ಮಧುಗಿರಿ : ನಾನು ಸ್ಥಳೀಯನಾಗಿದ್ದು ,ನಿಮ್ಮ ಮನೆಯ ಮಗನಾಗಿದ್ದು ನನಗೆ ಮತನೀಡಿ ಎಂದು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್ ಸಿ ನಾಗರಾಜು ಮನವಿ ಮಾಡಿದರು.
ತಾಲೂಕಿನ ಕಸಬಾ ಹೋಬಳಿಗೆ ಸೇರಿದ ಬಂದ್ರೆಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ಮೋದಿ ಸರ್ಕಾರದ ಮಹತ್ತರವಾದ ಸಾಧನೆಗಳನ್ನು ಕಂಡು ಬಿಜೆಪಿ ಪಕ್ಷದಿಂದ ನಾನು ಉಮೇದುದಾರನಾಗಿ ಸ್ಪರ್ಧಿಸಿದ್ದೇನೆ ಎಂದರು.
ಕೊರೋನಾ ಸಂದರ್ಭದಲ್ಲಿ ಇಡೀ ದೇಶ ನಾಗರೀಕರ ಪ್ರಾಣ ಉಳಿಸಿದ ಮೋದಿ ಸರ್ಕಾರವು ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದೆ ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ನಾಗರೀಕರ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಯೋಜನೆ ಮೋದೀಜಿಯವರು ತಂದಿದ್ದು ದುಡಿಯುವ ಕೈಗಳಿಗೆ ಕೆಲಸವಿತ್ತು ,ವೃದ್ಧರಿಗೆ ಆಸರೆಯಾಗಿ ನಮ್ಮ ಸರ್ಕಾರವು ನಿಂತಿದೆ ಎಂದು ಹೇಳಿದರು.
ನಾನು ಸಹಸ್ರಾರು ಮಂದಿಗೆ ಹೃದಯ ರೋಗ ಮತ್ತು ಕ್ಯಾನ್ಸರ್ ರೋಗ ಪತ್ತೆ ಮತ್ತು ಔಷಧೋಪಚಾರಕ್ಕಾಗಿ ಸಹಾಯ ಮಾಡಿದ್ದೇನೆ ಎಂದ ಅವರು ಬಡವರಿಗೆ ಸೂರು ನಿರ್ಮಿಸಿಕೊಳ್ಳಲು ನೆರವು , ಅನಾಥಾಶ್ರಮಗಳ ಸ್ಥಾಪನೆ ಹೀಗೆ ಹತ್ತು ಹಲವು ಜನ ಪರ ಕಾರ್ಯಗಳನ್ನು ಮಾಡಿದ್ದು ,ಈ ಬಾರಿ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದರೆ ಮಧುಗಿರಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಮೂಲಕ ಸರ್ವತೋಮುಖ ಅಭಿವೃದ್ಧಿಯನ್ನು ಮಾಡುತ್ತೇನೆ ಎಂದರು.
ಈ ಕ್ಷೇತ್ರ ಜನರ ಕಷ್ಟ ಕಾರ್ಪಣ್ಯ ನನಗೆ ತಿಳಿದಿದ್ದು ,ನನ್ನ ಜನರ ಬದುಕು ಹಸನಗೊಳಿಸಲು ನನ್ನ ಬದುಕನ್ನು ಮೀಸಲಿಡುತ್ತೇನೆ ಎಂದು ಹೇಳಿದರು.
ಈ ವೇಳೆ ಮುಖಂಡರಾದ ಪಿಎಲ್ ನರಸಿಂಹಮೂರ್ತಿ,ಚಿಕ್ಕೋಬರೆಡ್ಡಿ,ಟಿ. ಗೋವಿಂದರಾಜು,
ರಂಗನಾಥ ,ವಕೀಲ ಜಿಎನ್ ನರಸಿಂಹಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು .
|