
ತಿಪಟೂರು : ಗ್ರಾಮೀಣ ಭಾಗದ ಮಹಿಳೆಯರ ಆರೋಗ್ಯ ಸುಧಾರಣೆಗೆ ದಿಟ್ಟ ಹೆಜ್ಜೆ ಇಟ್ಟಿದ್ದು, ಸೇವೆ ತಾಲ್ಲೂಕಿನಾದ್ಯಂತ ಶಾಶ್ವತವಾಗಿ ಸಫಲತೆಯನ್ನು ಕಾಣುವಂತಾಗಿ ಸ್ವಸ್ಥ ಸಮಾಜದ ನಿರ್ಮಾಣವಾಗಬೇಕಿದೆ ಎಂದು ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆಯಲ್ಲಿ ಮಂಗಳವಾರ ಜನಸ್ಪಂದನ ಟ್ರಸ್ಟ್ ಹಾಗೂ ದಿವಾಕರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ನಮ್ಮ ಆರೋಗ್ಯ ಕೇಂದ್ರವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಮನೆಯ ಜವಾಬ್ದಾರಿಯನ್ನು ತಾಯಂದಿರು ಹೊರುತ್ತಿದ್ದು, ಅವರ ಆರೋಗ್ಯ ಸಂಬಂಧಿತ ವಿಚಾರಗಳ ಬಗ್ಗೆ ಆಲೋಚನೆ ಮಾಡುವ ಅಗತ್ಯವಿದೆ. ತಾಯಂದಿರು ಯಾರ ಬಳಿಯಲ್ಲಿಯೂ ಆರೋಗ್ಯ ಸಂಬಂಧಿತ ವಿಚಾರಗಳನ್ನು ಚರ್ಚೆ ಮಾಡುವುದಿಲ್ಲ. ಅದಕ್ಕಾಗಿ ನಮ್ಮ ಆರೊಗ್ಯ ಕೇಂದ್ರದ ಮೂಲಕ ಅವರ ಆರೋಗ್ಯ ಸುಧಾರಣೆ ಮಾಡಲು ಹೊಸ ತಂತ್ರಜ್ಞಾನ ಬಳಕೆಯ ಮೂಲಕ ನುರಿತ ವೈದ್ಯರ ತಂಡ ಮುಂದಾಗಿರುವುದು ಶ್ಲಾಘನೀಯ ಕಾರ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚಚಿನ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದ್ದು ಅವುಗಳನ್ನು ತಡೆಗಟ್ಟಲು ಮುಂಜಾಗ್ರತೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ‘ನಮ್ಮ ಆರೋಗ್ಯ ಕೇಂದ್ರದ’ ಕಾರ್ಯ ಯಶಸ್ವಿಯಾಗಿ ನೆರವೇರಲಿ ಎಂದರು.
ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯದ ಸಮಸ್ಯೆಗೆ ತುತ್ತಾಗುತ್ತಿದ್ದು ಅದನ್ನು ತಡೆಗಟ್ಟುವ ಸಲುವಾಗಿ ‘ನಮ್ಮ ಆರೋಗ್ಯ ಕೇಂದ್ರದ’ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಪ್ರತಿಯೊಂದು ಮನೆಯಲ್ಲಿಯೂ ಮಹಿಳೆಯರ ಆರೋಗ್ಯದ ಸಮಸ್ಯೆಯ ಬಗ್ಗೆ ಯಾರಿಗೂ ಅರಿವೆ ಇರುವುದಿಲ್ಲ ಜೊತೆಗೆ ಮಾತನಾಡುವುದಿಲ್ಲ. ತಾಲ್ಲೂಕಿನಲ್ಲಿ ಕೇವಲ 8 ಮಂದಿ ಸ್ತಿçà ರೋಗ ತಜ್ಞರುಗಳು ಇದ್ದು 80 ಸಾವಿರ ಜನಸಂಖ್ಯೆಯನ್ನು ತಾಲ್ಲೂಕು ಹೊಂದಿದೆ. ಅದ್ದರಿಂದ ಮಹಿಳೆಯರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಹೊಸ ಪ್ರಯತ್ನ ಮಾಡಿದ್ದು ಎಲ್ಲರ ಸಹಕಾರ ಅಗತ್ಯವಾಗಿದೆ. ಪ್ರತಿಯೊಬ್ಬ ಮಹಿಳೆಯೂ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರುವ ಅಗತ್ಯವಿದ್ದು ನಿಮ್ಮ ಹಕ್ಕನ್ನು ನೀವೇ ಚಲಾಯಿಸುವಂತಾಗಬೇಕು ಎಂದು ತಿಳಿಸಿದರು.
ಆರ್ಟಿಸ್ಟ್ ಫಾರ್ ಹರ್ ಸಂಸ್ಥೆಯ ಅಧ್ಯಕ್ಷೆ ಡಾ.ಹೇಮಾ ದಿವಾಕರ್ ಮಾತನಾಡಿ ನಮ್ಮ ಸಂಸ್ಥೆಯೂ ವಿವಿಧ ರಾಜ್ಯಗಳಲ್ಲಿ ಮಹಿಳೆಯರ ಆರೋಗ್ಯ ಸಂಬಂಧಿತ ವಿಚಾರಗಳ ಬಗ್ಗೆ ಸಮಾಲೋಚನೆಯ ಮೂಲಕ ಬಗೆಹರಿಸುತ್ತಾ ಬಂದಿದೆ. ಕರ್ನಾಟಕದಲ್ಲಿಯೂ ಪ್ರಥಮವಾಗಿ ತಿಪಟೂರಿನಲ್ಲಿ ಪ್ರಾರಂಭಿಸಿದ್ದು ನೂರಾರು ವೈದ್ಯರುಗಳ ತಂಡ ಆನ್‌ಲೈನ್ ಮೂಲಕವೇ ಸಮಗ್ರ ಮಾಹಿತಿಯನ್ನು ಮಹಿಳೆಯರಿಗೆ ಆರೋಗ್ಯ ಸಖಿಯರ ಮೂಲಕ ಒದಗಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ, ಅರಸೀಕೆರೆ ಮಾಡಾಳು ಪೀಠದ ರುದ್ರಮುನಿ ಸ್ವಾಮೀಜಿ, ಆರ್ಟಿಸ್ಟ್ ಫಾರ್ ಹರ್ ಸಂಸ್ಥೆಯ ಅಧ್ಯಕ್ಷೆ ಡಾ.ಹೇಮಾ ದಿವಾಕರ್, ದಿವಾಕರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ವಿ.ದಿವಾಕರ್, ಹಾಲ್ಕುರಿಕೆ ಗ್ರಾ.ಪಂ.ಅಧ್ಯಕ್ಷ ಉಮಾಮಹೇಶ್, ಮಾಜಿ ಜಿ.ಪಂ.ಸದಸ್ಯ ಮಮತಾ, ಬಳುವನೆರಲು ಗ್ರಾ.ಪಂ.ಅಧ್ಯಕ್ಷೆ ಸುಶೀಲಮ್ಮ, ಸಾರ್ಥವಳ್ಳಿ ಗ್ರಾ.ಪ್ರಂ.ಸದಸ್ಯೆ ಎಸ್.ಜೆ.ಭವ್ಯ, ಮಡಿವಾಳ ಸಂಘದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಭವ್ಯ ಲೋಕೇಶ್, ಅನಿವಾಳದ ಗ್ರಾ.ಪಂ.ಸದಸ್ಯೆ ಪಿ.ಬಿ.ಸುಮಲತಾ, ನೆಲ್ಲಿಕೆರೆ ಗ್ರಾ.ಪಂ.ಅಧ್ಯಕ್ಷೆ ಪುಟ್ಟಮ್ಮ, ಸಾರ್ಥವಳ್ಳಿ ಗ್ರಾ.ಪಂ. ಸದಸ್ಯೆ ನೇತ್ರಾವತಿ ರಮೇಶ್ ಇದ್ದರು.