ತುಮಕೂರು ನಗರ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಭರ್ಜರಿ ರೋಡ್ ಷೋ
ತುಮಕೂರು : ಸ್ವಾಭಿಮಾನಿ ತುಮಕೂರಿನ ಮತದಾರರು ಈ ಬಾರಿ ನಿಶ್ಚಿತವಾಗಿ ಮತ ನೀಡಿ, ಬಹುಮತದಿಂದ ಚುನಾನಯಿಸಲಿದ್ದಾರೆಂಬ ವಿಶ್ವಾಸವನ್ನು ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವರಾದ ಸೊಗಡು ಶಿವಣ್ಣ ಆತ್ಮವಿಶ್ವಾಸದ ಮಾತುಗಳನ್ನು ಹೇಳಿದರು.
ಇವರು ಶುಕ್ರವಾರ ಸಂಜೆ ತುಮಕೂರು ನಗರದ ಕ್ಯಾತ್ಸಂದ್ರ ಗುಂಡಲಮ್ಮನ ದೇವಸ್ಥಾನದಿಂದ ಮಾರುತಿ ನಗರ, ಮೇದರ ಬೀದಿ, ಇಂದಿರಾ ನಗರ, ಎಸ್.ಎಲ್.ಎನ್.ನಗರ, ತಿಗಳರ ಬೀದಿ, ಪೇಟೆ ಬೀದಿ, ಸುಭಾಷ್‌ನಗರ, ಬಡ್ಡಿಹಳ್ಳಿ, ಗೋಕುಲ ಬಡಾವಣೆ, ಬಟವಾಡಿ ಪ್ರದೇಶ ವ್ಯಾಪ್ತಿಗಳಲ್ಲಿ ಸೊಗಡು ಶಿವಣ್ಣನವರೊಂದಿಗೆ ಸಹಸ್ರಾರು ಸ್ವಾಭಿಮಾನಿ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಅಬ್ಬರದ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಸೊಗಡು ಶಿವಣ್ಣನವರು ತುಮಕೂರು ಸ್ವಾಭಿಮಾನಿ ಮತದಾರರ ಅಸ್ಮಿತೆಯ ಉಳಿವು, ಸಮಗ್ರ ಅಭಿವೃದ್ಧಿ, ಶಾಂತಿ ಸೌರ್ಹಾದತೆ ಪಾರದರ್ಶಕ ಆಡಳಿತವನ್ನು ನಾಗರೀಕರಿಗೆ ತಲುಪಿಸುವ ಕಾರ್ಯಕ್ಕೆ ಬದ್ಧನಾಗಿದ್ದೇನೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಎಲ್ಲಾ ಸಮಾಜದವರ ಕಾರ್ಯ ಚಟುವಟಿಕೆಗಳು, ಜನತೆಯೊಂದಿಗೆ ಬೆರೆತು ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದ ರೀತಿ ನಗರದ ಜನತೆಗೆ ಮೆಚ್ಚುಗೆಯಾಗಿದೆ. ಜಿಲ್ಲೆಯ ಎಲ್ಲಾ ಸಮಾಜದ ಪ್ರತಿ ಜನತೆ ನನ್ನ ಅಭಿಮಾನಿಯಾಗಿದ್ದರು. ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ತುಮಕೂರಿನ ಮೂಲನಿವಾಸಿಗಳು ನಮ್ಮ ವ್ಯಾಪಾರ ವ್ಯವಹಾರದೊಂದಿಗೆ ಇತರೆ ಸಮುದಾಯಗಳ ಸಹಕಾರ ಬೆಂಬಲ ನೀಡುತ್ತಾ ನಮ್ಮೊಂದಿಗಿದ್ದ ಎಲ್ಲಾ ಸಮಾಜ/ವರ್ಗದ ಜನ ಇಂದು ಬೆಂಬಲಿಸುತ್ತಿರುವುದು ಸಂತೋಷದ ವಿಷಯ. ನಗರದ ಬಹುತೇಕ ಮತದಾರರು ಆತ್ಮೀಯತೆಯಿಂದ ಕಾಣುತ್ತಿರುವುದರಿಂದ ಎಲ್ಲಾ ಸಮಾಜಕ್ಕೆ ಗೌರವ ಇಮ್ಮಡಿಯಾಗಿದೆ. ಆಡಳಿತದಲ್ಲಿ ಈ ಹಿಂದೆ ಬಿಗಿ ಕಾಪಾಡಿಕೊಂಡಿದ್ದರ ಫಲವಾಗಿ ಮಹಾನಗರ ಪಾಲಿಕೆ, ಪೋಲೀಸ್ ಇಲಾಖೆ, ತಾಲ್ಲೂಕು ಕಛೇರಿ ಹಾಗೂ ಅನೇಕ ಕಛೇರಿಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಹಾಳಾಗಿರುವ ಆಡಳಿತ ವ್ಯವಸ್ಥೆ, ಭ್ರಪ್ಟಾಚಾರ ತಡೆಗಟ್ಟಲು “ಶಿವಣ್ಣ ಬೇಕು” ಎಂಬ ಜನತೆಯ ಕೂಗು ಕೇಳಿ ಬರುತ್ತಿದೆ. ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿಯಿಂದ ನಮ್ಮ ಸಮಾಜದ ಪ್ರತಿ ವ್ಯಕ್ತಿಗೂ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದು ಮತದಾರರು ಭಾವಿಸಿದ್ದಾರೆ. ಪೂಜ್ಯರು, ಗುರುಗಳ ಸಂದೇಶವನ್ನು ಜನತೆಯ ಮುಂದಿಡುತ್ತಾ ಅವರ ವಚನದಂತೆ ಕಾಯಕಯೋಗಿಯಾಗಿ ನಾನು ಕೆಲಸ ಮಾಡುತ್ತಿದ್ದು, ಪ್ರಶಂಸನೀಯ ಸೋದರ ಭ್ರಾತೃತ್ವವನ್ನು ಮೈಗೂಡಿಸಿಕೊಂಡಿದ್ದೇನೆ. ಹಿರಿಯರು-ಕಿರಿಯರು-ಮಹಿಳೆಯರಲ್ಲಿ ಸೋದರತ್ವ ತೋರುತ್ತಾ, ಗ್ರಾಮೀಣ ಭಾಷೆಯ ಸೊಗಡನ್ನು ಮೈಗೂಡಿಸಿಕೊಂಡು, ಎಲ್ಲಾ ಜನತೆಯೊಂದಿಗೆ ಬೆರೆತು ಪ್ರತಿ ದೂರವಾಣಿ ಕರೆಗೂ ಸ್ಪಂದಿಸುವ ವ್ಯಕ್ತಿಯಾಗಿ ಜನರ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿ ಯೋಜನೆಗಳನ್ನು ನಗರಕ್ಕೆ ನೀಡಿದ್ದೇನೆ ಎಂದು ಸೊಗಡು ಶಿವಣ್ಣ ತಿಳಿಸಿದರು.
ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ನನ್ನ ಕ್ರಮಸಂಖ್ಯೆ:14, ಗುರುತು ‘ರೋಡ್ ರೋಲರ್’ ಗೆ ಮತ ನೀಡಬೇಕೆಂದು ರೋಡ್ ಷೋ ಕಾರ್ಯಕ್ರಮದಲ್ಲಿ ಪದೇ ಪದೇ ಸೊಗಡು ಶಿವಣ್ಣ ಮತದಾರರಿಗೆ ವಿನಂತಿಸಿದರು.
ಈ ಬೃಹತ್ ರೋಡ್ ಷೋನಲ್ಲಿ ಪ್ರಮುಖರಾದ ನಗರಸಭಾ ಮಾಜಿ ಸದಸ್ಯರಾದ ನಯಾಜ್ ಅಹ್ಮದ್, ರಮೇಶಾಚಾರ್, ಡೆಲ್ಟಾರವಿಕುಮಾರ್, ಹಾಗೂ ಅಂಗಡಿ ಬಸವರಾಜು, ಯಜಮಾನ್ ಅರುಣ್‌ಕುಮಾರ್ ಹಾಗೂ ಮಹೇಶ್, ತಿಗಳ ಸಮಾಜದ ಯಜಮಾನ್ ರೇವಣಸಿದ್ದಯ್ಯ, ಕೃಷ್ಣಪ್ಪ ಹಾಗೂ ಸುರೇಶ್(ಸೂರಿ), ಸವಿತಾ ಸಮಾಜದ ಮುಖಂಡ ಸಿದ್ದರಾಜು, ಬಲಿಜ ಸಂಘದ ವರದರಾಜು, ದಲಿತ ಸಮಾಜ ಮುಖಂಡ ವಿಠಲ್, ಕುರುಬ ಸಮಾಜದ ಯುವ ಘಟಕದ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ, ನಾಯಕ ಸಮಾಜದ ಮುಖಂಡ ಕೆ.ಹರೀಶ್, ಡಾ|| ಸಂಜಯ್ ನಾಯಕ್, ಧನಿಯಾಕುಮಾರ್, ಗಿರಿಜಮ್ಮ, ಪಂಡಿತ್, ಎನ್.ನರಸಿಂಹನ್, ಹರ್ಷದ್, ಷಫಿ, ಕೃಷ್ಣಮೂರ್ತಿ (ಶನಿವಾರಿ), ಪಟೇಲ್ ನಟರಾಜ್, ಶ್ಯಾನ್‌ಭೋಗ್ ಪ್ರಮೋದ್, ಮೋಹನ್ ಕುಮಾರ್, ಮಹಾದೇವಯ್ಯ, ದೊರೆರಾಜು, ವೆಂಕಟೇಶ್, ರಾಕೇಶ್, ವಿಕಾಸ್, ಪ್ರದೀಪ್, ಮಧು, ಹರೀಶ್, ಎನ್.ಗಣೇಶ್ ಸವಿತಾ, ರಶ್ಮಿ, ಸುನಿತ, ಮಂಗಳ, ಭವ್ಯ, ಮಂಗಳಮ್ಮ, ತೇಜಸ್, ಶೋಭ ಮುಂತಾದ ಪ್ರಮುಖರೂ ಸೇರಿದಂತೆ ಸುಮಾರು 2500 ಸಾವಿgಕ್ಕೂ ಹೆಚ್ಚು ಸ್ವಾಭಿಮಾನಿ ಕಾರ್ಯಕರ್ತರು ಭಾಗವಹಿಸಿದ್ದರು.