ಜಿಲ್ಲೆತುಮಕೂರುದೇಶಮಧುಗಿರಿರಾಜಕೀಯರಾಜ್ಯ

ಲೋಕಸಭಾ ಚುನಾವಣೆಗೆ ನಿಲ್ಲಿಸಿ ನನ್ನನ್ನು ಬಲಿ ಪಶು ಮಾಡಿದರು : ಹೆಚ್.ಡಿ.ದೇವೇಗೌಡ

ಮಧುಗಿರಿ : ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ತುಮಕೂರಿನಿಂದ ನಿಲ್ಲಲು ಬಯಸಿದವನಲ್ಲ. ರಾಜಕೀಯ ನಿವೃತ್ತಿ ಘೋಷಿಸಲು ಬಯಸಿದ್ದೆ, ಆದರೆ ಜಿಲ್ಲೆಯ ಕೆಲ ಮುಖಂಡರು ಚುನಾವಣೆಗೆ ನಿಲ್ಲಿಸಿ ನನ್ನನ್ನು ಬಲಿ ಪಶು ಮಾಡಿದರು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆರೋಪಿಸಿದರು.

ತಾಲೂಕಿನ ದೊಡ್ಡೇರಿ ಹೋಬಳಿಯ ಡಿ ಕೈಮರ ಗ್ರಾಮದ ಶಾಸಕ ವೀರಭದ್ರಯ್ಯನವರ ಸಮೀಪ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕರ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಲೋಕಸಭೆಯಿಂದ ಸ್ಪರ್ಧಿಸಬೇಕೆಂದು ನಾನು ಎಂದೂ ಅಂದುಕೊಂಡವನಲ್ಲಾ. ನನಗೆ ಮಂಡಿನೋವಿದೆ, ಎದ್ದು ನಿಲ್ಲೋಕೆ ಕಷ್ಟ ಆಗುತ್ತೆ. ಚುನಾವಣಾ ರಾಜಕೀಯ ಸಾಕಾಗಿದೆ ಎಂದು ಈ ಹಿಂದೆಯೇ ಹೇಳಿದ್ದೆ. ಆದರೇ ತುಮಕೂರಿನ ಕೆಲ ಮುಖಂಡರು ನನ್ನನ್ನ ಬಲಿಪಶು ಮಾಡಿದ್ರು ಎಂದು ಹೇಳಿ ನಾನು ಯಾರ ಮನಸ್ಸನ್ನು ನೋಯಿಸುವುದಿಲ್ಲ. ನಾನು ಹಿಂದೆಯದ್ದನ್ನ ಮೆಲುಕು ಹಾಕಿ ನೋಡೋಕು ಹೋಗೋದಿಲ್ಲಾ. ಕಾಂಗ್ರೆಸ್ ನವರು ಜೆಡಿಎಸ್ ಗೆ ಕೇವಲ 20 ಸ್ಥಾನಗಳು ಮಾತ್ರ ಬರುತ್ತದೆ ಎಂದು ಹೇಳುತ್ತಿದ್ದು, ಬಹುಶಃ ಮಧುಗಿರಿ ಒಂದೇ ಸಾಕು ಕಾಂಗ್ರೆಸ್ ನಾಯಕರಿಗೆ ಉತ್ತರ ಕೊಡೋಕೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ದ ಹರಿಹಾಯ್ದರು.

ಈ ಹಿಂದೆ ನಾನು ಸಿಎಂ ಆಗುವ ಸಂದರ್ಭದಲ್ಲಿ ತುಮಕೂರಿನಲ್ಲಿ 9 ಕ್ಷೇತ್ರಗಳನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಈ ಬಾರಿಯ ಚುನಾವಣೆಯಲ್ಲೂ ಮತದಾರರು ಅದೇ ಫಲಿತಾಂಶವನ್ನು ನೀಡಬೇಕು. ಕುಮಾರಣ್ಣ ನಿಮ್ಮ ಮೇಲೆ ವಿಶ್ವಾಸ ವಿಟ್ಟಿದ್ದು, ಅವರು ರಾಜ್ಯದ ಅಭಿವೃದ್ಧಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು, ಕೊಟ್ಟ ಮಾತಿನಂತೆ ನಡೆಯುತ್ತಾರೆ ಆದ್ದರಿಂದ ಈ ಬಾರಿ ಕುಮಾರಣ್ಣನಿಗೆ ಶಕ್ತಿ ತುಂಬಿ ಎಂದು ಕರೆ ನೀಡಿದರು.

ಶಾಸಕ ಎಂ.ವಿ. ವೀರಭದ್ರಯ್ಯನವರು ಮಧುಗಿರಿ ಕಂದಾಯ ಜಿಲ್ಲೆಯನ್ನಾಗಿ ಮಾಡಬೇಕು. ಏಕಶಿಲಾ ಬೆಟ್ಟಕೆ ರೋಪ್ ವೇ ಅಳವಡಿಸಬೇಕು ತಾಲೂಕಿನಲ್ಲಿ ಇಂಡಸ್ಟ್ರಿಯಲ್ ಕ್ಲಸ್ಟರ್ ಮಾಡಬೇಕು ಎಂಬ ಕನಸು ಹೊಂದಿದ್ದು, ಅವರನ್ನು ಹೆಚ್ಚಿನ‌ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಜಿಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ ಬಿಜೆಪಿಯಿಂದಾಗಿ ಕರ್ನಾಟಕದ ಗೌರವವಿಲ್ಲದಂತಾಗಿದ್ದು, ಅವರು ಯಡಿಯೂರಪ್ಪನನ್ನು ಮುಗಿಸಿದ್ದಾರೆ. ರಾಜ್ಯದ 7 ಕೋಟಿ ಜನತೆಯ ಕಲ್ಯಾಣಕ್ಕಾಗಿ ಜೆಡಿಎಸ್ ಬೆಂಬಲಿಸಿ ಎಂದು ಮನವಿ ಮಾಡಿದರು.

ಹಿಂದುಳಿದವರಿಗೆ ಮೀಸಲಾತಿ ಕೊಟ್ಟವರು ಕೆಂಪೇಗೌಡನ ಮಗ ದೇವೇಗೌಡ. ಇಂತಹ ದೇವೇಗೌಡರನ್ನು ಕಾಂಗ್ರೆಸ್ ನವರು ಇಳಿ ವಯಸ್ಸಿನಲ್ಲಿ ತುಮಕೂರಿನಿಂದ ದೇವೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿ ಅನ್ನದಲ್ಲಿ ವಿಷ ಹಾಕುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸಾದನೆ ಏನು ಎಂದ ಅವರು ಅವರು ಸಿಡಿಯಲ್ಲಿರುವ ಮಂತ್ರಿಗಳಿಗೆ ಇವತ್ತು ಟಿಕೆಟ್ ಕೊಟ್ಟಿದ್ದಾರೆ. ಇಂತಹ ಅಪವಿತ್ರರು ರಾಜ್ಯದಲ್ಲಿದ್ದರೆ ಮಳೆಯಾಗುತ್ತಾ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಒಬ್ಬಂಟಿಯಾಗಿದ್ದು, ಅವರ ಕೈಯಲ್ಲಿ ಏನು ಆಗುತ್ತದೆ ಎಂದು ಕೆಲವರು ಕೇಳುತ್ತಿದ್ದು, 50 ಆಕಳು ಕಟ್ಟಿದರೂ ಅಲ್ಲಿ ಒಂದೇ ಹೋರಿ ಕಟ್ಟುವುದು ಎಂಬುದನ್ನು ಅವರು ಅರಿಯಬೇಕು ಎಂದು ಸಮಾವೇಶದಲ್ಲಿ ನಗೆ ಚಟಾಕಿ ಹಾರಿಸಿದರು.

ಶಾಸಕ ಎಂ.ವಿ. ವೀರಭದ್ರಯ್ಯ ‌ಮಾತನಾಡಿ ಕಳೆದ 5 ವರ್ಷಗಳಲ್ಲಿ ಪ್ರಕೃತಿ ನಮ್ಮ ಪರವಾಗಿ ಇರಲಿಲ್ಲ. ಆರಂಭದಲ್ಲಿ ಬೀಕರ ಬರಗಾಲ ಆವರಿಸಿತ್ತು ಈ ಸಂದರ್ಭದಲ್ಲಿ ತಾಲೂಕಿನಾದ್ಯಂತ 300 ಬೋರ್ ವೆಲ್ ಗಳನ್ನು ಕೊರೆಸಲಾಗಿತ್ತು. 6.70 ಕೋಟಿ ಅನುದಾನ ತಂದು ತಾಲೂಕಿನಲ್ಲಿ ಮೇವು ಬ್ಯಾಂಕ್ ಆರಂಭಿಸಿ ರೈತರ ನೆರವಿಗೆ ದಾವಿಸಲಾಗಿತ್ತು. 2 ವರ್ಷ ಕರೋನಾ ಆವರಿಸಿ ಕಾಮಗಾರಿ ಕುಂಟಿತಗೊಂಡಿತ್ತು. ಬಿಜೆಪಿ ಸರ್ಕಾರದಲ್ಲಿ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತಹ ಪರಿಸ್ಥಿತಿ ಇದ್ದರೂ
1143 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ.
ಈಗಾಗಲೇ ಮಧುಗಿರಿ ಉಪವಿಭಾಗವಾಗಿದ್ದು, ಮಧುಗಿರಿ ಜಿಲ್ಲೆಯದಾಗ ಮಾತ್ರ ಕ್ಷೇತ್ರ ಅಭಿವೃದ್ಧಿ ಸಾದ್ಯ. ಮಧುಗಿರಿಯ ಏಕಶಿಲಾ ಬೆಟ್ಟ ದೊಡ್ಡ ಸಂಪತ್ತು ಇದನ್ನು ಉಪಯೋಗಿಸುವಲ್ಲಿ ಸರ್ಕಾರ ಎಡವಿದೆ. ಈ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸಿದ್ದಲ್ಲಿ ಆರ್ಥಿಕ ಚಟುವಟಿಕೆ ಸಾದ್ಯವಾಗಲಿದೆ. ಕ್ಷೇತ್ರದಲ್ಲಿ ಇಂಡಸ್ಟ್ರಿಯಲ್ ಕ್ಲಸ್ಟರ್ ಆದಲ್ಲಿ ನಿರುದ್ಯೋಗ ದೂರಾಗಲಿದ್ದು, ಯುವಕರಿಗೆ ಕೆಲಸ ದೊರೆಯಲಿದೆ.
ಎತ್ತಿನಹೊಳೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಕಾಮಗಾರಿ ತ್ವರಿತಗೊಳಿಸಿದಲ್ಲಿ ಕೆರೆಗಳಿಗೆ ನೀರು ಹರಿಯಲಿದ್ದು, ಈ ಬಾರಿ ನನ್ನನ್ನು ಗೆಲ್ಲಿಸಿ ಜೆಡಿಎಸ್ ಗೆ ಆಶೀರ್ವದಿಸಿದಲ್ಲಿ ಕುಮಾರ ಸ್ವಾಮಿ ಸಿಎಂ ಆಗಲಿದ್ದು, ಅವರು ಸಿಎಂ ಆದರೆ ಮಧುಗಿರಿ ಯ ಭಾಗ್ಯದ ಬಾಗಿಲು ತೆರೆಯಲಿದೆ ಎಂದರು.

(ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ವೀರಭದ್ರಯ್ಯನವರಿಗೆ 18 ಸಾವಿರ ಮತಗಳು ಬಂದಿದ್ದು, ಆದರೆ ಇದೇ ಮತಗಳು ಕಳೆದ ಲೋಕಸಭಾ ಚುನಾವಣೆಯಲ್ಲಿ ನನಗೆ ಯಾಕೆ ಬಂದಿಲ್ಲ..! ಅದಕ್ಕೆ ಕಾರಣ ಯಾರು ಎಂಬುದು ನನಗೆ ಗೊತ್ತು. ನನ್ನ ಕಣ್ಣೀರಿಗೆ ಕಾರಣರಾದವರನ್ನು ಕ್ಷೇತ್ರದ ಜನತೆ ಕಣ್ಣೀರು ಹಾಕಿಸಿದಾಗ ಮಾತ್ರ ನನ್ನ ಆತ್ಮಕ್ಕೆ ಶಾಂತಿ ದೊರೆಯಲಿದೆ ಎಂದು ಪರೋಕ್ಷವಾಗಿ ಕೆ.ಎನ್. ರಾಜಣ್ಣರ ವಿರುದ್ದ ಗುಡುಗಿದ ದೇವೇಗೌಡರು ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದರು.)

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾದ್ಯಕ್ಷ ಅರ್ ಸಿ ಅಂಜಿನಪ್ಪ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಹಲಿಂಗಯ್ಯ, ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ಪುರಸಭಾ ಅಧ್ಯಕ್ಷ ತಿಮ್ಮರಾಜು,
ಸದಸ್ಯರಾದ ಎಂ. ಅರ್ ಜಗನ್ನಾಥ್, ಎಂ. ಎಲ್ ಗಂಗರಾಜು, ಚಂದ್ರಶೇಖರ್ ಬಾಬು, ಮುಖಂಡರಾದ ತಿಮ್ಮೆಗೌಡ, ಬಸವರಾಜು, ಕಂಭತ್ತನಹಳ್ಳಿ ರಘು, ವೆಂಕಟಾಪುರ ಗೋವಿಂದರಾಜು, ಪಾವಗಡ ಶ್ರೀರಾಮ್, ಎಸ್.ಡಿ. ಕೃಷ್ಣಪ್ಪ, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ಅರ್.ಲಕ್ಷ್ಮಮ್ಮ ಇತರರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker