ಮಧುಗಿರಿ : ಕಾಂಗ್ರೆಸ್ ನವರ ಗ್ಯಾರಂಟಿ ಕಾರ್ಡ್ ವಿಸಿಂಟಿಗ್ ಕಾರ್ಡ್ ಆಗಿದ್ದು, ಇದನ್ನು ಕಸದ ಬುಟ್ಟಿಗೆಸೆಯಿರಿ ಎಂದು ಸಿ.ಎಂ ಬೊಮ್ಮಾಯಿ ವ್ಯಂಗ್ಯವಾಡಿದರು.
ಮಧುಗಿರಿಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ನಂತರ ಪಟ್ಟಣದ ಪಾವಗಡ ವೃತ್ತದ ಬಳಿಯಿರುವ ಡಾ. ಬಿ. ಆರ್ ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಮಾತನಾಡಿದ ಅವರು ಕಾಂಗ್ರೆಸ್ ನವರು ಮನೆ ಮನೆಗೂ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದು, ಅವರ ಮಾತಿನಲ್ಲಿ ಜನರಿಗೆ ಗ್ಯಾರಂಟಿಯಿಲ್ಲ. ಜನ ಪ್ರತೀ ಮನೆಯಲ್ಲಿ 75 ಯೂನಿಟ್ ಮಾತ್ರ ವಿದ್ಯುತ್ ವ್ಯಯಿಸುತ್ತಿದ್ದು, ಇವರು 200 ಯೂನಿಟ್ ನೀಡುವುದಾಗಿ ಘೋಷಿಸಿ ಜನರನ್ನು ಯಾಮಾರಿಸುತ್ತಿದ್ದು, ಕಾಂಗ್ರೆಸ್ ನವರ ಮಾತಿನ ಮೇಲೆ ಜನರಿಗೆ ನಂಬಿಕೆ ಇಲ್ಲದ ಕಾರಣ ಕಾಂಗ್ರೆಸ್ ನವರು ಗ್ಯಾರಂಟಿ ಕಾರ್ಡ್ ಗಳನ್ನು ಹಂಚುತ್ತಿದ್ದು ಇವುಗಳನ್ನು ಕಸದ ಬುಟ್ಟಿಗೆ ಎಸೆಯಬೇಕು ಎಂದು ಹೇಳಿದರು.
ಮೋದಿಯವರ ಡಬಲ್ ಇಂಜಿನ್ ಸರ್ಕಾರ ದೇಶಕ್ಕೆ, ನಾಡಿಗೆ ಜನಪರ ಯೋಜನೆಗಳನ್ನು ಕಾರ್ಯಕ್ರಮಗಳನ್ನು ಕೊಟ್ಟಿದ್ದು, ನಮ್ಮ ಕೆಲಸದ ಆದಾರದ ಮೇಲೆ ಮತ ನೀಡಿ. ರಾಜ್ಯಾದ್ಯಂತ ಬಿಜೆಪಿ ಪಕ್ಷದ ಸುನಾಮಿ ಇದ್ದು, ಇಂದು ಇದು ಮಧುಗಿರಿಗೂ ವಿಸ್ತರಿಸಿದೆ ಮುಂಬರುವ ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಮಲ ಅರಳುವುದು ಶತ ಸಿದ್ಧ ಎಂದರು.
ಎರಡು ಬಣಗಳ ಶಕ್ತಿ ಪ್ರದರ್ಶನ : ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ
ಎಲ್ ಸಿ ನಾಗರಾಜು ಮತ್ತು ಭೀಮನಕುಂಟೆ ಹನುಮಂತೇಗೌಡ ಅಭಿಮಾನಿಗಳು ದಂಡಿನ ಮಾರಮ್ಮನ ಹಿಡಿದು ಪಾವಗಡ ವೃತ್ತದ ವರೆವಿಗೂ ಬ್ಯಾನರ್ ಗಳನ್ನು ಹಿಡಿದು ತಮ್ಮ ನಾಯಕರುಗಳ ಪರವಾಗಿ ಘೋಷಣೆ ಗಳನ್ನು ಕೂಗಿ ಟಿಕೆಟ್ ನೀಡಬೇಕೆಂದು ಮುಖ್ಯಮಂತ್ರಿ ಗಳ ಗಮನ ಸೆಳೆದರು. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ವೆ ನಡೆಸಿ ಯಾರಿಗೆ ಟಿಕಿಟ್ ನೀಡಬೇಕು ಎಂಬುದನ್ನು ತೀರ್ಮಾನಿಸುತ್ತೇವೆ. ಕಾರ್ಯಕರ್ತರು ಅವರಿಗೆ ಬೆಂಬಲಿಸಿ ಎಂದು ಬೊಮ್ಮಾಯಿ ತಿಳಿಸಿದರು.
ಬಿಜೆಪಿ ಪಕ್ಷ ಸೇರ್ಪಡೆ ಗೊಂಡ ಎಲ್ ಸಿ ನಾಗರಾಜು : ಇತ್ತೀಚೆಗಷ್ಟೇ ಸ್ವಯಂ ನಿವೃತ್ತಿ ಪಡೆದ ಕೆ ಎ ಎಸ್ ಅಧಿಕಾರಿ ಹಾಗೂ ಜನಮುಖಿ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ನಾಗರಾಜು ಸಿಎಂ ಬಸವರಾಜು ಬೊಮ್ಮಾಯಿ ಸಮ್ಮುಖದಲ್ಲಿ ಬೆಜೆಪಿ ಸೇರ್ಪಡೆಯಾದರು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ :
ಇದಕ್ಕೂ ಮೊದಲು ಶ್ರೀ ದಂಡಿನ ಮಾರಮ್ಮ ದೇವಸ್ಥಾನಕ್ಕೆ ಸಿಎಂ ಬೊಮ್ಮಾಯಿ ಪೂಜೆ ಸಲ್ಲಿಸಿದರು. ನಂತರ
ಅಲ್ಲಿಂದ ತುಮಕೂರು ಗೇಟ್, ಟಿವಿವಿ ವೃತ್ತ, ನೃಪತುಂಗ ಸರ್ಕಲ್, ಪಾವಗಡ ರಸ್ತೆ ಮೂಲಕ ಯಾತ್ರೆ ವಿಜಯ ಸಂಕಲ್ಪ ಯಾತ್ರೆ ನಡೆಸಿ ಡಾ. ಬಿ. ಆರ್. ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಆರ್ ಅಶೋಕ್, ಡಾ. ಸುಧಾಕರ್, ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ, ಬೀಮನಕುಂಟೆ ಹನುಂಮತೇಗೌಡ, ಎಲ್.ಸಿ. ನಾಗರಾಜು, ಬಿ.ಕೆ. ಮಂಜುನಾಥ್, ಪಿ.ಎಲ್. ನರಸಿಂಹಮೂರ್ತಿ ಇತರರಿದ್ದರು.