ಗೊರವನಹಳ್ಳಿ ಮಾತೆ ಕಮಲಮ್ಮ ಬೃಂದಾವನಕ್ಕೆ ಬೆಳ್ಳಿಕವಚ ಸಮರ್ಪಣೆ
ಕೊರಟಗೆರೆ : ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ಕಮಲಮ್ಮ ಸೇವಾ ಟ್ರಸ್ಟ್ ವತಿಯಿಂದ ಮಾತೆ ಕಮಲಮ್ಮರವರ ೨೦ನೇ ವರ್ಷದ ಆರಾಧನಾ ಮಹೋತ್ಸವ ಅಂಗವಾಗಿ ಮಾತೆ ಕಮಲಮ್ಮ ಮೂಲ ಬೃಂದಾವನಕ್ಕೆ ಬೆಳ್ಳಿಕವಚ ಸಮರ್ಪಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಶ್ರೀ ಮಹಾಲಕ್ಷ್ಮಿ ಕಮಲಮ್ಮ ಸೇವಾ ರತ್ನ ಹಾಗೂ ಶ್ರೀ ಮಹಾಲಕ್ಷ್ಮಿ ಕಮಲಮ್ಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಟ್ರಸ್ಟ್ ಧರ್ಮದರ್ಶಿಗಳಾದ ಶ್ರೀಪ್ರಸಾದ್ ಮತ್ತು ಶ್ರೀಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಅವರು ಕೊರಟಗೆರೆ ಪಟ್ಟಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿಯೇ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯ ನಿರ್ಮಾತೃ ದಿವಾಂಗತ ಮಾತೆ ಕಮಲಮ್ಮ ನವರ ಹೆಸರಿನಲ್ಲಿ ಸಮಾಜಸೇವೆಗಾಗಿ ಸ್ಥಾಪಿಸಿರುವ ಮಹಾಲಕ್ಷ್ಮೀ ಕಮಲಮ್ಮ ಸೇವಾ ಟ್ರಸ್ಟ್ ವತಿಯಿಂದ ಮಾತೆ ಕಮಲಮ್ಮ ನವರ ೨೦ ನೇ ಆರಾಧನಾ ಮಹೋತ್ಸವ ಅಂಗವಾಗಿ ಡಿ.೧೧ ರಂದು ಮಧ್ಯಾಹ್ನ ೧೨ ಗಂಟೆಗೆ ಗೊರವನಹಳ್ಳಿ ಕಮಲಮ್ಮನವರ ಮೂಲ ಬೃಂದಾವನಕ್ಕೆ ವಿವಿಧ ಪೂಜಾಕಾರ್ಯಕ್ರಮಗಳೊಂದಿಗೆ ಮಹಾಮಂಗಳಾರತಿ ನಂತರ ಬೃಂದಾವನಕ್ಕೆ ಬೆಳ್ಳಿ ಕವಚ ಧಾರಣೆ ನಂತರ ಭಕ್ತಾಧಿಕಾಗಳಿಗೆ ತೀರ್ಥ ಪ್ರಸಾದ ವಿನಿಯೋಗ ಮತ್ತು ಕಮಲಪ್ರಿಯ ಹಾಲ್ ನಲ್ಲಿ ಭೋಜನ,
ನಂತರ ಕಮಲಮ್ಮ ನವರ ಮೂಲ ಬೃಂದಾವನದ ಬಳಿ ನಿರ್ಮಿಸಿರುವ ದಿ.ಡಾ.ಹೆಚ್.ಸಿ.ಪ್ರಸನ್ನಕುಮಾರ್ ವೇದಿಕೆಯಲ್ಲಿ ಸಂಜೆ ೩ ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ೪ ಗಂಟೆಗೆ ಗೊರವನಹಳ್ಳಿ ಮಹಾಲಕ್ಷ್ಮಿ ಕಲಾ ಪ್ರತಿಷ್ಠಾನದ ಶ್ರೀಲಕ್ಷ್ಮೀಪ್ರಸಾದ್ ರವರ ತಂಡದಿಂದ “ಗೀತ ಗಾಯನ” ಕಾರ್ಯಕ್ರಮ ಏರ್ಪಡಿಸಿದು ಸಂಜೆ ೫ ಗಂಟೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರುಗಳಿಗೆ ಕಮಲಮ್ಮ ನವರ ಮೂಲಕ ಬೃಂದಾವನದ ಬಳಿ ಮಹಾಲಕ್ಷ್ಮಿ ಕಮಲಮ್ಮ ಸೇವಾರತ್ನ ಹಾಗೂ ಶ್ರೀ ಮಹಾಲಕ್ಷ್ಮಿ ಕಮಲಮ್ಮ ಸೇವಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು, ಮಾತಾ ಕಮಲಮ್ಮ ಬೃಂದಾವನದ ಸಂಸ್ಥಾಪಕಿ ಲಲಿತಮ್ಮ ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ. ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟನ ಅಧ್ಯಕ್ಷ ಬಿ.ಜಿ.ವಾಸುದೇವ್, ಹೊದೇಕಲ್ಲು ಸರೋಜಮ್ಮ, ವಿದ್ವಾನ್ ಡಾ.ಗೋಪಾಲಕೃಷ್ಣ ಶರ್ಮಗುರೂಜಿ, ಡಾ.ಮಲ್ಲಿಕಾರ್ಜುನ್, ಸುದರ್ಶನ್, ಸಿಂಗಾಪುರ್ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಧೂಷಿ ಭ್ಯಾಗ್ಯಮೂರ್ತಿ, ಹರಿಕಥಾ ವಿದ್ವಾನ್ ಜಗನ್ನಾಥಚಾರ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಲಲಿತಮ್ಮ, ಶ್ರೀಪ್ರಸಾದ್, ಶ್ರೀಲಕ್ಷ್ಮೀಪ್ರಸಾದ್ ಸೌಮ್ಯಸುಬ್ರಮಣ್ಯ, ಎಂ.ಆರ್.ಪ್ರಸನ್ನ, ಶ್ರೀಹರ್ಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.