ಡಾ. ಬಿ.ಆರ್.ಅಂಬೇಡ್ಕರ್‌ರವರು ಇಂದಿನ ಪ್ರಜಾಸತ್ತಾತ್ಮಕ ನೆಮ್ಮದಿಗೆ ಕಾರಣರು : ಶಿಕ್ಷಕ ಶ್ಯಾಮಣ್ಣ
ಶ್ರೀ ಉಮಾಪ್ರಗತಿ ವಿದ್ಯಾಸಂಸ್ಥೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್‌ರವರ 66ನೇ ಪರಿನಿರ್ವಾಣ ಸ್ಮರಣೆ

ತುಮಕೂರು : ಭಾರತೀಯ ಸಮಾಜದಲ್ಲಿ ಅಬೇಡ್ಕರ್‌ರವರು ಚಿರಸ್ಮರಣೀಯ ಏಕೆಂದರೆ ನಮ್ಮೆಲ್ಲರಿಗೂ ಸಂವಿಧಾನವನ್ನು ತಂದುಕೊಟ್ಟು ಇಂದಿನ ಪ್ರಜಾಸತ್ತಾತ್ಮಕ ನೆಮ್ಮದಿಗೆ ಕಾರಣರು. ಮೀಸಲಾತಿ ಜನಕರಾಗಿದ್ದಾರೆ ಎಂದು ಮುಖ್ಯ ಶಿಕ್ಷಕ ಶ್ಯಾಮಣ್ಣನವರು ತಿಳಿಸಿದರು. ಅವರು ಶ್ರೀ ಉಮಾಪ್ರಗತಿ ವಿದ್ಯಾಸಂಸ್ಥೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ರವರ 66ನೇ ಪರಿನಿರ್ವಾಣ ಸ್ಮರಣೆ ಕಾರ್ಯಕ್ರಮದಲ್ಲಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಕೆಂಪರಾಜ್ ಕೊಡಿಯಾಲರವರು ಮಾತನಾಡುತ್ತಾ ಡಾ. ಬಿ.ಆರ್.ಅಂಬೇಡ್ಕರ್ ಭಾರತದ ಇತಿಹಾಸ ಮತ್ತು ಜ್ಞಾನ ಬಹುಶಃ ಭಾರತ ದೇಶದಲ್ಲಿ ಅಂಬೇಡ್ಕರ್ ಹುಟ್ಟಲಿಲ್ಲ ಅಂದಿದ್ರೆ ಭಾರತ ಕಗ್ಗತ್ತಲಿನ ದೇಶವಾಗುತ್ತಿತ್ತು. ಇವರು ಹುಟ್ಟಿ ಬೆಳಕು ಕೊಡೋ ಸೂರ್ಯನಾದರು. ಅನೇಕ ಅಸ್ಪೃಶ್ಯತೆಯ ನೋವುಂಡು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರು, ಮಹಿಳೆಯರು ಮೂಕ ವೇದನೆಗಳಿಗೆ ಧ್ವನಿಗೂಡಿಸುತ್ತಾ ಒಂದು ಶಕ್ತಿಯಾಗಿದ್ದಾರೆ. ಅಂಬೇಡ್ಕರ್‌ರವರು ಡಿಸೆಂಬರ್4, 1956ರಂದು ಸಂಸತ್ತಿನ ಕಲಾಪದಲ್ಲಿ ಭಾಗಿಯಾಗಿ ಡಿಸೆಂಬರ್ 5ನೇ ತಾರೀಕು ಮನೆಯಲ್ಲಿ ಉಳಿದು ಬರವಣಿಗೆಯಲ್ಲಿ ತಲ್ಲೀನರಾಗಿ ರಾತ್ರಿ 8ರ ಹೊತ್ತಿಗೆ ಮುಗಿಸಿ ಬುದ್ಧ ಮತ್ತು ದಮ್ಮ ಗ್ರಂಥದ ಬಗ್ಗೆ ತನ್ನ ಆಪ್ತ ಕಾರ್ಯದರ್ಶಿ ನಾನಾಕ್ ಚಂದು ಶತ್ತುರೊಡನೆ ಚರ್ಚಿಸಿ ಮಲಗಿದವರು ಮತ್ತೆ ಮೇಲೇಳಲಿಲ್ಲ. ಡಿಸೆಂಬರ್ 6ರ ಬೆಳಿಗ್ಗೆ 6.30ಕ್ಕೆ ತಮ್ಮ ಮಡದಿ ಸವಿತ ಅಂಬೇಡ್ಕರ್ ಎಬ್ಬಿಸಲು ಪ್ರಯತ್ನಿಸಿದರು ಅವರು ಏಳಲಿಲ್ಲ. ಅವರು ಚಿರನಿದ್ರೆಗೆ ಜಾರಿದ್ದರು. ಅವರು ಇಲ್ಲವಾದರೂ ಅವರು ಬಿಟ್ಟಹೋಗಿರುವ ಅವರ ಸಂವಿಧಾನ ಮತ್ತು ಸಿದ್ಧಾಂತಗಳು ಇವತ್ತಿಗೂ ಪ್ರಸ್ತುತ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಸಯ್ಯದ್ ಅಕ್ರಂರವರು, ಅಂಬೇಡ್ಕರ್ 10 ಸಂವಿಧಾನಗಳನ್ನು ಓದಿ ನಮಗೆ ಮಹತ್ತರವಾದ ವಿಶ್ವವೇ ಮೆಚ್ಚುವ ಸಂವಿಧಾನವನ್ನು ತಂದುಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲೆ ಸಂಸ್ಥೆಯ ಕಾರ್ಯದರ್ಶಿಗಳಾದ ಮನು, ಪಿ.ಯು ಪ್ರಾಂಶುಪಾಲರಾದ ಗುರುಮಲ್ಲು, ಅಧೀಕ್ಷಕರಾದ ಜಯಪ್ರಕಾಶ್ಮ ಸಹಾಯಕ ಪ್ರಾಧ್ಯಾಪಕರಾದ ಡಾ. ಹರ್ಷ, ನಾಗರಾಜು ವಿ., ಗ್ರಂಥಪಾಲಕರಾದ ಶ್ರೀಮತಿ ತನುಜ, ಶಿಕ್ಷಕರಾದ ಮಲ್ಲಿಕಾರ್ಜುನ್, ನಾಗರಾಜು, ಪುಟ್ಟರುದ್ರಯ್ಯ ಉಪಸ್ಥಿತರಿದ್ದರು.
ಮಂಜಪ್ಪ ಸ್ವಾಗತಿಸಿದರೆ, ನಾಗರಾಜು ವಂದಿಸಿದರು.