ತಿಪಟೂರು

ಸಿದ್ಧರಾಮೇಶ್ವರರ 850ನೇ ಸುವರ್ಣ ಜಯಂತಿ ಮಹೋತ್ಸವಕ್ಕೆ ಸಕಲ ಸಿದ್ಧತೆ : ಕೆರೆಗೋಡಿ ರಂಗಾಪುರ ಶ್ರೀ

ತಿಪಟೂರು : ಕಾಯಕಯೋಗಿ ಸಿದ್ಧರಾಮೇಶ್ವರರ 850ನೇ ಸುವರ್ಣ ಜಯಂತಿ ಮಹೋತ್ಸವವನ್ನು ಜನವರಿ 14 ಮತ್ತು 15ರಂದು ವಿಜೃಂಭಣೆಯಿದ ಆಚರಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಭಾನುವಾರ ಸಿದ್ಧರಾಮೇಶ್ವರರ 850ನೇ ಸುವರ್ಣ ಜಯಂತಿ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಯಂತಿ ಮಹೋತ್ಸವವು ರಾಜ್ಯಮಟ್ಟದಲ್ಲಿ ನಡೆಯುವುದರಿಂದ ರೈತರಿಗೆ ಅನುಕೂಲವಾಗುವಂತಹ ಕೃಷಿ ಉಪಕರಣಗಳು, ಸಲಕರಣೆಗಳ ಪರಿಚಚಯ, ವಿದ್ಯಾರ್ಥಿಗಳಿಗೆ, ಹಿರಿಯರಿಗೆ ಪುಸ್ತಕ ಪ್ರೇಮಿಗಳಿಗೆ ಅನುಕೂಲವಾಗುವಂತೆ ಪುಸ್ತಕಗಳ ಪ್ರದರ್ಶನ ಮಾರಾಟವನ್ನು ಮಾಡಲಾಗುವುದು. ಕಾರ್ಯಕ್ರಮಕ್ಕೆ 3 ಲಕ್ಷಕ್ಕೂ ಅಧಿಕ ಜನರ ನಿರೀಕ್ಷೆಯನ್ನು ಹೊಂದಿದ್ದು ಸಕಲ ಸಿದ್ದತೆಗಳನ್ನು ಉಪಸಮಿತಿಗಳನ್ನು ರಚನೆ ಮಾಡಿ ಕಾರ್ಯಪ್ರವೃತ್ತರಾಗಿದ್ದಾರೆ. ಕಾರ್ಯಕ್ರಮದ ಪ್ರಾರಂಭವನ್ನು ಜಾನಪದ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ಮಾಡಲು ನಿಶ್ಚಯಿಸಿದ್ದು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.
ಸ್ವಾಗತ ಸಮಿತಿಯ ಅಧ್ಯಕ್ಷ ಬೊರ್‌ವೆಲ್ ಮಧುಸೂಧನ್ ಮಾತನಾಡಿ ಜಯಂತಿ ಆಚರಣೆಗೆ ಅವಕಾಶ ದೊರೆತಿರುವುದು ನಿಜಕ್ಕೂ ಹೆಮ್ಮಯ ಸಂಗತಿ. ರಾಜ್ಯದ ಗಣ್ಯಾತಿಗಣ್ಯರು, ಮಠಾಧೀಶರುಗಳು, ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಜ್ಯಾತ್ಯಾತೀತವಾಗಿ ಬಂದು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್, ಮಾದಿಹಳ್ಳಿ ದಯಾನಂದ್, ದೊಡ್ಡಯ್ಯನಪಾಳ್ಯದ ಸೋಮಶೇಖರ್, ದಕ್ಷಿಣ ಮೂರ್ತಿ, ನವಿಲೆ ಪರಮೇಶ್, ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್, ಮಾಜಿ ಜಿ.ಪಂ.ಸದಸ್ಯ ತ್ರಿಯಂಬಕ, ಕೆರೆಗೋಡಿ ದೇವರಾಜು, ಶಿವಪ್ಪ, ಕಿರುತೆರೆ ನಟ ದಯಾನಂದಸಾಗರ್, ಜ್ಯೋತಿಗಣೇಶ್, ಹೊಗವನಘಟ್ಟ ಯೋಗಣ್ಣ, ಕೆ.ಟಿ.ಶಾಂತಕುಮಾರ್, ಅನಗೊಂಡನಹಳ್ಳಿ ತ್ರಿವೇಣಿ ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker