ಕುಣಿಗಲ್ ಪೋಲಿಸರ ಮಿಂಚಿನ ದಾಳಿ : ಪಾಳು ಮನೆಯಲ್ಲಿ ಅಕ್ರಮವಾಗಿ ಇಟ್ಟಿದ್ದ ಸುಮಾರು 2 ಕೆ.ಜಿ.ಗೂ ಹೆಚ್ಚು ಗಾಂಜಾ ವಶ, ಆರೋಪಿ ಬಂಧನ
ಕುಣಿಗಲ್ : ಪಾಳು ಬಿದ್ದ ಮನೆಯೊಂದರಲ್ಲಿ ಮಾರಾಟ ಮಾಡಲೆಂದು ಸಂಗ್ರಹಿಸಿ ಇಟ್ಟಿದ್ದ ಸುಮಾರು 2 ಕೆ.ಜಿ 135 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ತಾಲೂಕಿನ ಹುತ್ರಿದುರ್ಗ ಹೋಬಳಿ ಜೋಡಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಪಾಳ್ಯ ಗ್ರಾಮದ ಪಾಳು ಬಿದ್ದ ಮನೆಯಲ್ಲಿ ಇದೇ ಗ್ರಾಮದ ಸಂತೋಷ್ ಬಿನ್ ಚಿಕ್ಕಯ್ಯ ಎಂಬ ಯುವಕ ಸುಮಾರು 2 ಕೆ.ಜಿ 135 ಗ್ರಾಂ ಗಾಂಜಾವನ್ನು ಪ್ಲಾಸ್ಟಿಕ್ ಟಬ್ ನಲ್ಲಿ ಸಂಗ್ರಹಿಸಿಟ್ಟಿದ್ದಾನೆ ಎಂಬ ಖಚಿತ ಮಾಹಿತಿಯನ್ನು ಆದರಿಸಿ ಕುಣಿಗಲ್ ಪೊಲೀಸ್ ಠಾಣೆಯ ಡಿವೈಎಸ್ಪಿ ಲಕ್ಷ್ಮಿಕಾಂತ್, ಹಾಗೂ ಇನ್ಸ್ಪೆಕ್ಟರ್ ನವೀನ್ ಗೌಡ ರವರ ನೇತೃತ್ವದ ತಂಡ ಗುರುವಾರ ರಾತ್ರಿ ದಿಢೀರ್ ಎಂದು ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಮಾರಾಟ ಮಾಡಲೆಂದು ಸಂಗ್ರಹಿಸಿದ್ದ ಗಾಂಜಾವನ್ನು ಮತ್ತು ಸಂಗ್ರಹಿಸಿ ಇಟ್ಟಿದ್ದ ವ್ಯಕ್ತಿಯನ್ನು ಬಂಧಿಸಲು ಯಶಸ್ವಿಯಾಗಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ದಾಳಿಯ ಸಂದರ್ಭದಲ್ಲಿ ಕುಣಿಗಲ್ ತಹಸಿಲ್ದಾರ್ ವಿಶ್ವನಾಥ್ ಹಾಗೂ ಕುಣಿಗಲ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಲ್ಲಿಕಾರ್ಜುನ್, ರಂಗಸ್ವಾಮಿ, ಹನುಮಂತು, ಷಡಕ್ಷರಿ, ಯಶವಂತ್ ಕುಮಾರ್ ಕೆಎಸ್, ಹಾಗೂ ಕಂದಾಯ ಇಲಾಖೆ ಕೆಲವು ಸಿಬ್ಬಂದಿಗಳು ಹಾಜರಿದ್ದರು.
ವರದಿ : ರೇಣುಕಾ ಪ್ರಸಾದ್