ಜಿಲ್ಲೆತುಮಕೂರುರಾಜಕೀಯ

ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಲು ಕುಂಚಟಿಗ ಒಕ್ಕಲಿಗರ ಸಂಘ ಒತ್ತಾಯ

ತುಮಕೂರು : ಹಿರಿಯರು, ಅನುಭವಿಗಳು ಆದ ಟಿ.ಬಿ.ಜಯಚಂದ್ರ ಅವರಿಗೆ ಮಂತ್ರಿಸ್ಥಾನ ನೀಡುವಂತೆ ಕುಂಚಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರಾಜ್ಯದಲ್ಲಿ ಸುಮಾರು 25 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಒಕ್ಕಲಿಗ ಸಮಾಜದ ಉಪಪಂಗಡವಾಗಿರುವ ಕುಂಚಟಿಗ ಒಕ್ಕಲಿಗ ಸಮುದಾಯದ ಏಕೈಕ ಶಾಸಕರಾಗಿರುವ ಟಿ.ಬಿ.ಜಯಚಂದ್ರ ಅತ್ಯಂತ ಅನುಭವಿ ಮತ್ತು ಮುತ್ಸದ್ದಿ ರಾಜಕಾರಣಿ.ಈಗಾಗಲೇ ಎಸ್.ಎಂ.ಕೃಷ್ಣ,ಸಿದ್ದರಾಮಯ್ಯ ಸೇರಿದಂತೆ ಹಲವು ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಬಹಳ ಮಹತ್ವದ ಖಾತೆಗಳನ್ನು ನಿರ್ವಹಿಸಿದ ಅನುಭವವುಳ್ಳ ರಾಜಕಾರಣಿ. ಅವರನ್ನು ಮಂತ್ರಿ ಮಾಡುವ ಮೂಲಕ ಅವರ ಅನುಭವವನ್ನು ಸರಕಾರ ಬಳಸಿಕೊಳ್ಳಬೇಕೆಂಬುದು ನಮ್ಮ ಮನವಿಯಾಗಿದೆ ಎಂದರು.
ಕುಂಚಟಿಗ ಒಕ್ಕಲಿಗ ಜನಾಂಗದ ಏಕೈಕ ಶಾಸಕರಾಗಿರುವ ಟಿ.ಬಿ.ಜಯಚಂದ್ರ ಅವರು ನೀರಾವರಿ ತಜ್ಞರಾಗಿ ಕುಡಿಯುವುದಕ್ಕಲ್ಲದೆ, ನೀರಾವರಿಗಾಗಿಯೂ ಕಾವೇರಿ ಕೊಳ್ಳದಿಂದ ಕೃಷ್ಣಕೊಳ್ಳಕ್ಕೆ ಹೇಮಾವತಿ ನೀರು ಹರಿಸಿ ಸಾಧನೆ ಮಾಡಿದ ಸಾಧಕರು, ಅವರ ದೂರದೃಷ್ಟಿಯ ಫಲವಾಗಿ ಬರದ ನಾಡಾಗಿದ್ದ ಶಿರಾ ಇಂದು ಸಂಪೂರ್ಣ ಹಸಿರಿನಿಂದ ಕೂಡಿದೆ.ಅವರು ಮಾಡಿರುವ ಬ್ಯಾರೇಜ್‌ಗಳಲು ತುಂಬಿ ಹತ್ತಾರು ಕಿ.ಮಿ.ದೂರದವರೆಗೆ ಅಂತರಜಲ ವೃದ್ದಿಯಾಗಿ ಜನ,ಜಾನುವಾರುಗಳು ಸಂವೃದ್ದಿಯ ಜೀವನ ನಡೆಸುವಂತಾಗಿದೆ.ಹಾಗಾಗಿ ಅವರ ಅನುಭವ ಸರಕಾರಕ್ಕೆ ಬಳಕೆಯಾಗಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಹಿತದೃಷ್ಟಿಯಿಂದಲೂ ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಹೆಚ್ಚಿನ ಅನುಕೂಲ ಪಕ್ಷಕ್ಕೆ ಆಗಲಿದೆ ಎಂಬುದು ಕುಂಚಟಿಗ ಒಕ್ಕಲಿಗ ಕ್ಷೇಮಾಭಿವೃದ್ದಿ ಸಂಘದ ಒತ್ತಾಸೆಯಾಗಿದೆ ಎಂದು ಆರ್.ಕಾಮರಾಜು ತಿಳಿಸಿದರು.
ಹಿರಿಯ ರಾಜಕಾರಣಿಯಾಗಿರುವ ಟಿ.ಬಿ.ಜಯಚಂದ್ರ ಅವರು ಸ್ವೀಕರ್ ಸೇರಿದಂತೆ ಯಾವುದೇ ಹುದ್ದೆ ನೀಡಿದರೂ ನಿಭಾಯಿಸುವ ಶಕ್ತಿ ಹೊಂದಿದ್ದಾರೆ. ಆದರೆ ಇದು ಅವರ ಕೊನೆಯ ಚುನಾವಣೆ ಎಂದು ಘೋಷಿಸಿಕೊಂಡಿರುವ ಹಿನ್ನೇಲೆಯಲ್ಲಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕಾರ್ಯಕ್ರಮ ನೀಡಬೇಕೆಂದರೆ ಸಚಿವರಾದರೆ ಹೆಚ್ಚು ಸೂಕ್ತ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಸೀಟುಗಳನ್ನು ಗೆಲ್ಲುವ ಮೂಲಕ ಅಭೂತ ಪೂರ್ವ ಯಶಸ್ಸನ್ನು ಸಾಧಿಸಿದೆ.ಇದಕ್ಕಾಗಿ ಪಕ್ಷದ ಎಲ್ಲಾ ಮುಖಂಡರಿಗೂ ಕುಂಚಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘದವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ.ಅದೇ ರೀತಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹಾಗೂ ಎಂಟು ಜನ ಸಚಿವರಿಗೂ ಸಂಘ ಅಭಿನಂದನೆ ಸಲ್ಲಿಸುತ್ತೇವೆ. ನಮ್ಮ ಜಿಲ್ಲೆಯಿಂದ ಆಯ್ಕೆಯಾಗಿರುವ ಎಲ್ಲಾ 11 ಶಾಸಕರಿಗೂ ಅಭಿನಂದನೆಗಳನ್ನು ಸಂಘ ಸಲ್ಲಿಸುತ್ತದೆ.ಮುಂದಿನ ದಿನಗಳಲ್ಲಿ ಅವರೆಲ್ಲರನ್ನೂ ಬಳಸಿಕೊಂಡು ಸಂಘದ ಅಭಿವೃದ್ದಿಗೆ ಶ್ರಮಿಸಲಿದ್ದೇವೆ ಎಂದು ಆರ್.ಕಾಮರಾಜು ನುಡಿದರು.
ಈ ವೇಳೆ ಸಂಘದ ಅಧ್ಯಕ್ಷರಾದ ನೇತಾಜಿ ಶ್ರೀಧರ್,ಉಪಾಧ್ಯಕ್ಷರಾದ ಅಶೋಕಕುಮಾರ್,ಕಾರ್ಯದರ್ಶಿ ಎಂ.ರಾಜಕುಮಾರ್, ಮಾಜಿ ಕಾರ್ಯದರ್ಶಿ ದೊಡ್ಡಲಿಂಗಪ್ಪ,ಖಜಾಂಚಿ ಎಸ್.ಸತೀಶ್,ಜಂಟಿ ಕಾರ್ಯದರ್ಶಿ ಸಿ.ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker