884790, ಶರತ್‌ರಾಜ್ 8660338488,ಮಮತರಾಜ್ 9035438576,ಪದ್ಮರಾಜ್ 9481451238ಅವರುಗಳನ್ನು ಸಂಪರ್ಕಿಸಬಹುದಾಗಿದೆ.