ತುಮಕೂರುತುಮಕೂರು ನಗರರಾಜಕೀಯ

ಸಮಾಜ ಸೇವೆಯೇ ನನಗೆ ಶ್ರೀರಕ್ಷೆ : ನರಸೇಗೌಡ

ತುಮಕೂರು : ಜನಬಲ,ತೊಳ್ಬಲವಿಲ್ಲದೆ,ನನ್ನ ಸಮಾಜ ಸೇವೆಯನ್ನು ಮುಂದಿಟ್ಟುಕೊಂಡು ಕ್ಷೇತ್ರದ ಜನರ ಮುಂದೆ ಮತ ಕೇಳಲಿದ್ದೇನೆ ಎಂದು ಜೆಡಿಎಸ್ ಬಂಡಾಯ ಅಭ್ಯರ್ಥಿ ನರಸೇಗೌಡ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಕ್ಷೇತ್ರದ ಬಗ್ಗೆ ಹಲವಾರು ಕನಸುಗಳನ್ನು ಕಂಡಿದ್ದು, ಅದನ್ನು ಸಹಕಾರ ಮಾಡಲು ಜನಸಾಮಾನ್ಯರು,ಮತ ನೀಡಿ ಸಹಕರಿಸುವಂತೆ ಮನವಿ ಮಾಡಿದರು.
ರಾಜಕೀಯ ಹಿನ್ನೆಲೆಯಿಲ್ಲದ ಕುಟುಂಬದಿಂದ ಬಂದಿರುವ ನನಗೆ,ನಾನು ಮಾಡಿರುವ ಸಮಾಜ ಸೇವೆಯೇ ನನಗೆ ಶ್ರೀರಕ್ಷೆ. ಜೀವನಕ್ಕಾಗಿ ಗುತ್ತಿಗೆದಾರ ವೃತ್ತಿ ನಡೆಸುತ್ತಿದ್ದು,ಅದರಿಂದ ಬಂದ ದುಡಿಮೆಯಲ್ಲಿಯೇ ಕೊಂಚ ಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟು, ನನ್ನ ಕೈಲಾದ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ.ಕಳೆದ 20ಕ್ಕೂ ಹೆಚ್ಚು ವರ್ಷಗಳ ಕಾಲ ಜೆಡಿಎಸ್ ಪಕ್ಷಕ್ಕಾಗಿ ದುಡಿದಿದ್ದೇನೆ.ಕಳೆದ ಮೂರು ಚುನಾವಣೆಗಳಿಂದ ಜೆಡಿಎಸ್ ಪಕ್ಷದ ಟಿಕೇಟ್ ಬಯಸಿ ಅರ್ಜಿ ಸಲ್ಲಿಸಿದರೂ ಇದುವರೆಗೂ ನೀಡಿಲ್ಲ.ದೇವೇಗೌಡರ ಕೈಯಿಂದ ಬಿ.ಫಾರಂ ಪಡೆಯುವ ಅದೃಷ್ಟ ನನಗಿಲ್ಲ ಎಂದುಕೊಳ್ಳುತ್ತೇನೆ.ಯಾರನ್ನು ದೂಷಿಸುವುದಿಲ್ಲ. ಹಾಗಾಗಿ ಜನರ ಮುಂದೆ ಹೋಗಿ ಮತ ಕೇಳುತ್ತೇನೆ ಎಂದರು.

 

ಚಿಹ್ನೆ : ಏರ್ ಕಂಡಿಷನರ್

ಜೆಡಿಎಸ್ ಪಕ್ಷಕ್ಕೆ ಬಂಡಾಯವಾಗಿ ಕಣಕ್ಕೆ ಇಳಿದಿದ್ದ ನಾನು ಕಣದಿಂದ ಹಿಂದೆ ಸರಿಯುತ್ತೇನೆ ಎಂಬ ಗೊಂದಲ ಸೃಷ್ಟಿಯಾಗಿತ್ತು. ಆ ಕಾರಣದಿಂದಲೇ ಯಾವ ಹೇಳಿಕೆಗಳನ್ನು ನೀಡದೆ,ನಾಮಪತ್ರ ವಾಪಸ್ ಪಡೆಯುವ ದಿನಾಂಕ ಮುಗಿದ ನಂತರ ಮಾತನಾಡುತಿದ್ದೇನೆ.ನಾನು ಬಹಳಷ್ಟು ಮಸೀದಿಗಳಿಗೆ,ದೇವಾಲಯಗಳಿಗೆ ಕೈಲಾದ ಸೇವೆ ಮಾಡುತ್ತಿದ್ದೇನೆ.ನನಗೆ ತುಮಕೂರು ಜನತೆ ಸಹಕಾರ ಕೊಟ್ಟು ಗೆಲ್ಲಿಸಿದಲ್ಲಿ ಜನರಿಗೆ ನಾನು ಶಕ್ತಿ ಮೀರಿ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತೇನೆ ಅದು ಸಹ ನನ್ನ ಕೊನೆ ಉಸಿರು ಇರುವವರೆಗೂ ಮಾಡುತ್ತೇನೆ ಎಂದು ನರಸೇಗೌಡ ತಿಳಿಸಿದರು.
ತುಮಕೂರು ನಗರಕ್ಕೆ ಹೇಮಾವತಿ ನೀರು ಬರದೇ ಇದ್ದರು ಇಲ್ಲಿರುವ ಕೆರೆ ಕಟ್ಟೆಗಳನ್ನು ಸ್ವಚ್ಚಗೊಳಿಸಿ, ಅದರಲ್ಲಿನ ನೀರನ್ನು ಸಮರ್ಪಕವಾಗಿ ಕುಡಿಯಲು ಬಳಸಿಕೊಳ್ಳುವ ಯೋಜನೆ ಇದೆ.ಗುತ್ತಿಗೆದಾರನಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಬಲ್ಲವನಾಗಿದ್ದು, ಕ್ಷೇತ್ರದ ಕೆಲಸಕ್ಕಾಗಿ ಯಾವ ಅಧಿಕಾರಿಯ ಬಳಿ ಹೋಗಿ ಕೆಲಸ ಮಾಡಿಸಿಕೊಂಡು ಬರುವಷ್ಟು ಸೌಜನ್ಯತೆ ಹೊಂದಿದ್ದೇನೆ.ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯದ ಜೊತೆಗೆ ಹೈಟೆಕ್ ಶಾಲೆಯ ನಿರ್ಮಾಣದ ಗುರಿ ಹೊಂದಿದ್ದೇನೆ. ಇದೆಲ್ಲಾ ಸಹಕಾರಗೊಳ್ಳಬೇಕಾದರೆ ತುಮಕೂರು ಜನತೆ ನನ್ನ ಕೈ ಹಿಡಿಬೇಕಿದೆ.ಇದರ ಜೊತೆಗೆ ತುಮಕೂರು ನಗರದಲ್ಲಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ನಾನಾಗಿದ್ದು, ಸಮುದಾಯದ ಜನರು ನನ್ನ ಬೆನ್ನಿಗೆ ನಿಲ್ಲಲಿದ್ದಾರೆ ಎಂಬ ವಿಶ್ವಾಸ ನಗಿದೆ ಎಂದು ನರಸೇಗೌಡ ನುಡಿದರು.
ಒಕ್ಕಲಿಗ ಸಮುದಾಯದ ಮುಖಂಡರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ.ಅಲ್ಲದೆ ನನ್ನೊಂದಿಗೆ ಅಟಿಕಾ ಬಾಬು ಅವರು ಸಹ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ.ಒಂದು ವೇಳೆ ಆಟಿಕಾ ಬಾಬುಗೆ ಟಿಕೇಟ್ ದೊರೆತ್ತಿದ್ದರೆ ನಾನು ಅವರ ಪರವಾಗಿ ಕೆಲಸ ಮಾಡುತಿದ್ದು, ಅವರು ಸ್ಪರ್ಧೆಯಲ್ಲಿ ಇಲ್ಲದ ಕಾರಣ ಅವರು ನನ್ನ ಬೆಂಬಲಕ್ಕೆ ಬರಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ ಅವರು ಚುನಾವಣಾ ಆಯೋಗ ನನಗೆ ಏರ್ ಕಂಡಿಷನರ್ ಚಿಹ್ನೆ ನೀಡಿದ್ದು, ಕ್ರ.ಮ ಸಂಖ್ಯೆ 11 ಆಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಾಗೇಂದ್ರ, ಶಾರುಕ್, ಕಂಭಣ್ಣ, ಗಿರೀಶ್, ಜೋಸೇಪ್, ಮಲ್ಲಿಕಾ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker