ಮಧುಗಿರಿ : ಮುಂದಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ರವರ ಹುಟ್ಟೂರಿನಲ್ಲಿ ಮ್ಯೂಸಿಯಂ ತೆರೆಯಲಾಗುವುದು ಎಂದು ಸಹಕಾರ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಕೆ.ಎನ್ ರಾಜಣ್ಣ ತಿಳಿಸಿದರು.
ಅವರು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಭಾನುವಾರ ಆಯೋಜಿಸಿದ್ದ ಡಿ.ದೇವರಾಜು ಅರಸು ರವರ 108 ನೇ ಜಯಂತಿ ಯಲ್ಲಿ ಭಾಗವಹಿಸಿ ಮಾತನಾಡಿದರು.ದಿ. ಡಿ.ದೇವರಾಜು ಅರಸುರವರ ಹುಟ್ಟೂರಾದ ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಅವರ ಜೀವನ ಚರಿತ್ರೆ , ಸಾಧನೆ ಗಳನ್ನು ಒಳಗೊಂಡ ಸಮಗ್ರ ಮಾಹಿತಿಯನ್ನು ರಾಜ್ಯದ ಜನರಿಗೆ ತಿಳಿಸುವಂತಹ ಮ್ಯೂಸಿಯಂ ತೆರೆಯಲು ರಾಜ್ಯ ಸರಕಾರ ಉದ್ದೇಶಿಸಿದೆ. ಅವರು ಒಂದು ವರ್ಗಕ್ಕೆ ಸೀಮಿತವಾದ ವ್ಯಕ್ತಿ ಯಾಗಿರಲಿಲ್ಲ ,
ದ್ವನಿ ಇಲ್ಲದ ಸಮುದಾಯದವರಿಗೆ ಧ್ವನಿಯಾಗಿದ್ದವರು.
ನಾನು ಪ್ರತಿ ಚುನಾವಣೆಯಲ್ಲೂ ಸ್ಪರ್ಧಿಸುವುದಕ್ಕೂ ಮುನ್ನಾ ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸುವಂತಹ ಸಂಪ್ರದಾಯವನ್ನು ಮೊದಲಿನಿಂದಲೂ ಬೆಳೆಸಿಕೊಂಡು ಬಂದಿದ್ದೇನೆಂದರು. ಮುಂದಿನ ದಿನಗಳಲ್ಲಿ ಅವರ ದಿನಾಚರಣೆಯನ್ನು ಸದ್ಬವನಾ ದಿನಾಚರಣೆಯನ್ನಾಗಿ ಆಚರಿಸಲಾಗುವುದು.
ಇಂದಿನ ಜಯಂತಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವ ಅಧಿಕಾರಿಗಳ ಮಾಹಿತಿಯನ್ನು ನೀಡುವಂತೆ ತಹಸೀಲ್ದಾರ್ ರವರಿಗೆ ಸೂಚಿಸಿದರು.
ತಹಸೀಲ್ದಾರ್ ಸಿಬ್ಗತ್ ವುಲ್ಲಾ ಮಾತನಾಡಿ ಉಳುವವನೆ ಭೂಮಿಯ ಒಡೆಯ ಎಂಬಾ 1971 ಭೂ ಸುಧಾರಣಾ ಕಾಯಿದೆ ಅನ್ವಯದಂತೆ , ಕೈಗಾರಿಕಾ ಪ್ತದೇಶಗಳನ್ನು ಎಲೆಕ್ಟ್ರಾನಿಕ್ ಸಿಟಿಗಳೆಂದು ಘೋಷಣೆ ಮಾಡಿದ್ದವರು ಇವರ ಹಾದಿಯಲ್ಲಿ ಸಾಗಿ ಬರುತ್ತಿರುವ ನಮ್ಮ ಸಹಕಾರ ಸಚಿವರು ದೂರದೃಷ್ಟಿ ಹಿನ್ನೆಲೆಯುಳ್ಳವರಾಗಿದ್ದು ಕ್ಷೇತ್ರದಲ್ಲಿ ಬೆಟ್ಟಕ್ಕೆ ರೋಪ್ ವೇ , ಕೈಗಾರಿಕಾ ಪ್ರದೇಶ , ವಿದ್ಯುತ್ ಉಪ ಸ್ಥಾವರಗಳ ಸ್ಥಾಪನೆಗೆ ಮುಂದಾಗಿದ್ದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗಿದ್ದಾರೆ , ವಿವಿಧ ಯೋಜನೆಗಳ ಸ್ಥಾಪನೆಗಾಗಿ ಕೇವಲ 15 ದಿನಗಳಲ್ಲಿ 8 ಎಕರೆ ಜಮೀನು ಮಂಜೂರು ಮಾಡಲಾಗಿದೆ.ಹದಿನೈದು ದಿನಗಳಲ್ಲಿ 9 ಎಕರೆ ಜಾಗ ಗುರುತಿಸಲಾಗಿದೆ. ತಾಯಿ ಮಗು ಆಸ್ಪತ್ರೆ ನಿರ್ಮಾಣ , ವಸತಿ ರಹಿತರಿಗಾಗಿ 40 ರಿಂದ 50 ಎಕರೆ ಜಮೀನು ಗುರುತಿಸುವುದು ಅಥವಾ ಖಾಸಗಿಯವರಿಂದ ಖರೀದಿಸಿ ಮನೆ ನಿರ್ಮಾಣ ಮಾಡಲಾಗುವುದು.ಎಂದು ತಿಳಿಸಿದರು
ನಿ.ಶಿಕ್ಷಕ ಹಾಗೂ ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರವಣಪ್ಪ ಮಾತನಾಡಿ ಡಿ ದೇವರಾಜು ಅರಸು ರವರ ಜಯಂತಿಯು ಶೋಷಿತ, ಹಿಂದುಳಿದ ವರ್ಗಗಳಿಗೆ ಚೈತನ್ಯ ನೀಡುವಂತಹ ಕಾರ್ಯಕ್ರಮವಾಗಿದೆ. ಭೂ ಸುಧಾರಣೆಯ ಹರಿಕಾರರಾಗಿ ಲಕ್ಷಾಂತರ ಜನ ಗೇಣಿದಾರರಿಗೆ ದಿಕ್ಸೂಚಿ ಯಾದರು , ಅಮಾನವೀಯ ಪದ್ಧತಿಯಾದ ಮಲಹೊರುವ ಪದ್ಧತಿಯನ್ನು ನಿರ್ಮೂಲನೆ , ಋಣ ವಿಮುಕ್ತಿ ಶಾಸನದ ಜಾರಿಮಾಡಿದ್ದು ಇಡೀ ಸಮಾಜದ ಮೇಲೆ ಪರಿಣಾಮ ಬೀರಿದೆ ಇವರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ತತ್ವ ಸಿದ್ದಾಂತಗಳು ಹಾಗೂ ಶೋಷಿತರ ಪರವಾದ ಚಿಂತನೆಗಳಿಂದ ಪ್ರಭಾವಿತರಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು,
ಹಿಂದುಳಿದ ವರ್ಗಗಳ ಆಯೋಗದ ರಚನೆಗೂ ಮೊದಲು ಮಿಲ್ಲರ್ , ಗೋಪಾಲಗೌಡ ನಂತರ ಎಲ್.ಜಿ.ಹಾವನೂರು ಆಯೋಗದ ರಚನೆಯಾಯಿತು ಎಂದರು.
ಹಿಂದುಳಿದ ವರ್ಗಗಳ ನೇತಾರ , ಜೀತವಿಮುಕ್ತ , ಕನಿಷ್ಟ ಕೂಲಿ ನಿಗಧಿ , ಎಲ್ ಜಿ ಹಾವನೂರು ವರದಿ ಜಾರಿ , ಪದವಿದರರಿಗೆ ಶಿಷ್ಯವೇತನ ಜಾರಿ ಮಾಡಿದರು , ಹಿಂದುಳಿದ ವರ್ಗಗಳ ಸಮುದಾಯಗಳಿಗೆ ವಸತಿ ನಿಲಯಗಳ ಸ್ಥಾಪನೆ , ಗ್ರಾಮಗಳಲ್ಲಿ ನ ಮನೆಗಳಿಗೆ ಭಾಗ್ಯಜ್ಯೋತಿ ಯೋಜನೆಯ ಪ್ರಥಮ ಕರ್ತೃ ದಿ.ದೇವರಾಜು ಅರಸು ಎಂದರು.
ಬಿಇಓ ಹನುಮಂತರಾಯಪ್ಪ ಮಾತನಾಡಿ ಮಾಜಿ ಮುಖ್ಯಮಂತ್ರಿಗಳಾದ ಡಿ .ದೇವರಾಜು ಅರಸು ರವರು ರಾಜ್ಯ ಕಂಡಂತಹ ಅಪ್ರತಿಮ ರಾಜಕಾರಣಿಯಾಗಿ ಬಡವರ ದೀನದಲಿತರ , ಶೋಷಿತರ ಬಗ್ಗೆ ಅಪಾರ ಕಾಳಜಿಹೊಂದಿದ್ದರು. ಇಂದೂ ದೇವರಾಜು ಅರಸುರವರ ಕನಸುಗಳನ್ನು ಇಂದೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ನನಸು ಮಾಡುತ್ತಿದ್ದಾರೆ. ಸರಕಾರದ ಆಶೋತ್ತರ , ಇಲಾಖಾ ನಿಯಮಗಳ ಪಾಲನೆಯನ್ನು ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ವಾಗಿದೆ ಎಂದರು.
ಡಿವೈಎಸ್ ಪಿ ವೆಂಕಟೇಶ ನಾಯ್ಡು , ಸಿಪಿಐ ಹನುಮಂತರಾಯಪ್ಪ , ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಅನಸೂಯಮ್ಮ , ಮಾಜಿ ಗ್ರಾ.ಪಂ ಸದಸ್ಯ ಸದಾಶಿವರೆಡ್ಡಿ
ಸವಿತ ಸಮುದಾಯದ ತಾಲೂಕು ಅಧ್ಯಕ್ಷ ಶ್ರೀನಿವಾಸ್ , ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಜಯರಾಮಯ್ಯ , ಅರಣ್ಯಾಧಿಕಾರಿಗಳಾದ ಸಿ. ರವಿ , ಮುತ್ತುರಾಜ್,ಪುರಸಭೆಯ ಮುಖ್ಯಾಧಿಕಾರಿ ಎ.ನಜ್ಮಾ , ರೋಟರಿ ಅಧ್ಯಕ್ಷ ಎಂ.ಶಿವಲಿಂಗಪ್ಪ , ತಾಲೂಕು ನೌಕರರ ಸಂಘದ ಅಧ್ಯಕ್ಷ ಜಯರಾಮಯ್ಯ , ಖಜಾಂಚಿ ಚಿಕ್ಕರಂಗಪ್ಪ(ಚಕ್ರಿ) ಶಿಕ್ಷಣ ಇಲಾಖೆಯ ದಾಸಪ್ಪ ಹಾಗೂ ಮತ್ತಿತರರು ಇದ್ದರು.