
ಕುಣಿಗಲ್ : ತಾಲೂಕಿನ ಹುತ್ರಿದುರ್ಗ ಹೋಬಳಿ ಜೋಡಿ ಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದಲ್ಲಿ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಪುರುಷೋತ್ತಮ್ ರವರ ಅಧ್ಯಕ್ಷತೆಯಲ್ಲಿ ವಿದ್ಯುತ್ ಅದಾಲತ್ ಸಭೆ ಜರುಗಿತು. ಸಭೆಯಲ್ಲಿ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಾತನಾಡಿ ಇತ್ತೀಚೆಗೆ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಪ್ರತಿ ಮನೆಗಳಿಗೆ ಉಚಿತವಾಗಿ ನೀಡುತ್ತಿರುವ 200 ಯೂನಿಟ್ ವಿದ್ಯುತ್ ವಿಚಾರ, ಕೊಳವೆಬಾವಿ ಹೊಂದಿರುವ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ, ವಿದ್ಯುತ್ ಇಲ್ಲದ ಮನೆಯವರು ಯಾವ ರೀತಿ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳಬೇಕು ಎನ್ನುವ ವಿಚಾರ, ಹಳೆ ವಿದ್ಯುತ್ ಕಂಬಗಳು ಹಾಗೂ ಹಳೆ ವೈರ್ ಗಳನ್ನು ಬದಲಾಯಿಸುವ ವಿಚಾರ ಒಳಗೊಂಡಂತೆ ಬೆಸ್ಕಾಂ ಇಲಾಖೆಗೆ ಸಂಬಂಧಪಟ್ಟ ಹಲವಾರು ವಿಚಾರಗಳನ್ನು ವಿದ್ಯುತ್ ಅದಾಲತ್ ಸಭೆಯಲ್ಲಿದ್ದಂತಹ ಸಾರ್ವಜನಿಕರಿಗೆ ವಿವರವಾಗಿ ತಿಳಿಸಿದರು ಸಭೆಯಲ್ಲಿದ್ದಂತಹ ಸಾರ್ವಜನಿಕರು ಬೆಸ್ಕಾಂ ಇಲಾಖೆ ಅಧಿಕಾರಿಗಳಲ್ಲಿ ಕೆಲವು ಸಮಸ್ಯೆಗಳನ್ನು ಕೇಳಿಕೊಂಡಾಗ ಬೆಸ್ಕಾಂ ಅಧಿಕಾರಿಗಳು ತಾಳ್ಮೆಯಿಂದ ಆಲಿಸಿ, ವಿದ್ಯುತ್ ಸಮಸ್ಯೆ ಏನೇ ಇದ್ದರೂ ಹಂತ ಹಂತವಾಗಿ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜೋಡಿಹಸಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜು, ಕೆಂಪನಹಳ್ಳಿ ಬೆಸ್ಕಾಂ ಶಾಖೆಯ ಶಾಖಾಧಿಕಾರಿ ಡಿ ರಾಜು, ಗ್ರಾಮ ಪಂಚಾಯಿತಿಯ ಹಾಲಿ ಹಾಗೂ ಮಾಜಿ ಸದಸ್ಯರು, ಬೆಸ್ಕಾಂ ಸಿಬ್ಬಂದಿ ವರ್ಗ, ಗ್ರಾಮಸ್ಥರು, ಉಪಸ್ಥಿತರಿದ್ದರು