ಜಿಲ್ಲೆತುಮಕೂರುರಾಜಕೀಯರಾಜ್ಯ

ವಿಧಾನಸಭಾ ಚುನಾವಣೆ : ತುಮಕೂರು ಜಿಲ್ಲೆಯಲ್ಲಿ ಶೇ.83.58ರಷ್ಟು ಮತದಾನ : ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ್

ತುಮಕೂರು : ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ನಡೆದ ಚುನಾವಣೆಯಲ್ಲಿ ಶೇ.83.58ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಒಟ್ಟು 22,47,932(ಪುರುಷರು-1120698, ಮಹಿಳೆಯರು-1127126, ಇತರೆ-108) ಮತದಾರರಿದ್ದು, ಮೇ 10ರಂದು ನಡೆದ ಮತದಾನದಲ್ಲಿ 950631 ಪುರುಷರು, 928159 ಮಹಿಳೆಯರು, 22 ಇತರೆ ಸೇರಿ ಒಟ್ಟು 18,78,812 (ಶೇ.83.58) ಮತದಾರರು ಮತ ಚಲಾಯಿಸಿದ್ದಾರೆ. ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಟ ಅಂದರೆ ಶೇ. 87.85 ಹಾಗೂ ತುಮಕೂರು ನಗರ ಕ್ಷೇತ್ರದಲ್ಲಿ ಕನಿಷ್ಟ ಅಂದರೆ ಶೇ. 66.83ರಷ್ಟು ಮತದಾನವಾಗಿದೆ.
ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಒಟ್ಟು 218923(ಪುರುಷರು-108645, ಮಹಿಳೆಯರು-110277, ಇತರೆ-1) ಮತದಾರರ ಪೈಕಿ 186874(ಪು-94615, ಮ-92258, ಇ-1) ಮತದಾರರು ಮತ ಚಲಾಯಿಸಿದ್ದು, ಶೇ.85.36ರಷ್ಟು ಮತದಾನವಾಗಿದೆ.
ತಿಪಟೂರು ಕ್ಷೇತ್ರದಲ್ಲಿ ಒಟ್ಟು 184278(ಪುರುಷರು-89502, ಮಹಿಳೆಯರು-94775, ಇತರೆ-1) ಮತದಾರರ ಪೈಕಿ 154676(ಪು-77042, ಮ-77634, ಇ-0) ಮತದಾರರು ಮತ ಚಲಾಯಿಸಿದ್ದು, ಶೇ.83.94ರಷ್ಟು ಮತದಾನವಾಗಿದೆ.
ತುರುವೇಕೆರೆ ಕ್ಷೇತ್ರದಲ್ಲಿ ಒಟ್ಟು 182652(ಪುರುಷರು-90932, ಮಹಿಳೆಯರು-91718, ಇತರೆ-2) ಮತದಾರರ ಪೈಕಿ 158800(ಪು-80344, ಮ-78456, ಇ-0) ಮತದಾರರು ಮತ ಚಲಾಯಿಸಿದ್ದು, ಶೇ.86.94ರಷ್ಟು ಮತದಾನವಾಗಿದೆ.
ಕುಣಿಗಲ್ ಕ್ಷೇತ್ರದಲ್ಲಿ ಒಟ್ಟು 198717(ಪುರುಷರು-99876, ಮಹಿಳೆಯರು-98838, ಇತರೆ-3) ಮತದಾರರ ಪೈಕಿ 173261(ಪು-88180, ಮ-85081, ಇ-0) ಮತದಾರರು ಮತ ಚಲಾಯಿಸಿದ್ದು, ಶೇ.87.19ರಷ್ಟು ಮತದಾನವಾಗಿದೆ.
ತುಮಕೂರು ನಗರ ಕ್ಷೇತ್ರದಲ್ಲಿ ಒಟ್ಟು 258875(ಪುರುಷರು-127001, ಮಹಿಳೆಯರು-131848, ಇತರೆ-26) ಮತದಾರರ ಪೈಕಿ 173008(ಪು-85800, ಮ-87207, ಇ-1) ಮತದಾರರು ಮತ ಚಲಾಯಿಸಿದ್ದು, ಶೇ.66.83ರಷ್ಟು ಮತದಾನವಾಗಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಟ್ಟು 208725(ಪುರುಷರು-103252, ಮಹಿಳೆಯರು-105454, ಇತರೆ-19) ಮತದಾರರ ಪೈಕಿ 180898(ಪು-90916, ಮ-89974, ಇ-8) ಮತದಾರರು ಮತ ಚಲಾಯಿಸಿದ್ದು, ಶೇ.86.67ರಷ್ಟು ಮತದಾನವಾಗಿದೆ.
ಕೊರಟಗೆರೆ ಕ್ಷೇತ್ರದಲ್ಲಿ ಒಟ್ಟು 204598(ಪುರುಷರು-102086, ಮಹಿಳೆಯರು-102495, ಇತರೆ-17) ಮತದಾರರ ಪೈಕಿ 172744(ಪು-87213, ಮ-85531, ಇ-0) ಮತದಾರರು ಮತ ಚಲಾಯಿಸಿದ್ದು, ಶೇ.84.43ರಷ್ಟು ಮತದಾನವಾಗಿದೆ.
ಗುಬ್ಬಿ ಕ್ಷೇತ್ರದಲ್ಲಿ ಒಟ್ಟು 181086(ಪುರುಷರು-90483, ಮಹಿಳೆಯರು-90592, ಇತರೆ-11) ಮತದಾರರ ಪೈಕಿ 159087(ಪು-80537, ಮ-78547, ಇ-3) ಮತದಾರರು ಮತ ಚಲಾಯಿಸಿದ್ದು, ಶೇ.87.85ರಷ್ಟು ಮತದಾನವಾಗಿದೆ.
ಶಿರಾ ಕ್ಷೇತ್ರದಲ್ಲಿ ಒಟ್ಟು 223604(ಪುರುಷರು-112795, ಮಹಿಳೆಯರು-110796, ಇತರೆ-13) ಮತದಾರರ ಪೈಕಿ 187478(ಪು-95862, ಮ-91611, ಇ-5) ಮತದಾರರು ಮತ ಚಲಾಯಿಸಿದ್ದು, ಶೇ.83.84ರಷ್ಟು ಮತದಾನವಾಗಿದೆ.
ಪಾವಗಡ ಕ್ಷೇತ್ರದಲ್ಲಿ ಒಟ್ಟು 193007(ಪುರುಷರು-98963, ಮಹಿಳೆಯರು-94034, ಇತರೆ-10) ಮತದಾರರ ಪೈಕಿ 166063(ಪು-85556, ಮ-80506, ಇ-1) ಮತದಾರರು ಮತ ಚಲಾಯಿಸಿದ್ದು, ಶೇ.86.04ರಷ್ಟು ಮತದಾನವಾಗಿದೆ.
ಮಧುಗಿರಿ ಕ್ಷೇತ್ರದಲ್ಲಿ ಒಟ್ಟು 193467(ಪುರುಷರು-97163, ಮಹಿಳೆಯರು-96299, ಇತರೆ-5) ಮತದಾರರ ಪೈಕಿ 165923(ಪು-84566, ಮ-81354, ಇ-3) ಮತದಾರರು ಮತ ಚಲಾಯಿಸಿದ್ದು, ಶೇ.85.76ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟವರು, ದಿವ್ಯಾಂಗರು, ಅಗತ್ಯ ಸೇವೆಯಲ್ಲಿರುವವರು ಹಾಗೂ ಚುನಾವಣಾ ಸಿಬ್ಬಂದಿಗಳು ಸೇರಿದಂತೆ ಒಟ್ಟು 24,021 ಅಂಚೆ ಮತಪತ್ರಗಳನ್ನು ವಿತರಿಸಲಾಗಿದ್ದು, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1946, ತಿಪಟೂರು-1608, ತುರುವೇಕೆರೆ-1747, ಕುಣಿಗಲ್-1205, ತುಮಕೂರು ನಗರ-2542, ತುಮಕೂರು ಗ್ರಾಮಾಂತರ-2160, ಕೊರಟಗೆರೆ-2157, ಗುಬ್ಬಿ-1338, ಶಿರಾ-5274, ಪಾವಗಡ-2157, ಮಧುಗಿರಿ ಕ್ಷೇತ್ರದಲ್ಲಿ 1887 ಅಂಚೆ ಮತಪತ್ರಗಳನ್ನು ವಿತರಣೆ ಮಾಡಲಾಗಿತ್ತು.
ಚುನಾವಣಾ ಆಯೋಗವು 80+ ವರ್ಷ ಮತ್ತು ದಿವ್ಯಾಂಗರಿಗಾಗಿ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್ 29 ರಿಂದ ಮೇ 6ರವರೆಗೆ ಒಟ್ಟು 80+ ವರ್ಷ ಹಾಗೂ ದಿವ್ಯಾಂಗರು ಸೇರಿ 9121 ಮತದಾರರು ಮತ ಚಲಾಯಿಸಿರುತ್ತಾರೆ. ಈ ಪೈಕಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ -471, ತಿಪಟೂರು-201, ತುರುವೇಕೆರೆ-756, ಕುಣಿಗಲ್-384, ತುಮಕೂರು ನಗರ-268, ತುಮಕೂರು ಗ್ರಾಮಾಂತರ-703, ಕೊರಟಗೆರೆ-723, ಗುಬ್ಬಿ-269, ಶಿರಾ-3892, ಪಾವಗಡ-970 ಹಾಗೂ ಮಧುಗಿರಿ ಕ್ಷೇತ್ರದಲ್ಲಿ 484 ಮತದಾರರು ಚಲಾಯಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ 2018ರಲ್ಲಿ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 22,15,604 ಮತದಾರರಿದ್ದು, ಈ ಪೈಕಿ 18,16,749(ಶೇ. 82.03) ಮತದಾರರು ಮತ ಚಲಾಯಿಸಿದ್ದರು. ಕಳೆದ ಬಾರಿಗೆ ಹೋಲಿಸಿದರೆ 2023ರ ಚುನಾವಣೆಯಲ್ಲಿ ಮತದಾನದ ಪ್ರಮಾಣವು ಶೇ.2% ರಷ್ಟು ಹೆಚ್ಚಳವಾಗಿರುವುದು ಸಂತೋಷದ ವಿಷಯ.
ರಾಜಕೀಯ ಪಕ್ಷಗಳು, ಸ್ಪರ್ಧಿಸಿದ್ದ ಉಮೇದುವಾರರುಗಳ ಆರೋಗ್ಯಕರ ಮತ್ತು ಪ್ರಜಾಸತ್ತಾತ್ಮಕ ಬೆಂಬಲ, ಜಿಲ್ಲೆಯ ಚುನಾವಣಾ ಯಂತ್ರವು ಕೈಗೊಂಡ ಮತದಾರರ ನೋಂದಣಿ, ಎಪಿಕ್ ವಿತರಣೆ, ಮತದಾರರ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ, ಜಿಲ್ಲೆಯಲ್ಲಿ ಕೈಗೊಂಡ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ (ಸ್ವೀಪ್), ಪೊಲೀಸ್ ಇಲಾಖೆ ಕೈಗೊಂಡ ಕಾನೂನು ಸುವ್ಯವಸ್ಥೆ ಮತ್ತು ಭದ್ರತಾ ಕಾರ್ಯಕ್ರಮಗಳು ಹಾಗೂ ಉತ್ತಮ ಹವಾಮಾನ ಪರಿಸ್ಥಿತಿಗಳು ಹಾಗೂ ಚುನಾವಣಾ ಸಿಬ್ಬಂದಿಯ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಕ್ರಮಗಳಿಂದಾಗಿ 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಮತದಾನದ ಪ್ರಮಾಣವು ಗಣನೀಯವಾಗಿ ಏರಿಕೆಯಾಗಲು ಕಾರಣವಾಯಿತು.
ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳಲ್ಲಿ ಮುಕ್ತವಾಗಿ, ನ್ಯಾಯಸಮ್ಮತವಾಗಿ, ಮತ್ತು ಪಾರದರ್ಶಕವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ಮತದಾನ ನಡೆಯಲು ಬೆಂಬಲ ನೀಡಿದ ಮತ್ತು ಸಹಕರಿಸಿದ ಸರ್ವರಿಗೂ ಅವರು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಮತ ಎಣಿಕೆ ಪ್ರಾರಂಭಕ್ಕೆ ನಿಗಧಿಯಾಗಿರುವ ಗಡುವಿನ ಮುನ್ನಾ ಸಮಯದವರೆಗೂ ಅಂಚೆ ಮತಪತ್ರಗಳನ್ನು ಸ್ವೀಕರಿಸಲು ಅವಕಾಶವಿರುವುದರಿಂದ ಮತದಾನದ ಪ್ರತಿಶತ ಇನ್ನೂ ಏರಿಕೆಯಾಗುವ ಸಾಧ್ಯತೆಗಳಿರುತ್ತವೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿರುತ್ತದೆ. ಮತದಾನದಲ್ಲಿ ಭಾಗವಹಿಸಿದ ಜಿಲ್ಲೆಯ ಆತ್ಮೀಯ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker