ಕೊರಟಗೆರೆರಾಜಕೀಯ

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣಬಹುಮತದೊಂದಿಗೆ ಅಧಿಕಾರಕ್ಕೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಎತ್ತಿನಹೊಳೆ ನೀರಾವರಿ ಯೋಜನೆಯನ್ನು ಪ್ರಾರಂಭಿಸಿದ್ದು ಬಿಜೆಪಿ ಸರ್ಕಾರ

ಕೊರಟಗೆರೆ : ರಾಜ್ಯದಲ್ಲಿ ೨೦೨೩ ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗುಜರಾತ್ ರಾಜ್ಯದಂತೆ ಸುನಾಮಿ ರೀತಿ ಮತ್ತೆ ೧೩೨ ಸ್ಥಾನಗಳು ಗಳಿಸಿ ರಾಜ್ಯದಲ್ಲಿ ಪುರ್ಣಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮೋಯಿ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬಿಜೆಪಿ ಪಕ್ಷದ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ಜನರು ಗಮನಿಸಿದ್ದಾರೆ, ಧರ್ಮಗಳ ಮತ್ತು ಜಾತಿಗಳ ಮಧ್ಯ ವಿಷಬೀಜ ಬಿತ್ತಿ ಸಮಾಜವನ್ನು ಒಡೆದು ಅದರಲ್ಲಿ ಅಧಿಕಾರವನ್ನು ಅನುಭವಿಸುವ ಕೆಟ್ಟ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ, ಮುಸ್ಲಿಂರ ಒಲೈಕೆಯ ನಾಟಕವಾಡುವ ಕಾಂಗ್ರೆಸ್ ನಾಯಕರುಗಳು ಅವರ ೫ ಸಾವಿರ ಕೋಟಿ ವಕ್ತ್ಭೋರ್ಡ್ ಆಸ್ತಿಯನ್ನು ಕಬಳಿಸಿದ್ದಾರೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕಣ್ಣು ಒರೆಸಿಕೊಂಡು ಮೋಸಮಾಡಿಕೊಂಡು ಬರುತ್ತಿದ್ದಾರೆ, ನಾವುಗಳು ಎಸ್ಸಿ ಎಸ್ಟಿ ಸಮುದಾಯಕ್ಕೆ ಅವರ ಮೀಸಲಾತಿಯನ್ನು ಶೇ.೧೭ ಮತ್ತು ಶೇ.೭ ರಷ್ಟು ಹೆಚ್ಚಿಸಿದ್ದೇವೆ ಅದರೆ ಸಿದ್ದರಾಮಯ್ಯನವರಿಗೆ ಈ ಬದ್ದತೆ ಇರಲ್ಲಿಲ್ಲ, ಬಯಲು ಸೀಮೆಯ ಈ ಭಾಗಕ್ಕೆ ಎತ್ತಿನಹೊಳೆ ನೀರಾವರಿ ಯೋಜನೆಯನ್ನು ಪ್ರಾರಂಭಿಸಿದ್ದು ಬಿಜೆಪಿ ಸರ್ಕಾರ ಅದನ್ನು ಪೂರ್ಣಗೋಳಿಸುವುದು ನಾವೆ, ಈ ಯೋಜನೆಯ ಕಾಮಗಾರಿಗಾಗಿ ನನ್ನ ಅವದಿಯಲ್ಲಿ ೩ ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದೇನೆ, ರಾಜ್ಯದಲ್ಲಿ ೧೦೦ ಕ್ಕೂ ಹೆಚ್ಚು ಅಂಭೇಡ್ಕರ್ ವಸತಿ ಶಾಲೆ, ಕನಕ ವಸತಿ ಶಾಲೆಗಳನ್ನು ನಿರ್ಮಿಸಿದ್ದೇವೆ, ಈ ಕಾರಣಕ್ಕಾಗಿ ಬಿಜೆಪಿಗೆ ಮತ ನೀಡಿ ರಾಜ್ಯದ ಅಭಿವೃಧ್ದಿಗೆ ಕೈಜೋಡಿಸಿ ಎಂದು ಕರೆ ನೀಡಿದರು.
ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ನಂತರ ಆ ಅವದಿಯಲ್ಲಿ ಈ ಕ್ಷೇತ್ರವನ್ನು ಅಭಿವೃದ್ದಿಯತ್ತ ಕೊಂಡ್ಯೋಯಲ್ಲಾವುದು, ಈ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ರವರ ಸೋಲಿಗೆ ನೀವು ತಲೆ ಕೆಡಿಸಿಕೊಳ್ಳಬೇಡಿ, ಅವರನ್ನು ಕಾಂಗ್ರೆಸ್ ಪಕ್ಷದವರೇ ಸೋಲಿಸುತ್ತಾರೆ, ನಮ್ಮ ಅಭ್ಯರ್ಥಿ ಗೆಲುವಿಗೆ ನೀವುಗಳು ಶ್ರಮಪಟ್ಟರೆ ಸಾಕು ಈ ಭಾರಿ ಕೊರಟಗೆರೆ ಕ್ಷೇತ್ರದಲ್ಲಿ ಕಮಲ ಅರಳುತ್ತದೆ ಎಂದರು.
ರಾಜ್ಯದ ಭಾರಿ ನೀರಾವರಿ ಸಚಿವ ಗೋವಿಂದಕಾರಜೋಳ ಮಾತನಾಡಿ ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಷ್ಟು ಬೇರೆ ಯಾರು ಮಾಡಿಲ್ಲ, ಅವರನ್ನು ಲೋಕಸಬಾ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿ ಮಾಡಲ್ಲಿಲ್ಲ, ಕುಯಿಕ್ತಿಯಿಂದ ಸೋಲಿಸಿದರು, ಅವರ ಜೀವಿತಾವದಿಯಲ್ಲೆ ಸಂವಿಧಾನ ಬದಲಾಯಿಸಿದರು, ಅವರು ಮರಣ ಹೊಂದಿದಾಗ ಅವರ ಶವಸಂಸ್ಕಾರಕ್ಕೆ ದೆಹಲಿಯಲ್ಲಿ ಸ್ಥಳ ನೀಡಲ್ಲಿಲ್ಲ, ಆದರೆ ಈಗ ಅಂಬೇಡ್ಕರ್ ಬಗ್ಗೆ ನಾಟಕದ ಮಾತುಗಳನ್ನು ಕಾಂಗ್ರೆಸ್ ನವರು ಆಡುತ್ತಿದ್ದಾರೆ ಎಂದರು.
ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ತಿಂಗಳಿಗೆ ೮೦ ಸಾವಿರ ಬಡವರಿಗೆ ಉಚಿತ ಅಕ್ಕಿಯನ್ನು ನೀಡುತ್ತಿದೆ, ರಾಜ್ಯ ಸರ್ಕಾರವು ಸಹ ನೀಡುತ್ತಿರುವ ಅಕ್ಕಿಯಲ್ಲಿ ಕೇಂದ್ರ ಸರ್ಕಾರದ ಬಹುಪಾಲು ಹಣವಿದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಕಿಯ ಚೀಲವನ್ನು ಸಹ ನೀಡಲಿಲ್ಲ ಕೇಂದ್ರ ಸರ್ಕಾರದ ಹಣದ ಅಕ್ಕಿಯನ್ನು ಸಿದ್ದರಾಮಯ್ಯ ನೀಡಿದ್ದಾರೆ, ಬಡವರ ಅಭಿವೃಧ್ದಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಬಿ.ಸಿ.ನಾಗೇಶ್, ಶಾಸಕ ರಾಶೇಶ್‌ಗೌಡ, ಸಂಸದ ಜಿ.ಎಸ್.ಬಸವರಾಜು, ಮಾಜಿ ಸಂಸದ ಮುದ್ದಹನುಮೇಗೌಡ, ವಿಧಾನ ಪರಿಷ್‌ತ್ ಸದಸ್ಯರು ಗಳಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದಗೌಡ, ಜಿಲ್ಲಾ ಅಧ್ಯಕ್ಷರುಗಳಾದ ಬಿ.ಕೆ.ಮಂಜುನಾಥ್, ರವಿಕುಮಾರ್, ಮಂಡಲ ಅಧ್ಯಕ್ಷ ಪವನ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker