ತುಮಕೂರು : ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯಂತೆ ಕಾರ್ಯನಿರ್ವಹಿಸುತ್ತಿರುವ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಸಮವಸ್ತ್ರ , ಶೂಗಳನ್ನು ವಿತರಿಸಲಾಯಿತು.
ನಗರದ ಗೃಹರಕ್ಷಕ ದಳದ ಕಚೇರಿಯಲ್ಲಿ ಸಿಬ್ಬಂದಿಗೆ ಕೇಂದ್ರ ಕಚೇರಿ ಒದಗಿಸಿರುವ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದ ಹೋಂಗಾರ್ಡ್ಸ್ ಕಮಾಂಡೆಂಟ್ ಆರ್. ಪಾತಣ್ಣ, ಕೇಂದ್ರ ಗೃಹರಕ್ಷಕ ಕಚೇರಿಯಿಂದ ಜಿಲ್ಲೆಗೆ 790 ಜತೆ ಸಮವಸ್ತ್ರಗಳನ್ನು ನೀಡಲಾಗಿದೆ ಎಂದರು.
ಜಿಲ್ಲೆಯಾದ್ಯಂತ 18 ಗೃಹರಕ್ಷಕ ಘಟಕಗಳಿದ್ದು, ಈಗಾಗಲೇ ತಿಪಟೂರು, ನೊಣವಿನಕೆರೆ, ಹೊಳವನಹಳ್ಳಿ, ಚಿಕ್ಕನಾಯಕನಹಳ್ಳಿ, ಗುಬ್ಬಿ ಸೇರಿದಂತೆ ಎಲ್ಲ ಘಟಕಗಳ ಸಿಬ್ಬಂದಿಗಳಿಗೂ ಸಮವಸ್ತ್ರ ವಿತರಣೆ ಮಾಡಲಾಗಿದೆ.
ಜಿಲ್ಲಾ ಕೇಂದ್ರದಲ್ಲಿರುವ ಗೃಹ ರಕ್ಷಕ ಸಿಬ್ಬಂದಿ ಇಂದು ಸಮವಸ್ತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಕಚೇರಿಯಿಂದ ಒದಗಿಸಿರುವ ಸಮವಸ್ತ್ರಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಪ್ಯಾಂಟ್, ಶರ್ಟ್, ವಿಷಲ್ ಗಾರ್ಡ್, ಶೂ, ಪಾಲಿಷ್, ವಿಷಲ್ ಚೈನ್ ಗಾರ್ಡ್, ಲಾಟಿಯನ್ನೊಳಗೊಂಡಿವೆ ಎಂದರು.
2023ನೇ ವಿಧಾನಸಭಾ ಚುನಾವಣೆಯ ಕಾರ್ಯನಿರ್ವಹಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೇಳಿದ್ದಷ್ಟು ಗೃಹ ರಕ್ಷಕರನ್ನು ಒದಗಿಸಿದ್ದರಿಂದ ಕೇಂದ್ರ ಕಚೇರಿಯಿಂದ ನಮಗೆ ಪ್ರಶಂಸನಾ ಪತ್ರ ಲಭಿಸಿದೆ. ಜಿಲ್ಲಾ ಕೇಂದ್ರ ಕಚೇರಿಯಲ್ಲಿರುವ ಎಲ್ಲ ಸಿಬ್ಬಂದಿಗಳು ಈ ಕಾರ್ಯಕ್ಕೆ ಕೈಜೋಡಿಸುವ ಮೂಲಕ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
ಈ ಸಂದರ್ಭದಲ್ಲಿ ಗೃಹ ರಕ್ಷಕ ದಳದ ಜಿಲ್ಲಾ ಬೋಧಕ ಶಿವಪ್ರಸಾದ್, ಪ್ರಥಮ ದರ್ಜೆ ಸಹಾಯಕ ಕೆ. ಪ್ರಕಾಶ್, ಸಹಾಯಕ ಬೋಧಕರಾದ ಹನುಮಂತರಾಯಪ್ಪ, ಪ್ರಭಾರ ಘಟಕಾಧಿಕಾರಿ ಪ್ರಕಾಶ್ ಮೂರ್ತಿ ಮತ್ತಿತರರು ಭಾಗವಹಿಸಿದ್ದರು. ಪೊಲೀಸ್ ಸಿಬ್ಬಂದಿಯಂತೆ ಕಾರ್ಯನಿರ್ವಹಿಸುತ್ತಿರುವ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಸಮವಸ್ತ್ರ, ಶೂಗಳನ್ನು ವಿತರಿಸಲಾಯಿತು.
ನಗರದ ಗೃಹರಕ್ಷಕ ದಳದ ಕಚೇರಿಯಲ್ಲಿ ಸಿಬ್ಬಂದಿಗೆ ಕೇಂದ್ರ ಕಚೇರಿ ಒದಗಿಸಿರುವ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದ ಹೋಂಗಾರ್ಡ್ಸ್ ಕಮಾಂಡೆಂಟ್ ಆರ್. ಪಾತಣ್ಣ, ಕೇಂದ್ರ ಗೃಹರಕ್ಷಕ ಕಚೇರಿಯಿಂದ ಜಿಲ್ಲೆಗೆ 790 ಜತೆ ಸಮವಸ್ತ್ರಗಳನ್ನು ನೀಡಲಾಗಿದೆ ಎಂದರು.
ಜಿಲ್ಲೆಯಾದ್ಯಂತ 18 ಗೃಹರಕ್ಷಕ ಘಟಕಗಳಿದ್ದು, ಈಗಾಗಲೇ ತಿಪಟೂರು, ನೊಣವಿನಕೆರೆ, ಹೊಳವನಹಳ್ಳಿ, ಚಿಕ್ಕನಾಯಕನಹಳ್ಳಿ, ಗುಬ್ಬಿ ಸೇರಿದಂತೆ ಎಲ್ಲ ಘಟಕಗಳ ಸಿಬ್ಬಂದಿಗಳಿಗೂ ಸಮವಸ್ತ್ರ ವಿತರಣೆ ಮಾಡಲಾಗಿದೆ.
ಜಿಲ್ಲಾ ಕೇಂದ್ರದಲ್ಲಿರುವ ಗೃಹ ರಕ್ಷಕ ಸಿಬ್ಬಂದಿ ಇಂದು ಸಮವಸ್ತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಕಚೇರಿಯಿಂದ ಒದಗಿಸಿರುವ ಸಮವಸ್ತ್ರಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಪ್ಯಾಂಟ್, ಶರ್ಟ್, ವಿಷಲ್ ಗಾರ್ಡ್, ಶೂ, ಪಾಲಿಷ್, ವಿಷಲ್ ಚೈನ್ ಗಾರ್ಡ್, ಲಾಟಿಯನ್ನೊಳಗೊಂಡಿವೆ ಎಂದರು.
2023ನೇ ವಿಧಾನಸಭಾ ಚುನಾವಣೆಯ ಕಾರ್ಯನಿರ್ವಹಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೇಳಿದ್ದಷ್ಟು ಗೃಹ ರಕ್ಷಕರನ್ನು ಒದಗಿಸಿದ್ದರಿಂದ ಕೇಂದ್ರ ಕಚೇರಿಯಿಂದ ನಮಗೆ ಪ್ರಶಂಸನಾ ಪತ್ರ ಲಭಿಸಿದೆ. ಜಿಲ್ಲಾ ಕೇಂದ್ರ ಕಚೇರಿಯಲ್ಲಿರುವ ಎಲ್ಲ ಸಿಬ್ಬಂದಿಗಳು ಈ ಕಾರ್ಯಕ್ಕೆ ಕೈಜೋಡಿಸುವ ಮೂಲಕ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
ಈ ಸಂದರ್ಭದಲ್ಲಿ ಗೃಹ ರಕ್ಷಕ ದಳದ ಜಿಲ್ಲಾ ಬೋಧಕ ಶಿವಪ್ರಸಾದ್, ಪ್ರಥಮ ದರ್ಜೆ ಸಹಾಯಕ ಕೆ. ಪ್ರಕಾಶ್, ಸಹಾಯಕ ಬೋಧಕರಾದ ಹನುಮಂತರಾಯಪ್ಪ, ಪ್ರಭಾರ ಘಟಕಾಧಿಕಾರಿ ಪ್ರಕಾಶ್ ಮೂರ್ತಿ ಮತ್ತಿತರರು ಭಾಗವಹಿಸಿದ್ದರು.